/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸೋಮವಾರ ಶಿವಸೇನೆಗೆ ಸೇರುವ ಸಾಧ್ಯತೆಯಿದೆ.

2022 ರಲ್ಲಿ ನಡೆಯಲಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ಚುನಾವಣೆ ನಡೆಯುವ ಮುನ್ನ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಯತ್ನಗಳು ನಡೆಯುತ್ತಿವೆ.ಅವರು ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ನಗರದ ಪ್ರಮುಖ ವಸಾಹತುಗಳಲ್ಲಿನ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತದೆ.

ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ರನ್ನು ವಿಧಾನ ಪರಿಷತ್ ಗೆ ಶಿಫಾರಸು ಮಾಡುವ ಸಾಧ್ಯತೆ

ನಗರದಲ್ಲಿನ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ಕ್ರೋಡಿಕರಿಸುವುದರ ಹೊರತಾಗಿ ಯುವಕರು ಮತ್ತು ಕಾರ್ಮಿಕ ವರ್ಗವನ್ನು ಆಕರ್ಷಿಸುವ ಯೋಜನೆಯನ್ನು ಶಿವಸೇನೆ ಹೊಂದಿದೆ.ಆ ನಿಟ್ಟಿನಲ್ಲಿ ಈಗ ಉರ್ಮಿಳಾ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಲಿಸಲಾಗುತ್ತಿದೆ ಎನ್ನಲಾಗಿದೆ. ಶಿವಸೇನೆಯ ಆಡಳಿತವನ್ನು ಕೊನೆಗೊಳಿಸುವ ಸಂಕಲ್ಪದೊಂದಿಗೆ ಈಗಾಗಲೇ ಮಿಷನ್ ಮುಂಬೈ 2022 ಅನ್ನು ಘೋಷಿಸಿರುವ ಬಿಜೆಪಿಯನ್ನು ಎದುರಿಸಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಘೋಷಿಸಿದ್ದಾರೆ.

ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಹೇಳಿಕೆ ನಂತರ ನಟಿ ಊರ್ಮಿಳಾ ಮಾತೊಂಡ್ಕರ್ ಟ್ವೀಟ್

ಮಾತೋಂಡ್ಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ವಿರುದ್ಧ ಉತ್ತರ ಮುಂಬೈ ಸ್ಥಾನದಿಂದ ಸ್ಪರ್ಧಿಸಿದ್ದರು ಆದರೆ ಅವರನ್ನು ಸೋಲಿಸಲಾಯಿತು.ಅದರ ನಂತರ, ಆಂತರಿಕ ಗಲಾಟೆ ಮತ್ತು ಬಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ, 2019 ರ ಮಾರ್ಚ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾತೋಂಡ್ಕರ್ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದರು.

ಡ್ರಗ್ಸ್ ನ ಮೂಲವಾದ ಹಿಮಾಚಲದಿಂದಲೇ ಕಂಗನಾ ಹೋರಾಟ ಪ್ರಾರಂಭಿಸಲಿ- ಉರ್ಮಿಳಾ ಮಾತೋಂಡ್ಕರ್

ಪಕ್ಷದಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಮುಂಬೈ ಕಾಂಗ್ರೆಸ್ನಲ್ಲಿ ದೊಡ್ಡ ಗುರಿಯೊಂದಿಗೆ ಕೆಲಸ ಮಾಡುವ ಬದಲು ಸಣ್ಣ ಆಂತರಿಕ ರಾಜಕೀಯದ ವಿರುದ್ಧ ಹೋರಾಡುವ ಸಾಧನವಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದರು.ಆದಾಗ್ಯೂ, ಮಾತೋಂಡ್ಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಜನರಿಗೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದರಿಂದ ಅವರು ಪ್ರಾಮಾಣಿಕತೆ ಮತ್ತು ಘನತೆಯಿಂದ ಜನರಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದರು.

ಕಂಗನಾ ರನೌತ್ ಮುಂಬೈಯನ್ನು ಪಿಒಕೆ ಜೊತೆ ಹೋಲಿಸಿದ್ದ ಸಂದರ್ಭದಲ್ಲಿ ಉರ್ಮಿಳಾ ಮಾತೋಂಡ್ಕರ್ ತಿರುಗೇಟು ನೀಡಿದ್ದರು.ಉರ್ಮಿಳಾ ಮಾತೋಂಡ್ಕರ್ ಅವರನ್ನು ಇತ್ತೀಚೆಗೆ ಶಿವಸೇನೆ ಅವರು ರಾಜ್ಯಪಾಲರ ಕೋಟಾದಿಂದ ಶಾಸಕಾಂಗ ಮಂಡಳಿಗೆ ನಾಮಕರಣ ಮಾಡಲಾಯಿತು.

Section: 
English Title: 
Actor-turned-politician Urmila Matondkar is likely to join Shiv Sena on Monday
News Source: 
Home Title: 

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರುವ ಸಾಧ್ಯತೆ

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರುವ ಸಾಧ್ಯತೆ
Caption: 
file photo
Yes
Is Blog?: 
No
Tags: 
Facebook Instant Article: 
Yes
Mobile Title: 
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರುವ ಸಾಧ್ಯತೆ
Publish Later: 
No
Publish At: 
Sunday, November 29, 2020 - 23:41
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
10