Moles: ನಿಮಗೂ ಶರೀರದ ಆ ಭಾಗದಲ್ಲಿ ಮಚ್ಚೆ ಇದೆಯಾ... ? ಹಾಗಾದ್ರೆ ನೀವು ತುಂಬಾ Lucky

ಮಾನವನ ದೇಹದ ವಿವಿಧ ಅಂಗಗಳ ಮೇಲೆ ಮಚ್ಚೆ ಇರುವುದು ಸಾಮಾನ್ಯ ಸಂಗತಿ. ಆದರೆ, ನಮ್ಮ ದೇಹದ ಮೇಲೆ ಇರುವ ಮಚ್ಚೆಗಳು ಅದೃಷ್ಟದ ಸಂಕೇತವಾಗಿವೆ ಎಂಬುದು ನಿಮಗೆ ತಿಳಿದಿದೆಯಾ? ಈ ಮಚ್ಚೆಗಳು ಶುಭ-ಅಶುಭ ಸಂಕೇತಗಳಾಗಿವೆ. ಹಾಗಾದರೆ ಬನ್ನಿ ಈ ಶುಭ-ಅಶುಭ ಮಚ್ಚೆಗಳ ಬಗ್ಗೆ ತಿಳಿದುಕೊಳ್ಳೋಣ.

  • Dec 09, 2020, 11:02 AM IST

ನವದೆಹಲಿ: ಮಾನವನ ಶರೀರ ಸೌಷ್ಟ್ಯ ಹಲವು ಬಾರಿ ಅವರ ಅದೃಷ್ಟವನ್ನು ನಿರ್ಧರಿಸುತ್ತವೆ. ಶರೀರದ ವಿವಿಧ ಅಂಗಾಂಗಗಳಲ್ಲಿರುವ ಮಚ್ಚೆಗಳು ಹಸ್ತಸಾಮುದ್ರಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಶರೀರದ ಮೇಲೆ ಕಪ್ಪು ಮಚ್ಚೆ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಶರೀರದ ಮೇಲೆ ಕೆಂಪು ಬಣ್ಣದ ಮಾಚೆಗಳು ಶುಭ ಪರಿಣಾಮ ನೀಡುತ್ತವೆ ಎನ್ನಲಾಗುತ್ತದೆ. ಆದರೆ, ಕಪ್ಪು ಮಚ್ಚೆ ಶುಭ ಹಾಗೂ ಅಶುಭ ಈ ಎರಡರ ಸಂಕೇತ ಕೂಡ ಹೌದು. ಹಾಗಾದರೆ ಶರೀರದ ವಿವಿಧ ಅಂಗಗಳ ಮೇಲೆ ಇರುವ ಈ ಮಚ್ಚೆಗಳು ಏನನ್ನು ಸೂಚಿಸುತ್ತವೆ ತಿಳಿದುಕೊಳ್ಳೋಣ ಬನ್ನಿ

 

ಇದನ್ನು ಓದಿ-Vastu Tips For New Year 2021: ನೂತನ ವರ್ಷದಲ್ಲಿ ಮನೆಗೆ ಈ 10 ವಸ್ತುಗಳನ್ನು ಮನೆಗೆ ತನ್ನಿ, ಧನ ಲಾಭವಾಗಲಿದೆ

1 /5

ತುಟಿ ಮೇಲ್ಭಾಗದಲ್ಲಿರುವ ಮಚ್ಚೆ ತುಂಬಾ ವಿಶೇಷವಾಗಿರುತ್ತದೆ. ಸ್ತ್ರೀ ಅಥವಾ ಪುರುಷರ ತುಟಿಗಳ ಬಲಭಾಗದಲ್ಲಿ ಮಚ್ಚೆ ಇದ್ದರೆ ಅವರು ತಮ್ಮ ಸಂಗಾತಿಯ ಜೊತೆಗೆ ತುಂಬಾ ಪ್ರೇಮಪೂರ್ವಕ ಸಂಬಂಧ ಹೊಂದಿರುತ್ತಾರೆ. ಅಂದರೆ ಸಂಗಾತಿಯ ಜೊತೆಗೆ ಅವರ ಸಂಬಂಧ ತುಂಬಾ ಸುಮಧುರವಾಗಿರುತ್ತದೆ. ಇನ್ನೊಂದೆಡೆ ಒಂದು ವೇಳೆ ತುಟಿಯ ಎಡಭಾಗಕ್ಕೆ ಮಚ್ಚೆ ಇದ್ದರೆ, ಅವರು ಸಂಗಾತಿಯ ಜೊತೆಗೆ ಮತಭೇದ ಹೊಂದಿರುತ್ತಾರೆ. ಕೆಳಭಾಗದ ತುಟಿಯ ಮೇಲೆ ಮಚ್ಚೆ ಇರುವವರಿಗೆ ತಿನ್ನುವುದು ತುಂಬಾ ಇಷ್ಟ.

2 /5

ಒಂದು ವೇಳೆ ನಿಮಗೆ ಅಂಗೈಯಲ್ಲಿ ಹೆಬ್ಬಟ್ಟಿನ ಬುಡ ಭಾಗದಲ್ಲಿ ಮಚ್ಚೆ ಇದ್ದರೆ ನೀವು ನಿಮ್ಮ ಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸುವಿರಿ. ಆದರೆ, ಇದೆ ಮಚ್ಚೆ ಹೆಬ್ಬಟ್ಟಿನ ಮೇಲೆ ಇದ್ದರೆ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಯಶಸ್ಸು, ಕೀರ್ತಿ ವ್ಯಕ್ತಿಗೆ ಲಭಿಸುವುದಿಲ್ಲ.

3 /5

ಹೊಟ್ಟೆಯ ಭಾಗದಲ್ಲಿ ಮಚ್ಚೆ ಇರುವ ಜನರು, ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಮಚ್ಚೆ ಒಂದು ವೇಳೆ ಹೊಕ್ಕುಳಿನ ಎಡಭಾಗದಲ್ಲಿದ್ದರೆ, ವ್ಯಕ್ತಿಯು ಹೊಟ್ಟೆಯ ಕಾಯಿಲೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಹೊಕ್ಕುಳ ಕೆಳಗೆ ಮಚ್ಚೆ ಗುರುತು ಹೊಂದಿರುವವರು, ಲೈಂಗಿಕ ಕಾಯಿಲೆಯಿಂದ ಬಳಲುವ ಸಾಧ್ಯತೆ ಇರುತ್ತದೆ.

4 /5

ಎದೆಯ ಎಡಭಾಗದಲ್ಲಿ ಮಚ್ಚೆ ಹೊಂದಿದವರ ಮದುವೆ ತಡವಾಗುವ ಸಾಧ್ಯತೆ ಇದೆ. ಆದರೆ, ಇಂತಹ ವ್ಯಕ್ತಿ ಕಾಮುಕ ಸ್ವಭಾವ ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಹೃದ್ರೋಗಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು. ಎದೆಯ ಬಲ ಭಾಗದಲ್ಲಿ ಮಚ್ಚೆ ಹೊಂದಿದವರು ಧನವಂತರಾಗಿರುತ್ತಾರೆ.

5 /5

ಹಣೆಯ ಬಹಳ ಮತ್ತು ಎಡಭಾಗದಲ್ಲಿ ಮಚ್ಚೆ ಇರುವವರು ತುಂಬಾ ಹಣ ಸಂಪಾದಿಸುತ್ತಾರೆ. ಆದರೆ ಇವರು ತುಂಬಾ ವಿಲಾಸಿಗಳಾಗಿರುವ ಕಾರಣ ಇವರ ಬಳಿ ಹಣ ನಿಲ್ಲುವುದಿಲ್ಲ ಮತ್ತು ಇವರು ಆರ್ಥಿಕ ಸಂಕಷ್ಟ ಎಳೆದುಕೊಳ್ಳುತ್ತಾರೆ.  ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇರುವವರು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಕೂಡ ಭಾಗ್ಯ ಇವರಿಗೆ ಸಾಥ್ ನೀಡುತ್ತದೆ ಮತ್ತು ಇವರು ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ.