ಮುಜಾಫರ್ನಗರ: ಉತ್ತರ ಪ್ರದೇಶದ ಮುಜಾಫ್ಫರನಗರ ಜಿಲ್ಲೆಯ ಖಾಪ್ ಪಂಚಾಯತ್ ಮಹಿಳೆಯರಿಗೆ ಜೀನ್ಸ್ ಹಾಗೂ ಪುರುಷರಿಗೆ ಶಾರ್ಟ್ಸ್ ಧರಿಸುವುದನ್ನು ನಿರ್ಬಂಧಿಸಿದೆ.
'ಜೀನ್ಸ್ ಉಡುಗೆ(Jeans)ಯು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದರ ಬದಲು ಜನರು ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು' ಎಂದೂ ರಜಪೂತ್ ಸಮುದಾಯದ ಖಾಪ್ ಪಂಚಾಯತ್ ಸಲಹೆ ನೀಡಿದೆ.
ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿದ ನಂತರ, ರಸ್ತೆ ಅಪಘಾತದಲ್ಲಿ ಬಾಲಕಿಯ ತಂದೆ ಸಾವು
ಛಾತ್ರ್ವಾಲ್ ಪೊಲೀಸ್ ಠಾಣೆ(Police Station)ಯ ವ್ಯಾಪ್ತಿಯ ಪಿಪಲ್ಷಾ ಗ್ರಾಮದಲ್ಲಿ ಮಾರ್ಚ್ 2ರಂದು ಪಂಚಾಯತ್ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಖಾಪ್ ಪಂಚಾಯತ್ನ ನಿರ್ಧಾರವನ್ನು ತಿಳಿಸಿದ ಸಮುದಾಯದ ಮುಖಂಡ ಹಾಗೂ ಕಿಸಾನ್ ಸಂಘದ ಮುಖ್ಯಸ್ಥ ಠಾಕೂರ್ ಪುರಣ್ ಸಿಂಗ್ 'ಮಹಿಳೆಯರು ಜೀನ್ಸ್ ಧರಿಸುವುದನ್ನು ಹಾಗೂ ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ' ಎಂದರು.
ಆಧಾರ್ ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂದು ಮರೆತಿದ್ದೀರಾ ? ಇಲ್ಲಿದೆ ಕಂಡು ಕೊಳ್ಳುವ ರೀತಿ..
'ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆ. ಅದರ ಬದಲಾಗಿ ಸಾಂಪ್ರದಾಯಿಕ ಉಡುಗೆ(Dress)ಗಳಾದ ಸೀರೆ, ಘಾಘ್ರಾ ಮತ್ತು ಸಲ್ವಾರ್ ಕಮೀಜ್ ಧರಿಸಬೇಕು. ಈ ಆಜ್ಞೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದು ಅಲ್ಲದೇ, ಸಮುದಾಯದಿಂದ ಬಹಿಷ್ಕಾರವನ್ನೂ ಹಾಕಲಾಗುವುದು' ಎಂದೂ ಅವರು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರೇಕಿಲ್ಲ..?
ಮುಂಬರುವ ಪಂಚಾಯತಿ ಚುನಾವಣೆ(Election)ಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನೂ ಖಾಪ್ ಪಂಚಾಯತ್ ವಿರೋಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.