IND vs AUS Boxing Day Test: ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವು

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ  70 ರನ್ ಗಳಿಸುವ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟದಲ್ಲಿ ಈ ಗುರಿಯನ್ನು ಸಾಧಿಸಿತು.

Written by - Yashaswini V | Last Updated : Dec 29, 2020, 10:35 AM IST
  • ಮೆಲ್ಬೋರ್ನ್‌ನಲ್ಲಿ ಭಾರತದ ಐತಿಹಾಸಿಕ ವಿಜಯ
  • ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸಿಸ್
  • ರಹಾನೆ ಮ್ಯಾನ್ ಆಫ್ ದಿ ಮ್ಯಾಚ್
IND vs AUS Boxing Day Test: ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವು title=
Team India's historic win in Melbourne (Image courtesy: PTI)

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಬಾಕ್ಸಿಂಗ್ ದಿನದ ಟೆಸ್ಟ್‌ನ ನಾಲ್ಕನೇ ದಿನ (Boxing Day Test), ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯು 1-1 ಆಗಿ ಮಾರ್ಪಟ್ಟಿದೆ. ಮೂರನೇ ಟೆಸ್ಟ್ ಪಂದ್ಯ ಜನವರಿ 7 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ರಹಾನೆ ಮ್ಯಾನ್ ಆಫ್ ದಿ ಮ್ಯಾಚ್ (Rahane Man of the Match) :
ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಅವರ 112 ರನ್ಗಳ ಭವ್ಯವಾದ ಇನ್ನಿಂಗ್ಸ್ಗಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಇದಲ್ಲದೆ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ರಹಾನೆ 27 * ರನ್ ಗಳಿಸಿ ಭಾರತಕ್ಕೆ ಗೆಲುವಿನ ದಾರಿ ತೋರಿಸಿದರು.

ಮೆಲ್ಬೋರ್ನ್‌ನಲ್ಲಿ ಐತಿಹಾಸಿಕ ವಿಜಯ:
ಟೀಮ್ ಇಂಡಿಯಾ (Team India) ಮೆಲ್ಬೋರ್ನ್ ಮೈದಾನದಲ್ಲಿ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ 4 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲದರಲ್ಲೂ ಒಂದು ವಿಶೇಷತೆ ಇದೆ. ಭಾರತೀಯ ಬ್ಯಾಟ್ಸ್‌ಮನ್‌ಗಳು ಎಲ್ಲಾ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ್ದರು. 1977 ರಲ್ಲಿ ಭಾರತ ಮೆಲ್ಬೋರ್ನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಾಗ  ನಾಯಕ ಸುನಿಲ್ ಗವಾಸ್ಕರ್ 118 ರನ್ ಗಳಿಸಿದರು.

ಇದನ್ನೂ ಓದಿ: 'ಭಾರತೀಯ ಕ್ರಿಕೆಟ್ ನ ಇತಿಹಾಸದಲ್ಲಿ ರಹಾನೆ ಶತಕ ಮಹತ್ವದ್ದಾಗಿದೆ'

1980 ರಲ್ಲಿ ಎರಡನೇ ಬಾರಿಗೆ ಟೀಮ್ ಇಂಡಿಯಾ ಈ ಮೈದಾನದಲ್ಲಿ ಪಂದ್ಯವನ್ನು ಗೆದ್ದುಕೊಂಡಿತು, ಆ ಪಂದ್ಯದಲ್ಲಿ ಗುಂಡಪ್ಪ ವಿಶ್ವನಾಥ್ 114 ರನ್ ಗಳಿಸಿದರು. ಇದಲ್ಲದೆ 2018-19ರ ಪ್ರವಾಸದಲ್ಲಿ ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾ ಗೆದ್ದ ಪಂದ್ಯದ ವೇಳೆ ಚೇತೇಶ್ವರ ಪೂಜಾರ 106 ರನ್ ಗಳಿಸಿದರು. ಈ ಬಾರಿ ಕಮಲ್ ರಹಾನೆ  (Ajinkya Rahane) ಕೂಡ ಶತಕ ಗಳಿಸಿದ್ದಾರೆ.

200 ರನ್‌ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ:
ಆತಿಥೇಯರು ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಆಲೌಟ್ ಆಗಿದ್ದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ಹೆಚ್ಚಿನ ಪ್ರಮಾಣದಲ್ಲಿ ವಿಫಲವಾಯಿತು. ಕ್ಯಾಮರೂನ್ ಗ್ರೀನ್ (45) ಮತ್ತು ಮ್ಯಾಥ್ಯೂ ವೇಡ್ (40) ಮಾತ್ರ ತಕ್ಕ ಮಟ್ಟಿಗೆ ಆಸಿಸ್ ತಂಡಕ್ಕೆ ಆಸರೆಯಾದರು. ಇವರನ್ನು ಹೊರತುಪಡಿಸಿ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾಗಿದ್ದಾರೆ.

ಇದನ್ನೂ ಓದಿ: ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

ಭಾರತಕ್ಕೆ ಸುಲಭ ಗುರಿ :
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಗೆಲ್ಲಲು 70 ರನ್ ಗಳಿಸುವ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟದಲ್ಲಿ ಈ ಗುರಿಯನ್ನು ಸಾಧಿಸಿತು. ಆಸ್ಟ್ರೇಲಿಯಾದ ಬೌಲರ್‌ಗಳು ಭಾರತೀಯ ತಂಡಕ್ಕೆ ಆರಂಭಿಕ ಹಿನ್ನಡೆ ನೀಡಿದರು. ಈ ವೇಳೆ ಮಾಯಾಂಕ್ ಅಗರ್‌ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ಅವರನ್ನು ಶೀಘ್ರದಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ರಹಾನೆ 27 * ಮತ್ತು ಗಿಲ್ 35 * ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸಿಸ್:
ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳು ತಮ್ಮ ಪ್ರಭಾವವನ್ನು ತೋರಿಸಿದರು. ಟೀಮ್ ಇಂಡಿಯಾ ಪರವಾಗಿ ಮೊಹಮ್ಮದ್ ಸಿರಾಜ್ 3 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ (Ravichandran Ashwin) , ಜಸ್ಪ್ರೀತ್ ಬುಮ್ರಾ 2-2 ವಿಕೆಟ್ ಪಡೆದರು. ಇದಲ್ಲದೆ ಉಮೇಶ್ ಯಾದವ್ 1 ವಿಕೆಟ್ ಪಡೆದರು.

ಇದನ್ನೂ ಓದಿ: SuperMan ಅವತಾರದಲ್ಲಿ ಕಾಣಿಸಿಕೊಂಡ David Warner

ಕಮ್ಮಿನ್ಸ್-ಗ್ರೀನ್ ಪಾಲುದಾರಿಕೆ:
ಕ್ಯಾಮರೂನ್ ಗ್ರೀನ್ ಮತ್ತು ಪ್ಯಾಟ್ ಕಮ್ಮಿನ್ಸ್ ನಡುವಿನ 57 ರನ್‌ಗಳ ಪ್ರಮುಖ ಪಾಲುದಾರಿಕೆಯು ಆಸ್ಟ್ರೇಲಿಯಾವನ್ನು ಭಾರತದ ವಿರುದ್ಧ 69 ರನ್‌ಗಳ ಮುನ್ನಡೆ ಸಾಧಿಸಿತು. ಪ್ಯಾಟ್ ಕಮ್ಮಿನ್ಸ್ ಅವರನ್ನು ಜಸ್ಪ್ರೀತ್ ಬುಮ್ರಾ (Jasprit Bumrah) ವೈಯಕ್ತಿಕ ಸ್ಕೋರ್ 22 ರನ್ ಇರುವಾಗ ಔಟ್ ಮಾಡಿದರು. ಗ್ರೀನ್ ಅವರನ್ನು ಮೊಹಮ್ಮದ್ ಸಿರಾಜ್ 45 ರನ್ ಗಳಿಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಆಸ್ಟ್ರೇಲಿಯಾದ ಪ್ಲೇಯಿಂಗ್ XI: ಟಿಮ್ ಪೈನ್ (ನಾಯಕ), ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲ್ಯಾಬುಸ್ಚೆನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್

ಇದನ್ನೂ ಓದಿ: ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ

ಭಾರತದ ಪ್ಲೇಯಿಂಗ್ XI: ಅಜಿಂಕ್ಯ ರಹಾನೆ (ನಾಯಕ), ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News