Cabinet Expansion : ಆ ಸುದ್ದಿ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗೆ ಶಾಕ್..! ಆಗಿದ್ದೇನು ಗೊತ್ತಾ..?

ಅಬಕಾರಿ ಸಚಿವ ಹೆಚ್ ನಾಗೇಶ್ ಗೆ  ಕೊಕ್ ಕೊಟ್ಟು, ಆ ಸ್ಥಾನಕ್ಕೆ ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್  ಅವರನ್ನು ತರಲು ಯಡಿಯೂರಪ್ಪ ಸಿದ್ದತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗಾಬರಿಯಾಗಿದ್ದಾರೆ.

Written by - Zee Kannada News Desk | Last Updated : Jan 11, 2021, 02:03 PM IST
  • ಹೊರಗಿನವರ ಕೋಟಾದಲ್ಲಿ ಸಂಪುಟ ಸೇರುತ್ತಾರಾ ಎನ್ ಮಹೇಶ್..?ರಾಜಕೀಯ ವಲಯದಲ್ಲಿ ಸುದ್ದಿ
  • ಈ ಸುದ್ದಿ ಕೇಳಿ ಶಾಕ್ ಆಗಿರುವ ಅಬಕಾರಿ ಸಚಿವ ಹೆಚ್ ನಾಗೇಶ್
  • ಯಡಿಯೂರಪ್ಪ ಮಾತು ತಪ್ಪಲ್ಲ, ಸಂಪುಟದಿಂದ ಕೈಬಿಡಲ್ಲ ಎಂದು ಹೇಳಿದ ಸಚಿವ ಹೆಚ್ ನಾಗೇಶ್
Cabinet Expansion : ಆ ಸುದ್ದಿ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗೆ ಶಾಕ್..! ಆಗಿದ್ದೇನು ಗೊತ್ತಾ..? title=
ಯಡಿಯೂರಪ್ಪ ಮಾತು ತಪ್ಪಲ್ಲ, ಸಂಪುಟದಿಂದ ಕೈಬಿಡಲ್ಲ ಎಂದು ಹೇಳಿದ ಸಚಿವ ಹೆಚ್ ನಾಗೇಶ್

ಬೆಂಗಳೂರು : ಸಂಪುಟ ವಿಸ್ತರಣೆ (Cabinet Expansion) ಮುಹೂರ್ತ ಫಿಕ್ಸ್ ಆಗುತ್ತಿರುವಂತೆಯೇ ರಾಜಕೀಯ ಕಾರಿಡಾರಿನಲ್ಲಿ ಸಂಚಲನ ಸೃಷ್ಟಿಯಾಗಿದೆ.  ಅಬಕಾರಿ ಸಚಿವ ಹೆಚ್ ನಾಗೇಶ್ ಗೆ (H Nagesh) ಕೊಕ್ ಕೊಟ್ಟು, ಆ ಸ್ಥಾನಕ್ಕೆ ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್ (N Mahesh) ಅವರನ್ನು ತರಲು ಯಡಿಯೂರಪ್ಪ ಸಿದ್ದತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗಾಬರಿಯಾಗಿದ್ದಾರೆ. ವಿಶ್ವಾಸಮತ ಯಾಚನೆ ವೇಳೆ ಗೈರುಹಾಜರಾಗುವ ಮೂಲಕ ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಬಿಜೆಪಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದರು. ಆ ಋಣ ಸಂದಾಯ ಮಾಡಲು, ಯಡಿಯೂರಪ್ಪ ಎನ್ ಮಹೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. 

“ಯಡಿಯೂರಪ್ಪ ಮಾತು ತಪ್ಪಲ್ಲ, ಸಂಪುಟದಿಂದ ಕೈಬಿಡುವುದಿಲ್ಲ”– ಸಚಿವ ಹೆಚ್ ನಾಗೇಶ್
ತಮ್ಮನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಹೆಚ್ ನಾಗೇಶ್ (H Nagesh), ಕಷ್ಟದ ಸಂದರ್ಭದಿಂದ ಮೊದಲ್ಗೊಂಡು  ನಾನು ಯಡಿಯೂರಪ್ಪನವರ (Yadiyurappa) ಜೊತೆಗಿದ್ದೇನೆ. ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸವಿದೆ. ಅವರ ನಂಬಿಕೆಯ ಮೇಲೆಯೇ ನಾನು ರಾಜೀನಾಮೆ ನೀಡಿದ್ದೆ. ಸರ್ಕಾರ ರಚನೆಯಲ್ಲಿ ನಾನು ಕೈಹಿಡಿದಿದ್ದೇನೆ. ನನ್ನನ್ನು ಸಂಪುಟದಿಂದ (Cabinet) ಕೈ ಬಿಡಲಿದ್ದಾರೆ ಎಂಬ ಸುದ್ದಿಕೇಳಿ ಶಾಕ್ ಆಗಿದ್ದೇನೆ. ರಾಜೀನಾಮೆ ನೀಡುವ ಸಂದರ್ಭ ಉದ್ಭವ ಆಗಲ್ಲ. ಸಿಎಂ ಇಲ್ಲಿಯವರೆಗೆ ಮಾತು ತಪ್ಪಿಲ್ಲ  ಎಂದು ಹೇಳಿದ್ದಾರೆ. 

ಇದನ್ನೂ ಓದಿ : Cabinet Expansion ಸಚಿವನಾಗಬಾರದು ಎಂದು ನಿರ್ಣಯ ಮಾಡಿದ್ದೇನೆ : ಯತ್ನಾಳ್

ಇದೇ ವೇಳೆ ಮಾತನಾಡಿದ ಅವರು ಎನ್ ಮಹೇಶ್ (N Mahesh) ಅವರನ್ನು ಸಂಪುಟಕ್ಕೆ ತಂದರೆ, ಅದು ಖುಷಿಯ ಸಂಗತಿ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರು ನನ್ನ ಕೈಬಿಡಲ್ಲ ಎಂಬ ವಿಶ್ವಾಸ  ಅವರಲ್ಲಿದೆ. ಹೊರಗಿನವರ ಕೋಟಾದಲ್ಲಿ ಹೆಚ್ ನಾಗೇಶ್ (H Nagesh) ಬದಲಿಗೆ ಎನ್ ಮಹೇಶ್ ಅವರಿಗೆ ಯಡಿಯೂರಪ್ಪ ಮಣೆ ಹಾಕಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News