ನವದೆಹಲಿ: ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತೆಲಗು ದೇಶಂ ಪಕ್ಷದ ಸಂಸದರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
2014 ರಲ್ಲಿ ತೆಲಂಗಾಣ ರಚನೆಯ ಸಮಯದಲ್ಲಿ ಟಿಡಿಪಿ ಸಂಸದರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು. ಆ ಸಮಯದಲ್ಲಿ ಹೈದರಾಬಾದ್ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಭರವಸೆ ನೀಡಿದ್ದವು. ಭರವಸೆಯನ್ನು ಪೂರೈಸುವ ಸಮಯ ಇದು ಎಂದು ರಾಹುಲ್ ಗಾಂಧಿ ಹೇಳಿದರು. ನಾವು ಆಂಧ್ರಪ್ರದೇಶದ ವಿಶೇಷ ವರ್ಗ ಸ್ಥಿತಿಗೆ ಬೆಂಬಲ ನೀಡುತ್ತೇವೆ ಎಂದು ನಮ್ಮ ನಿಲುವು ಸ್ಪಷ್ಟವಾಗಿದೆ. 2019 ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ನಾವು ಮಾಡಬೇಕಾದ ಮೊದಲ ಕೆಲಸ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದು ಎಂದು ರಾಹುಲ್ ತಿಳಿಸಿದ್ದಾರೆ.
"ನಾವು ಒಟ್ಟಿಗೆ ನಿಂತಿದ್ದರೆ, ಆಂಧ್ರಪ್ರದೇಶದ ಜನರಿಗೆ ಯಾವ ಸಮಯದಲ್ಲಾದರೂ ಅವರಿಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮನವೊಲಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ" ಎಂದು ರಾಹುಲ್ ಇದೇ ಸಮಯದಲ್ಲಿ ತಿಳಿಸಿದರು.
ವ್ಯಾಪಕವಾದ ಕಷ್ಟ ಭೂಪ್ರದೇಶ, ಆರ್ಥಿಕ ಅಥವಾ ಮೂಲಸೌಕರ್ಯ ಹಿಂದುಳಿದಿರುವಿಕೆ, ಕಡಿಮೆ ಜನಸಂಖ್ಯಾ ಸಾಂದ್ರತೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ವಿಶೇಷ ಸ್ಥಾನಮಾನವನ್ನು ರಾಜ್ಯಕ್ಕೆ ನೀಡಲಾಗುತ್ತದೆ. ವಿಶೇಷ ಸ್ಥಾನಮಾನವನ್ನು ನೀಡುವ ಪ್ರಾಥಮಿಕ ಪ್ರಯೋಜನವೆಂದರೆ ನಿಧಿಯ ಹಂಚಿಕೆ ಹೆಚ್ಚಳ ಮತ್ತು ಸಾಲ ಪಡೆಯುವಲ್ಲಿ ಸರಾಗತೆ ಆಗಿದೆ ಎಂದು ರಾಹುಲ್ ತಿಳಿಸಿದರು.