JOBS: ಡಿಗ್ರಿ ಮುಗಿಸಿದವರಿಗೆ ಗುಡ್​ ನ್ಯೂಸ್​: SSCಯಲ್ಲಿ 6,506 ಹುದ್ದೆಗಳ ಭರ್ತಿಗೆ ಅರ್ಜಿ!

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ (SSC) ವತಿಯಿಂದ ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ-2020ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ

Last Updated : Jan 3, 2021, 04:42 PM IST
  • ಸ್ಟಾಫ್​ ಸೆಲೆಕ್ಷನ್​ ಕಮಿಷನ್​ (SSC) ವತಿಯಿಂದ ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ-2020ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ
  • ಒಟ್ಟೂ ಹುದ್ದೆಗಳ ಸಂಖ್ಯೆ 6,506 ಇದೆ. ಮೀಸಲಾತಿಗೆ ಅನುಗುಣವಾಗಿ ಈ ಹುದ್ದೆಗಳು ಇವೆ. (ಗ್ರೂಪ್‌ 'ಬಿ' ಗೆಜೆಟೆಡ್‌ 250, ಗ್ರೂಪ್‌ 'ಬಿ' ನಾನ್‌-ಗೆಜೆಟೆಡ್‌-3,513, ಗ್ರೂಪ್‌ 'ಸಿ' 2,743 ಹುದ್ದೆಗಳಿಗೆ ಅರ್ಜಿ
  • ಹುದ್ದೆಗಳಿಗೆ ಟೈಯರ್‌-1 ಪರೀಕ್ಷೆ 2021ರ ಮೇ 29ರಿಂದ ಜೂನ್‌ 7ರ ನಡುವೆ ನಡೆಯಲಿದೆ. ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್‌ 'ಬಿ' ಮತ್ತು ಗ್ರೂಪ್‌ 'ಸಿ' ಹುದ್ದೆಗಳನ್ನು ಭರ್ತಿ
JOBS: ಡಿಗ್ರಿ ಮುಗಿಸಿದವರಿಗೆ ಗುಡ್​ ನ್ಯೂಸ್​: SSCಯಲ್ಲಿ 6,506 ಹುದ್ದೆಗಳ ಭರ್ತಿಗೆ ಅರ್ಜಿ! title=

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ (SSC) ವತಿಯಿಂದ ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ-2020ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಒಟ್ಟೂ ಹುದ್ದೆ(JOB)ಗಳ ಸಂಖ್ಯೆ 6,506 ಇದೆ. ಮೀಸಲಾತಿಗೆ ಅನುಗುಣವಾಗಿ ಈ ಹುದ್ದೆಗಳು ಇವೆ. (ಗ್ರೂಪ್‌ 'ಬಿ' ಗೆಜೆಟೆಡ್‌ 250, ಗ್ರೂಪ್‌ 'ಬಿ' ನಾನ್‌-ಗೆಜೆಟೆಡ್‌-3,513, ಗ್ರೂಪ್‌ 'ಸಿ' 2,743 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ದೆಹಲಿ ತಂಬಾಕು ಕಾರ್ಖಾನೆಯಿಂದ 830 ಕೋಟಿ ರೂ ತೆರಿಗೆ ವಂಚನೆ

ಹುದ್ದೆಗಳಿಗೆ ಟೈಯರ್‌-1 ಪರೀಕ್ಷೆ 2021ರ ಮೇ 29ರಿಂದ ಜೂನ್‌ 7ರ ನಡುವೆ ನಡೆಯಲಿದೆ. ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್‌ 'ಬಿ' ಮತ್ತು ಗ್ರೂಪ್‌ 'ಸಿ' ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

Corona Vaccineಗೆ ಸಂಬಂಧಿಸಿದಂತೆ ಇಂದು ದೊಡ್ಡ ಘೋಷಣೆ ಸಾಧ್ಯತೆ

ಹುದ್ದೆಗಳ ವಿವರ:

- ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ (Assistant Audit Officer)

- ಸಹಾಯಕ ಖಾತೆ ಅಧಿಕಾರಿ (Assistant Accounts Officer)

- ಸಹಾಯಕ ವಿಭಾಗ ಅಧಿಕಾರಿ (Assistant Section Officer)

- ಸಹಾಯಕ (Assistant)

- ಇನ್‌ಸ್ಪೆಕ್ಟರ್‌ (Inspector)

- ಸಬ್‌ಇನ್‌ಸ್ಪೆಕ್ಟರ್‌ (Sub Inspector)

- ಕಿರಿಯ ಸಂಖ್ಯಾಶಾಸ್ತ್ರೀಯ ಅಧಿಕಾರಿ (Junior Statistical Officer)

'ಲಸಿಕೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ'

ಅರ್ಹತೆ ಮತ್ತು ವಯೋಮಿತಿ: ಅಂಗೀಕೃತ ವಿ.ವಿ.ಗಳಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ಹುದ್ದೆಗಳಿಗೆ ಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಪೋಸ್ಟ್‌ ಲೆವೆಲ್‌-8ರ ಹುದ್ದೆಗಳಿಗೆ 30 ವರ್ಷ, ಪೋಸ್ಟ್‌ ಲೆವೆಲ್-7ಕ್ಕೆ 20-30 ವರ್ಷ, ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ 18-30 ವರ್ಷ, ಪೋಸ್ಟ್‌ ಲೆವೆಲ್‌-5 ಹುದ್ದೆಗಳಿಗೆ 18-27 ವರ್ಷ ಎಂದು ವಯೋಮಿತಿ ನಿಗದಿಪಡಿಸಲಾಗಿದೆ.

'ಔರಂಗಾಬಾದ್ ಮರುನಾಮಕರಣ ಮೈತ್ರಿಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ'

ಅರ್ಜಿ ಶುಲ್ಕ: 100 ರೂ. ಎಂದು ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಅಥವಾ ವೀಸಾ, ಮಾಸ್ಟರ್‌ಕಾರ್ಡ್‌, ಮೆಸ್ಟ್ರೋ, ರುಪೇ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಬಹುದು. ಎಸ್‌ಬಿಐ ಶಾಖೆಗಳಲ್ಲಿ ಚಲನ್‌ ಮೂಲಕವೂ ಪಾವತಿಸಬಹುದಾಗಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯುಡಿ), ಮಾಜಿ ಸೈನಿಕ (ಇಎಸ್‌ಎಂ) ಮತ್ತು ಮಹಿಳಾ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಶುಲ್ಕವನ್ನು ಪಾವತಿಸಬೇಕಾಗಿಲ್ಲ.

EPFO 6 ಕೋಟಿ ಚಂದಾದಾರರಿಗೆ ಮೋದಿ ಸರ್ಕಾರದ ಹೊಸ ವರ್ಷದ ಉಡುಗೊರೆ

ಜಾಹೀರಾತಿನ ಮಾಹಿತಿಗೆ ಕ್ಲಿಕ್ಕಿಸಿ: https://ssc.nic.in/SSCFileServer/PortalManagement/UploadedFiles/notice_C...

ಆನ್​ಲೈನ್​ ಅಪ್ಲೀಕೇಷನ್​ಗೆ: https://ssc.nic.in/Registration/Home

Corona Vaccine ಕುರಿತು ರಾಜಕೀಯ, BJP ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಅಖಿಲೇಶ್

ದಿನಾಂಕ ಈ ರೀತಿ ಇದೆ:

ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ದಿನಾಂಕಗಳು: 29-12-2020 to 31-01-2021

ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ: 31-01-2021 (23:30)

ಆನ್‌ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಮತ್ತು ಸಮಯ: 02-02-2021 (23:30)

UPI Transaction: 'UPI ವ್ಯವಹಾರಕ್ಕೆ ಶುಲ್ಕ...' ಸುದ್ದಿ ಸುಳ್ಳು ಎಂದ NPCI

ಆಫ್‌ಲೈನ್ ಚಲನ್ ಜನರೇಟ್​ ಮಾಡಲು ಕೊನೆಯ ದಿನಾಂಕ ಮತ್ತು ಸಮಯ : 04-02-2021 (23:30)

ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕಿನ ಕೆಲಸದ ಸಮಯದಲ್ಲಿ): 06-02-2021

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ (ಶ್ರೇಣಿ -1): 29-05-2021 to 07-06-2021

"ಕೇವಲ ದೆಹಲಿ ಅಷ್ಟೇ ಅಲ್ಲ, ದೇಶದಾದ್ಯಂತ ಕೊರೊನಾ ಲಸಿಕೆ ಉಚಿತ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News