Petrol-Diesel Latest News- ಪ್ರಸ್ತುತ ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಮುಗಿಲು ಮುಟ್ಟಿವೆ. ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದ ಬಳಿಕ ಸರ್ಕಾರ ಕೂಡ ಎಚ್ಚೆತ್ತುಕೊಂಡಿದೆ.
ನವದೆಹಲಿ: Petrol-Diesel Latest News - ದೇಶದಲ್ಲಿ ಸದ್ಯ ಪೆಟ್ರೋಲ್ ಡೀಸೆಲ್ (Diesel Rate Today) ಬೆಲೆ ಮುಗಿಲು ಮುಟ್ಟಿವೆ. ಪೆಟ್ರೋಲ್ (Petrol Rate Today) 100 ರೂಪಾಯಿಗಳನ್ನು ತಲುಪಿದ ನಂತರ ಸರ್ಕಾರವೂಎಚ್ಚೆತ್ತುಕೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman), ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ತೆರಿಗೆ ಕಡಿತವನ್ನು ಪ್ರತಿಪಾದಿಸುತ್ತಿದ್ದಾರೆ, ಆದರೆ ಇದಕ್ಕೆ ಯಾವಾಗ ಪರಿಹಾರ ಸಿಗುತ್ತದೆ ಎಂಬ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.
ಇದನ್ನೂ ಓದಿ-ಬಿಗ್ ನ್ಯೂಸ್! EPF ಬಡ್ಡಿ ಮೇಲಿನ ತೆರಿಗೆ ಬಗ್ಗೆ ವಿತ್ತ ಸಚಿವರ ಮಹತ್ವದ ಹೇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. 50 ಲೀಟರ್ ಪೆಟ್ರೋಲ್ ಸಂಪೂರ್ಣ ಉಚಿತ! - ಆದರೆ, ನಿರಾಶರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ಇಂದು ನಿಮಗೆ ಹೇಳಲು ಹೊರಟಿರುವ ಸ್ಕೀಮ್ ವೊಂದರ ಲಾಭ ಪಡೆದು ನೀವೂ ಕೂಡ ವರ್ಷಕ್ಕೆ 50 ಲೀಟರ್ ಪೆಟ್ರೋಲ್ ಉಚಿತವಾಗಿ ಪಡೆಯಬಹುದು. ಆದರೆ, ಇದಕ್ಕಾಗಿ ನಿಮ್ಮ ಬಳಿ IndianOil HDFC Bank Credit Card ಇರಬೇಕು ಹಾಗೂ ಅದರಿಂದಲೇ ನೀವು ಪೇಮೆಂಟ್ ಕೂಡ ಮಾಡಬೇಕು. HDFC ವೆಬ್ ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ, ಈ ಕ್ರೆಡಿಟ್ ಕಾರ್ಡ್ ನಿಂದ ನೀವು ನಿಮ್ಮ ವಾಹನಕ್ಕೆ ಇಂಧನ ಖರೀದಿಸಿದರೆ, ನಿಮಗೆ ಫ್ಯೂಲ್ ಪಾಯಿಂಟ್ ಗಳು ಸಿಗಲಿವೆ.
2. ಈ ಪಾಯಿಂಟ್ ಗಳು ಹೇಗೆ ಸಿಗುತ್ತವೆ? - ಈ ಕ್ರೆಡಿಟ್ ಕಾರ್ಡ್‌ಬಳಸಿ ನೀವು ಪೆಟ್ರೋಲ್ ಖರೀದಿಸಿದರೆ, ನೀವು ಖರ್ಚು ಮಾಡುವ ಹಣದ 5% ಅನ್ನು ಫ್ಯೂಲ್ ಪಾಯಿಂಟ್ ಗಳಾಗಿ ನೀಡಲಾಗುತ್ತದೆ. ಇಂಡಿಯನ್ ಆಯಿಲ್ ಮಳಿಗೆಗಳಲ್ಲಿ ಮೊದಲ ಆರು ತಿಂಗಳುಗಳವರೆಗೆ ಪ್ರತಿತಿಂಗಳು ಗರಿಷ್ಠ 50 ಫ್ಯೂಲ್ ಪಾಯಿಂಟ್ ನೀಡಲಾಗುತ್ತದೆ. ಆರು ತಿಂಗಳ ನಂತರ, ನೀವು ಪ್ರತಿ ತಿಂಗಳು ಗರಿಷ್ಠ 150 ಫ್ಯೂಲ್ ಪಾಯಿಂಟ್ ಗಳನ್ನು ಪಡೆಯಬಹುದು. ಇದಲ್ಲದೆ, ಇತರ ಶಾಪಿಂಗ್‌ಗೆ 150 ರೂಪಾಯಿ ವೆಚ್ಚ ಮಾಡಿದರೆ ನಿಮಗೆ 1 ಫ್ಯೂಲ್ ಪಾಯಿಂಟ್ ನಿಮ್ಮ ಖಾತೆಗೆ ಸೇರುತ್ತದೆ. ಈ ಈ ಫ್ಯೂಲ್ ಪಾಯಿಂಟ್ ಗಳನ್ನು ರಿಡೀಮ್ ಮಾಡುವ ಮೂಲಕ ನೀವು ವಾರ್ಷಿಕವಾಗಿ 50 ಲೀಟರ್ ಪೆಟ್ರೋಲ್- ಡೀಸೆಲ್ ಪಡೆಯಬಹುದು.
3. IndianOil HDFC Bank Credit Card ಶುಲ್ಕ ಎಷ್ಟು? - ಆದರೆ ಈ ಕಾರ್ಡ್ ನಿಮಗೆ ಉಚಿತವಾಗಿ ಸಿಗುವುದಿಲ್ಲ. ಈ ಕಾರ್ಡ್ ಗೆ ನೀವು ಅಪ್ಲೈ ಮಾಡಿದಾಗ ನಿಮ್ಮಿಂದ ಸದಸ್ಯತ್ವದ ರೂಪದಲ್ಲಿ ರೂ.500 ಪಡೆಯಲಾಗುತ್ತದೆ. ಇದಕ್ಕಾಗಿ ನೀವು ಪ್ರತ್ಯೇಕ GST ಪಾವತಿಸಬೇಕು. ಈ ಕಾರ್ಡ್ ಗೆ ಸಂಬಂಧಿಸಿದ ಎಲ್ಲ ಅಧಿಕಾರಗಳು ಬ್ಯಾಂಕ್ ಗೆ ಸೀಮಿತವಾಗಿವೆ. 21 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳು ಈ ಕಾರ್ಡ್ ಗೆ ಅಪ್ಲೈ ಮಾಡಬಹುದು. ಒಂದು ವೇಳೆ ನೀವು ನೌಕರಿ ಮಾಡುತ್ತಿದ್ದಾರೆ, ನಿಮ್ಮ ಪ್ರತಿತಿಂಗಳ ಕನಿಷ್ಠ ಆದಾಯ ರೂ.10 ಸಾವಿರ ಆಗಿರಬೇಕು. ಒಂದು ವೇಳೆ ನೀವು ಈ ಕ್ರೆಡಿಟ್ ಕಾರ್ಡ್ ಅನ್ನು ಕಳೆದುಕೊಂಡರೆ, 24 ಗಂಟೆಗಳೊಳಗೆ ಅದನ್ನು ಬ್ಯಾಂಕ್ ಗೆ ವರದಿ ಮಾಡಿ. ಹೊಸ ಕಾರ್ಡ್ ಗಾಗಿ ನಿಮ್ಮಿಂದ ಯಾವುದೇ ರೀತಿಯ ಶುಲ್ಕ ಪಡೆಯಲಾಗುವುದಿಲ್ಲ.
4. ಈ ನಗರಗಳಲ್ಲಿ ಆಫರ್ ಇಲ್ಲ - ಈ ಕ್ರೆಡಿಟ್ ಕಾರ್ಡ್ ಸೌಲಭ್ಯ ಕೆಲ ಆಯ್ದ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ನೀವು ಬೆಂಗಳೂರು, ದೆಹಲಿ, ಗುರುಗ್ರಾಮ್, ಮುಂಬೈ (ಠಾಣೆ, ವಾಶಿ ಸೇರಿದಂತೆ), ಪುಣೆ, ಹೈದ್ರಾಬಾದ್-ಸಿಕಿಂದರಾಬಾದ್ ನಗರಗಳಲ್ಲಿ ವಾಸಿಸುತ್ತಿದ್ದರೆ, ನಿಮಗೆ ಈ ಕಾರ್ಡ್ ಉಪಯೋಗಿಸಲು ಬರುವುದಿಲ್ಲ. HDFC ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಒಂದು ವೇಳೆ ನೀವು ಬಿಸಿನೆಸ್ ಮಾಡುತ್ತಿದ್ದು, ನಿಮ್ಮ ವಾರ್ಷಿಕ ಆದಾಯ 6 ಲಕ್ಷ ರೂ ಇದ್ದಾರೆ ಮಾತ್ರ ನೀವು ಈ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು.