ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫುಲ್ ಆಕ್ಟೀವ್ ಆಗಿದ್ದಾರೆ. ರಾಜ್ಯಾದ್ಯಂತ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದ ಇದೀಗ ಮತ್ತಷ್ಟು ಆಕ್ಟೀವ್ ಆಗಿದ್ದು, ಬ್ರೇಕಿಂಗ್ ನ್ಯೂಸ್ ಕೊಡಲು ಹೊರಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಕೊಡೋದು ನ್ಯೂಸ್ ಚಾನೆಲ್ಗಳು ಅಲ್ವಾ.. ಅಂತಾ ಯೋಚಿಸ್ತಿದ್ದೀರಾ? ಆದರೆ ಈ ಬಾರಿ ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಕೊಡೋದಿಕ್ಕೆ ತಯಾರಾಗಿದ್ದಾರೆ. ಹಾಗಂತ ಅವರೇ ಟ್ವಿಟರ್'ನಲ್ಲಿ ಹೇಳಿದ್ದಾರೆ. ಇಂದು ಸಂಜೆ 5 ಗಂಟೆಗೆ ಬ್ರೆಕಿಂಗ್ ನ್ಯೂಸ್ ಇದೆ. ಎಲ್ಲರೂ ಕೇಳಲು ಸಿದ್ದವಾಗಿರಿ ಎಂದು ಯಡಿಯೂರಪ್ಪ ಗುರುವಾರ ಸಂಜೆ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಖತ್ ವೈರಲ್ ಆಗಿದೆ.
Breaking News Tomorrow @ 5:00pm#BreakingNews pic.twitter.com/VwIeBDA0PO
— B.S. Yeddyurappa (@BSYBJP) March 15, 2018
ಗುರುವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಇತರ ಮುಖಂಡರು ತಮ್ಮ ವಿರುದ್ಧ ನೀಡುತ್ತಿದ್ದ ಅವಹೇಳನಕಾರಿ ಹೇಳಿಕೆಗಳಿಗೆ ಹೈಕೋರ್ಟ್ ಮೂಲಕ ಬ್ರೇಕ್ ಹಾಕಿದ್ದ ಯಡಿಯೂರಪ್ಪ ಇಂದು ಸಂಜೆಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಬ್ರೇಕಿಂಗ್ ಮೂಲಕ ಯಡ್ಡಿ ಯಾವ ಬಾಂಬ್ ಎಲ್ಲಿ ಸಿಡಿಸಲು ಹೊರಟಿದ್ದಾರೆ ಎಂಬುದನ್ನು ತಿಳಿಯಲು ಇಂದು ಸಂಜೆ 5 ಗಂಟೆಯವರೆಗೆ ಕಾದು ನೋಡಬೇಕಿದೆ.