ನವದೆಹಲಿ: Zydus Cadila:ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈರಸ್ ಅನ್ನು ಸೋಲಿಸುವ ಹಂತಕ್ಕೆ ನಾವು ತುಂಬಾ ಹತ್ತಿರವಾಗಿದ್ದೇವೆ. ಶೀಘ್ರದಲ್ಲಿಯೇ ನಾವು ವ್ಯಾಕ್ಸಿನ್ ಬಳಸಿ ಕೊರೊನಾವನ್ನು ಸೋಲಿಸಲಿದ್ದೇವೆ. ಸದ್ಯ ವ್ಯಾಕ್ಸಿನ್ ಗಾಗಿ ಕಾಯುತ್ತಿರುವ ಜನರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಔಷಧಿ ತಯಾರಕ ಕಂಪನಿ ಜಾಯಡಸ್ ಕ್ಯಾಡಿಲಾ ಕಂಪನಿ ಈ ವಿಶ್ವಾಸ ವ್ಯಕ್ತಪಡಿಸಿದ್ದು, ತನ್ನ ಕಂಪನಿ ತಯಾರಿಸಿರುವ ವ್ಯಾಕ್ಸಿನ್ ಯಶಸ್ಸಿನ ತುಂಬಾ ಹತ್ತಿರಕ್ಕೆ ತಲುಪಿದೆ ಎಂದು ಹೇಳಿದೆ. ZyCov-D ಹೆಸರಿನ ಈ ಲಸಿಕೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕ್ಯಾಡಿಲಾ, ತನ್ನ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದಿದೆ. ತನ್ನ ವ್ಯಾಕ್ಸಿನ್ ಸುರಕ್ಷಿತ, ಪ್ರಭಾವಿ ಹಾಗೂ ವೈರಸ್ ವಿರುದ್ಧ ಪ್ರತಿಕಾರಕ ಶಕ್ತಿ ಒದಗಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲ
Zydus Cadila ಕಂಪನಿಯ ಪ್ಲಾಸ್ಮಿಡ್ DNA ವ್ಯಾಕ್ಸಿನ್ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸಿದೆ ಎಂದು ಹೇಳಲಾಗಿದೆ. ಮೊದಲ ಎರಡು ಹಂತಗಳ ಪರೀಕ್ಷೆಯಲ್ಲಿ ಈ ವ್ಯಾಕ್ಸಿನ್ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ಕಂಪನಿ ಹೇಳಿದೆ ಹಾಗೂ ವ್ಯಾಕ್ಸಿನ್ ಸಂಪೂರ್ಣ ಸುರಕ್ಸಿತವಾಗಿದೆ. ZyCov-D ವ್ಯಾಕ್ಸಿನ್ ನ ರೋಗಪ್ರತಿರೋಧಕ ಕ್ಷಮತೆಯಿನ್ನು ಹೆಚ್ಚಿಸುತದೆ. ಎರಡನೇ ಹಂತದಲ್ಲಿ ಸುಮಾರು 1000 ವಾಲೆಂಟೀಯರ್ ಗಳ ಮೇಲೆ ಈ ವ್ಯಾಕ್ಸಿನ್ ನ ಪರೀಕ್ಷೆ ನಡೆಸಲಾಗಿತ್ತು. ಇದುವರೆಗಿನ ಫಲಿತಾಂಶಗಳನ್ನು DSMB ಮುಂದೆ ಪ್ರಸ್ತುತಪಡಿಸಲಾಗಿದೆ. ಈ ವ್ಯಾಕ್ಸಿನ್ ನ ಪರೀಕ್ಷಾ ಫಲಿತಾಂಶಗಳನ್ನು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ ಗೆ ಹಸ್ತಾಂತರಿಸಲಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನು ಓದಿ- 'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ'
ಸಾಮಾನ್ಯ ತಾಪಮಾನದಲ್ಲಿಯೂ ಕೂಡ ಸಂಗ್ರಹಿಸಿಡಬಹುದು
ZyCov-D ಲಸಿಕೆ ಡಿಎನ್‌ಎ ಆಧಾರಿತವಾಗಿದ್ದು ಅದನ್ನು ಕೋಣೆಯ ಸಾಮಾನ್ಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು. ಮೂರನೇ ಹಂತವು ಯಶಸ್ವಿಯಾದರೆ ಮತ್ತು ZyCov-D ಲಸಿಕೆಯನ್ನು ರಿಮೋಟ್ ಸ್ಥಳಕ್ಕೆ ಕಳುಹಿಸಬೇಕಾದರೆ, ಇದು ಇತರ ಲಸಿಕೆಗಳಿಗಿಂತ ಸರಳವಾಗಿದೆ ಎಂದು ಹೇಳಲಾಗುತ್ತದೆ. ಈಗ ಕಂಪನಿಯು ZyCov-D ಲಸಿಕೆಯ ಮೂರನೇ ಹಂತಕ್ಕೆ ಅನುಮೋದನೆ ಕೋರಿದೆ. ಮೂರನೇ ಹಂತದಲ್ಲಿ ಸುಮಾರು 30,000 ವಾಲೆಂಟೀಯರ್ಸ್ ಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ.
ಇದನ್ನು ಓದಿ-Fraud In The Name Of Vaccine: Covid-19 ವ್ಯಾಕ್ಸಿನ್ ಹೆಸರಿನಲ್ಲಿ ವಂಚನೆ, ತಪ್ಪಿಸಿಕೊಳ್ಳುವುದು ಹೇಗೆ?
ZyCov-D ಎರಡನೇ ಸ್ವದೇಶಿ ಲಸಿಕೆಯಾಗಿದೆ
ವ್ಯಾಕ್ಸಿನ್ ಕುರಿತು ಮಾತನಾಡಿರುವ ಜೈಡಸ್ ಕ್ಯಾಡಿಲಾ (Zydus Cadila) ಅಧ್ಯಕ್ಷ ಡಾ. ಪಂಕಜ್ ಆರ್. ಪಟೇಲ್, ಈ ಸ್ವದೇಶಿ ಲಸಿಕೆ ಸುರಕ್ಷಿತವಾಗಿದೆ ಮತ್ತು ಕರೋನಾ ಸೋಂಕಿನ ವಿರುದ್ಧ ಪ್ರತಿರಕ್ಷಣಾ ಸಾಮರ್ಥ್ಯವನ್ನು ಕೂಡ ಒದಗಿಸಲಿದೆ ಎಂದಿದ್ದಾರೆ. ಎರಡೂ ಹಂತಗಳ ಫಲಿತಾಂಶಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಮುಂದಿನ ವಾರದವರೆಗೆ ಫಲಿತಾಂಶಗಳನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದಕ್ಕೂ ಮೊದಲು, ಇಂಡಿಯಾ ಬಯೋಟೆಕ್ ಕಂಪನಿ, ಐಸಿಎಂಆರ್ ವಿಜ್ಞಾನಿಗಳೊಂದಿಗೆ ದೇಶದ ಮೊದಲ ಸ್ಥಳೀಯ ಲಸಿಕೆಯನ್ನು ಸಿದ್ಧಪಡಿಸಿದೆ, ಇದು ಪ್ರಸ್ತುತ ಮೂರನೇ ಪ್ರಯೋಗದಲ್ಲಿದೆ. ಭಾರತ್ ಬಯೋಟೆಕ್ ಲಸಿಕೆ ಕೋವಾಕ್ಸಿನ್ ಫಲಿತಾಂಶವೂ ಅತ್ಯುತ್ತಮವಾಗಿದೆ. ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ ಎಂದು ಐಸಿಎಂಆರ್ ಹೇಳಿಕೊಂಡಿದೆ. ಅಲ್ಲದೆ, ಪ್ರತಿಕಾಯಗಳನ್ನು ತಯಾರಿಸಲು ಲಸಿಕೆ ಪರಿಣಾಮಕಾರಿಯಾಗಿದೆ.
ಇದನ್ನು ಓದಿ- BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR
1 ವರ್ಷದವರೆಗೆ ಪ್ರತಿರಕ್ಷಣೆ ಒದಗಿಸಲಿದೆ
ಕೋವಾಕ್ಸಿನ್ ದೀರ್ಘಕಾಲದವರೆಗೆ ಪ್ರತಿಕಾಯಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ಭಾರತ್ ಬಯೋಟೆಕ್ ಬುಧವಾರ ಹೇಳಿದೆ. ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರತಿಕಾಯಗಳನ್ನು ತಯಾರಿಸಲು ಲಸಿಕೆ ಸಹಕಾರಿಯಾಗಿದೆ. ಎರಡು ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಕಂಪನಿಯು ಇದನ್ನು ತೀರ್ಮಾನಿಸಿದೆ. ಇಂಡಿಯಾ ಬಯೋಟೆಕ್ ಮತ್ತು ಐಸಿಎಂಆರ್ ಕೋವಾಕ್ಸಿನ್ ಮೂರನೇ ಪ್ರಯೋಗ ಪ್ರಸ್ತುತ ನಡೆಯುತ್ತಿದೆ. ಪ್ರಯೋಗದ ಎರಡನೇ ಹಂತದಲ್ಲಿ ಒಟ್ಟು 380 ಆರೋಗ್ಯವಂತ ಮಕ್ಕಳು ಮತ್ತು ವಯಸ್ಕರಿಗೆ ಡೋಸ್ ನೀಡಲಾಗಿದೆ ಮತ್ತು ಅದರ ಫಲಿತಾಂಶಗಳು ಯಶಸ್ವಿಯಾಗಿವೆ. ಮೊದಲ ಪ್ರಯೋಗದಲ್ಲಿ ಎರಡನೇ ಡೋಸ್ ನಂತರ ಮೂರು ತಿಂಗಳವರೆಗೆ ಜನರಲ್ಲಿ ಪ್ರತಿಕಾಯಗಳು ಕಂಡುಬಂದಿವೆ. ಕೋವಾಕ್ಸಿನ್ ತೆಗೆದುಕೊಂಡ ನಂತರ ಆರರಿಂದ 12 ತಿಂಗಳವರೆಗೆ ಪ್ರತಿಕಾಯಗಳು ದೇಹದಲ್ಲಿ ಉಳಿಯಲಿವೆ ಎಂದು ಕಂಪನಿಯು ತನ್ನ ಸಂಶೋಧನೆಯಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.