ಮುಂಬೈ : ಮತ್ತೊಮ್ಮೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಲು ಮಹರಾಷ್ಟ್ರದ ಮಹಾ ವಿಕಾಸ್ ಆಘಾಡಿ (Maha Vikas Aaghadi)ಚಿಂತನೆ ನಡೆಸುತ್ತಿದೆ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಾರ್ಚ್‌ನಲ್ಲಿ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಬಹುದಾದ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ ಈ ಕುರಿತು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಶಾಸಕಾಂಗ ಸ್ಪೀಕರ್ ನಾನಾ ಪಟೋಲೆ (Nana Patole) ಅವರು ಇವಿಎಮ್ ಸೇರಿದಂತೆ ಮತಪತ್ರದ ಮೂಲಕ ಚುನಾವಣೆ ನಡೆಸಲು ಕರಡು ಸಿದ್ಧಪಡಿಸುವಂತೆ ಉದ್ಧವ್ ಠಾಕ್ರೆ (Uddhav Thackeray) ಸರ್ಕಾರಕ್ಕೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. "ಕರಡು ಸಿದ್ಧವಾಗಿದ್ದರೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬಹುದು" ಎಂದು ಪಟೋಲೆ ಹೇಳಿದ್ದಾರೆ.
ಆದರೆ, ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುತ್ತಿರುವ ಮಸೂದೆ ರಾಜ್ಯ ವಿಧಾನಸಭೆ ಹಾಗೂ ಸ್ಥಳೀಯ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿರಲಿದೆ. ಒಂದು ವೇಳೆ ಮಹಾರಾಷ್ಟ್ರದ ಉದ್ಧವ್ ನೇತೃತ್ವದ ಸರ್ಕಾರ ಇದಕ್ಕೆ ಸಮ್ಮತಿಸಿದರೆ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ EVM ಸೇರಿದಂತೆ ಬ್ಯಾಲೆಟ್ ಪೇಪರ್ ಗಳ ಮೂಲಕ ಕೂಡ ಮತದಾನ ನಡೆಯಲಿವೆ ಹಾಗೂ ಈ ರೀತಿ ಮಾಡಿದ ಮೊದಲ ರಾಜ್ಯ ಮಹಾರಾಷ್ಟ್ರವಾಗಿರಲಿದೆ.
ಇದನ್ನು ಓದಿ- ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣಕ್ಕೆ ಇಳಿಯಲಿರುವ ಶಿವಸೇನೆ..!
ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರುವವರಿಗೆ ಇದು ಸಂತಸ ನೀಡಲಿದೆ - ಪಟೋಲೆ
ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿಯ ಮೂರು ಘಟಕ ಪಕ್ಷಗಳಾಗಿರುವ ಶಿವಸೇನೆ (Shiv Sena), NCP ಹಾಗೂ ಕಾಂಗ್ರೆಸ್ (INC) ಈ ವಿಷಯದ ಕುರಿತು ಒಮ್ಮತ ಹೊಂದಿವೆ ಎನ್ನಲಾಗಿದೆ. ಈ ರೀತಿಯ ಮಸೂದೆಯ ಕಾನೂನಾತ್ಮಕ ಮಾನ್ಯತೆಯ ಕುರಿತು ಮಾತನಾಡಿರುವ ಪಟೋಲೆ, "ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸಲು ಈ ರೀತಿಯ ಕಾನೂನು ಸಿದ್ಧಪಡಿಸಲು ಸಂವಿಧಾನದ ಅನುಚ್ಛೇದ 328ರ ಅಡಿ ರಾಜ್ಯ ಸರ್ಕಾರಕ್ಕೆ ಪವರ್ ನೀಡಲಾಗಿದೆ. ಚುನಾವಣಾ ಅಧಿಕಾರಿಗಳು ಸೇರಿದಂತೆ ಇದಕ್ಕೆ ಸಂಬಂಧಿಸಿದ ಹಲವರ ಜೊತೆಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ" ಎಂದಿದ್ದಾರೆ.
ಇದನ್ನು ಓದಿ- ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು?
"ಸಂವಿಧಾನದ ಪರಿಚ್ಛೇದ 328 ರಾಜ್ಯ ಸರ್ಕಾರಗಳಿಗೆ ಈ ರೀತಿಯ ಕಾನೂನು ಜಾರಿಗೆ ತರುವ ಅಧಿಕಾರ ನೀಡುತ್ತದೆ. ಚುನಾವಣೆಗಳು EVMಗಳ ಮೂಲಕ ನಡೆಸಬೇಕೇ ಅಥವಾ ಬ್ಯಾಲೆಟ್ ಪೆಪರ್ ಮೂಲದ ನಡೆಸಬೇಕೆ ಎಂಬುದರ ನಿರ್ಣಯ ರಾಜ್ಯ ಸರ್ಕಾರ ಕೈಗೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಇದು ನಿಶ್ಚಿತವಾಗಿಯೂ ಒಂದು ಸಂತಸದ ಸಂಗತಿಯಾಗಿರಲಿದೆ" ಎಂದು ಪಟೋಲೆ ಹೇಳಿದ್ದಾರೆ. ಪಟೋಲೆ ಅವರ ಈ ಹೇಳಿಕೆಗೆ NCP ಮುಖಂಡ ಮಾಜಿದ್ ಮೆಮನ್ (Majid Memon) ಅವರೂ ಕೂಡ ಪುಷ್ಟಿಕರಿಸಿದ್ದು, 'ಮತದಾನದ ಹಕ್ಕನ್ನು ಚಲಾಯಿಸುವವರ ವಿಶ್ವಾಸ ಪ್ರಮುಖವಾಗಿದೆ' ಎಂದಿದ್ದಾರೆ.
ಇದನ್ನು ಓದಿ- Uddhav Thackeray: 'ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.