ಉತ್ತರ ಕೊರಿಯಾದ ಜನರು ಜೋರಾಗಿ ಕೂಗುವುದನ್ನು ಮತ್ತು ಕೂಗಿ ಅಳುವುದನ್ನು ಅಭ್ಯಾಸ ಮಾಡುತ್ತಾರೆ. ಇಲ್ಲಿನ ರಾಯಲ್ ಶೋಕಾಚರಣೆಯಲ್ಲಿ, ಕಿಮ್ ಕುಟುಂಬಕ್ಕೆ ನಿಷ್ಠೆಯನ್ನು ತೋರಿಸಲು ಸಾರ್ವಜನಿಕರು ಅಳಬೇಕಾಗುತ್ತದೆ. ಅದೇ ಸಮಯದಲ್ಲಿ, ಸರಿಯಾಗಿ ಅಳದ ವ್ಯಕ್ತಿಗೆ ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ.
ನವದೆಹಲಿ: ಇಡೀ ವಿಶ್ವದಲ್ಲಿ 'ವಿಲಕ್ಷಣ ಸರ್ವಾಧಿಕಾರಿ' ಎಂದು ಪ್ರಸಿದ್ಧವಾಗಿರುವ ಕಿಮ್ ಜೊಂಗ್ ಉನ್ (Kim Jong Un)ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಉತ್ತರ ಕೊರಿಯಾದ ಈ ಸರ್ವಾಧಿಕಾರಿ ಕಿಮ್ ಜೊಂಗ್ ತನ್ನ ಶೋಷಣೆಯಿಂದಾಗಿ ಆಗಾಗ್ಗೆ ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತಾನೆ. ಈ ರಕ್ತಪಿಪಾಸು ಸರ್ವಾಧಿಕಾರಿ ಉತ್ತರ ಕೊರಿಯಾದಲ್ಲಿ ಎಂತಹ ಕಾನೂನುಗಳನ್ನು ರಚಿಸಿದ್ದಾರೆ ಎಂಬುದನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಉತ್ತರ ಕೊರಿಯಾದಲ್ಲಿ ಒಂದು ಕಾನೂನಿನ ಪ್ರಕಾರ ಅಲ್ಲಿನ ಜನರು ಜೋರಾತಿ ಕೂಗಿಕೊಂಡು ಅಳುವುದು ಅಭ್ಯಾಸ ಮಾಡಬೇಕು. ಈ ಆದೇಶವನ್ನು ಪಾಲಿಸದ ವ್ಯಕ್ತಿಗೆ ಶಿಕ್ಷೆಯಾಗುತ್ತದೆ.
ಇದನ್ನು ಓದಿ-Corona ನಿಯಮ ಉಲ್ಲಂಘಿಸಿದ ನಾಗರಿಕನ ಪ್ರಾಣವನ್ನೇ ತೆಗೆಯಿಸಿದ Kim Jong Un
2011 ರಲ್ಲಿ ತಂದೆ ಕಿಮ್ ಜೊಂಗ್ ಇಲ್ ಅವರ ಮರಣದ ನಂತರ ಕಿಮ್ ಜೊಂಗ್ ಉನ್ ಉತ್ತರ ಕೊರಿಯಾದಲ್ಲಿ ಅಧಿಕಾರ ವಹಿಸಿಕೊಂಡಿದ್ದಾನೆ. ಕಿಮ್ ಜೊಂಗ್ ಅವರ ಅಜ್ಜ ಕಿಮ್- II ಸುಂಗ್ ಅವರನ್ನು ಉತ್ತರ ಕೊರಿಯಾದ ಸ್ಥಾಪಕ ಮತ್ತು ಮೊದಲ ನಾಯಕ ಎಂದು ಪರಿಗಣಿಸಲಾಗಿದೆ. ಉತ್ತರ ಕೊರಿಯಾದ ಪ್ರತಿಯೊಂದು ಮನೆಯಲ್ಲೂ ಕಿಮ್ ಜೊಂಗ್ ಉನ್ ಅವರ ತಂದೆ ಮತ್ತು ಅವರ ಅಜ್ಜನ ಚಿತ್ರವನ್ನು ತೂಗು ಹಾಕುವ ಕಾನೂನಿದೆ.
ಉತ್ತರ ಕೊರಿಯಾದಲ್ಲಿ ಪ್ರತಿ ವರ್ಷ ಕಿಮ್ ಜೊಂಗ್ ಉನ್ ಅವರ ತಂದೆ ಕಿಮ್ ಜೊಂಗ್ ಇಲ್ ಮತ್ತು ಅವರ ಅಜ್ಜ ಕಿಮ್- II ಸಂಗ್ ಅವರ ಶೋಕಾಚರಣೆ ನಡೆಸಲಾಗುತ್ತದೆ. ಈ ಸಂತಾಪ ಸಭೆಯಲ್ಲಿ, ಉತ್ತರ ಕೊರಿಯಾದ ನಾಗರಿಕರು , ಜೋರಾಗಿ ಕಿರುಚುತ್ತಾ ಅಳಬೇಕು ಮತ್ತು ಎದೆ ಬಡಿದುಕೊಳ್ಳಬೇಕು. ಕಿಮ್ ಕುಟುಂಬದ ಪ್ರತಿ ನಿಷ್ಠೆಗೆ ಇದು ಪುರಾವೆಯಾಗಿದೆ. ಮಕ್ಕಳು, ವೃದ್ಧರು, ಯುವಕರು ಮತ್ತು ಮಹಿಳೆಯರು ಅಳುವ ಕ್ರಮವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಒಮ್ಮೆ, ಕಿಮ್ ಜೊಂಗ್ ಉನ್ ಅವರ ತಂದೆ ಕಿಮ್ ಜೊಂಗ್ ಇಲ್ ಅವರ ಶೋಕಾಚರಣೆಯಲ್ಲಿ, ಕೆಲವರು ಸರಿಯಾಗಿ ಅಳಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಆ ಜನರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಮತ್ತು ಸಾವಿರಾರು ಜನರನ್ನು ಅವರ ಮನೆಗಳಿಂದ ಎತ್ತಿ ಕಣ್ಮರೆಮಾಡಲಾಗಿದೆ. ಹೀಗಾಗಿ ಇಂದಿಗೂ, ಸಾರ್ವಜನಿಕ ಶೋಕ ಸಭೆಗಳಲ್ಲಿ, ಸಾರ್ವಜನಿಕರು ಕೂಗಬೇಕು, ಅಳಬೇಕು ಹಾಗೂ ಎದೆ ಬಡಿದುಕೊಳ್ಳಬೇಕು.