Indian Railways : ಪ್ರವಾಸಿಗರಿಗಾಗಿ ಅದ್ಭುತ ಉಡುಗೊರೆ ನೀಡಿದ ಭಾರತೀಯ ರೈಲ್ವೆ

             

ರೈಲ್ವೆಯ ಈ ಆಧುನಿಕ ಬೋಗಿಗಳನ್ನು ಆಧುನಿಕ ಸೌಕರ್ಯಗಳೊಂದಿಗೆ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.
 

1 /7

ನವದೆಹಲಿ: ಭಾರತೀಯ ರೈಲ್ವೆ (Indian Railways) ವಿಶೇಷವಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಹೊಸ ವಿನ್ಯಾಸದ ಆಧುನಿಕ ರೈಲ್ವೆ ಬೋಗಿಗಳನ್ನು ಸಿದ್ಧಪಡಿಸುತ್ತಿದೆ. ಈ ನಿಟ್ಟಿನಲ್ಲಿ 2020 ರಲ್ಲಿ 10 ಬೋಗಿಗಳನ್ನು ತಯಾರಿಸಲು ಯೋಜಿಸಲಾಗಿತ್ತು. ಈಗ ಅದರ ಎರಡು ಆಧುನಿಕ ಬೋಗಿಗಳು ಸಿದ್ಧವಾಗಿವೆ ಮತ್ತು ಉಳಿದ ಬೋಗಿಗಳನ್ನು ಮಾರ್ಚ್ 31 ರೊಳಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಬೋಗಿಗಳಲ್ಲಿ ನೀವು ಗಣ್ಯ ವರ್ಗದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತೀರಿ. ರೈಲ್ವೆ ಮಾಡರ್ನ್ ಕೋಚ್  ಪ್ರವಾಸಿಗರನ್ನು ಆಕರ್ಷಿಸುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಪ್ರವಾಸಿಗರ ಅನುಕೂಲಕ್ಕೆ ಅನುಗುಣವಾಗಿ ಕೋಚ್ ಅನ್ನು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಫೋಟೋ ಕೃಪೆ : Indian Railaway

2 /7

ಭಾರತೀಯ ರೈಲ್ವೆಯ (Indian Railways) ಮಾಡರ್ನ್ ಕೋಚ್‌ನಲ್ಲಿ ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.

3 /7

ಈ ಆಧುನಿಕ ಕೋಚ್‌ನಲ್ಲಿ ನೀವು ಯಾವುದೇ ಪ್ರಸಿದ್ಧ ವ್ಯಕ್ತಿಗಳ ಡ್ರಾಯಿಂಗ್ ರೂಂನಲ್ಲಿ ಕುಳಿತುಕೊಳ್ಳುವ ಭಾವನೆಯನ್ನು ಪಡೆಯುತ್ತೀರಿ. ಇದನ್ನೂ ಓದಿ: Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ

4 /7

ಈ ವಿಶೇಷ ಕೋಚ್‌ನಲ್ಲಿ ನೀವು ಜಿಪಿಎಸ್, ವೈಫೈ (Wifi) ಸೌಲಭ್ಯವನ್ನೂ ಪಡೆಯುತ್ತೀರಿ.

5 /7

ಈ ಪ್ಯಾಂಟ್ರಿಯಲ್ಲಿ ನಿಮ್ಮ ಆಯ್ಕೆಯ ಆಹಾರ ಪದಾರ್ಥಗಳು ನಿಮಗೆ ಲಭ್ಯವಾಗಲಿವೆ. ಇದನ್ನೂ ಓದಿ: Vistadome Coach Train: ಗಂಟೆಗೆ 180 ಕಿ.ಮೀ ವೇಗದಲ್ಲಿ ಓಡಿದ ವಿಸ್ಟಾಡಾಮ್ ಬೋಗಿ ಹೊಂದಿದ ರೈಲು

6 /7

ಕೋಚ್‌ನ ಶೌಚಾಲಯವು ಪಂಚತಾರಾ ಹೋಟೆಲ್‌ನಂತೆ ಆರೋಗ್ಯಕರ ಮತ್ತು ಸ್ವಚ್ಛವಾಗಿದೆ.

7 /7

ನೆಚ್ಚಿನ ತಾಣಗಳಿಗೆ ಪ್ರಯಾಣಿಸಲು ನೀವು ಈ ಕೋಚ್‌ನಲ್ಲಿ ಆರಾಮದಾಯಕ ಆಸನದ ಮೇಲೆ ಕುಳಿತಾಗ ಮಾಲ್‌ನಲ್ಲಿ ಸಿನೆಮಾ ನೋಡುವಂತೆ ನಿಮಗೆ ಭಾಸವಾಗುತ್ತದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.