Mann Ki Baat: ನೂತನ ಕೃಷಿ ಕಾಯ್ದೆಯ ಲಾಭ ಹೇಳಿದ PM Modi, 10 ಪ್ರಮುಖ ಅಂಶಗಳು

Mann Ki Baat ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದಾಹರಣೆಗಳೊಂದಿಗೆ ನೂತನ ಕೃಷಿ ಕಾನೂನು ಯಾವ ರೀತಿ ರೈತರು ಹಾಗೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

Last Updated : Nov 29, 2020, 01:35 PM IST
  • ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೃಷಿ ಕಾನೂನುಗಳ ಕುರಿತು ವಿವರಣೆ ನೀಡಿದ ಪ್ರಧಾನಿ ಮೋದಿ.
  • ನೂತನ ಕೃಷಿ ಕಾನೂನಿನಿಂದ ರೈತರ ಜೀವನ ಗುಣಮಟ್ಟ ಹೆಚ್ಚಾಗಿದೆ.
  • ನೂತನ ಕೃಷಿ ಕಾನೂನುಗಳು ರೈತರಿಗೆ ಅಧಿಕಾರ ಮತ್ತು ಅವಕಾಶ ಎರಡನ್ನು ನೀಡಿವೆ.
Mann Ki Baat: ನೂತನ ಕೃಷಿ ಕಾಯ್ದೆಯ ಲಾಭ ಹೇಳಿದ PM Modi, 10 ಪ್ರಮುಖ ಅಂಶಗಳು title=

ನವದೆಹಲಿ: ಒಂದೆಡೆ ದೆಹಲಿ ಬಾರ್ಡರ್ ಮೇಲೆ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೃಷಿ ಕಾನೂನಿನ ಲಾಭಗಳ ಕುರಿತು ವಿವರಣೆ ನೀಡಿದ್ದಾರೆ.

ಇದನ್ನು ಓದಿ- ರೈತರ ಬೇಡಿಕೆಗಳ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ದ-ಅಮಿತ್ ಶಾ ಭರವಸೆ

Mann Ki Baat ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದಾಹರಣೆಗಳೊಂದಿಗೆ ನೂತನ ಕೃಷಿ ಕಾನೂನು ಯಾವ ರೀತಿ ರೈತರು ಹಾಗೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸುಧಾರಣೆಗಳು ರೈತರಿಗಾಗಿ ಹೊಸ ದ್ವಾರಗಳನ್ನೇ ತೆರೆದಿವೆ ಎಂದಿದ್ದಾರೆ. ದೇಶದ ರೈತರ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಸಂಸತ್ತು ಕೃಷಿ ಸುಧಾರಣೆಗಳಿಗೆ ಕಾನೂನಿನ ರೂಪ ನೀಡಿದೆ. ರೈತರಿಗಿದ್ದ ಅಡೆತಡೆಗಳು ದೂರವಾಗಿದ್ದು, ಅವರಿಗೆ ಹೊಸ ಅಧಿಕಾರ ಹಾಗೂ ಹೊಸ ಅವಕಾಶಗಳನ್ನು ನೀಡಿದೆ. ರೈತರ ಸಂಕಷ್ಟಗಳು ಕೂಡ ಇದೀಗ ಮೆಲ್ಲಗೆ ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- 'ಅವರು ಹತ್ತು ಸಾರಿ ನನಗೆ ಕರೆ ಮಾಡಿದರೂ ನಾನು ಅವರ ಕರೆಯನ್ನು ಸ್ವೀಕರಿಸುವುದಿಲ್ಲ'

ಮುಂದುವರೆದು ಮಾತನಾಡಿರುವ ಪ್ರಧಾನಿಗಳು ಬೆಳೆ ಖರೀದಿಸಿದ ಮೂರೇ ದಿನಗಳಲ್ಲಿ ಹಣ ಪಾವತಿ ಮಾಡುವುದು ಇದೀಗ ಅನಿವಾರ್ಯವಾಗಿದೆ. ಸಂಪೂರ್ಣ ಹಣ ಸಿಗದೇ ಹೋದಲ್ಲಿ ದೂರು ನೀಡುವ ವ್ಯವಸ್ಥೆ ಕೂಡ ಇದೆ. ಇಂತಹ ದೂರುಗಳನ್ನು ಕ್ಷೇತ್ರದ SDM ಗಳು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಕೂಡ ಇದೆ.

ರೈತರ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿರುವ 10 ಪ್ರಮುಖ ಅಂಶಗಳು ಇಲ್ಲಿವೆ
1. ಕೃಷಿ ಸುಧಾರಣೆಗಳಿಂದ ರೈತರ ಸಂಕಷ್ಟಗಳು ದೂರವಾಗಿವೆ.
2. ಫಸಲು ಖರೀದಿಯ 3 ದಿನಗಳಲ್ಲಿ ರೈತರ ಕೈಗೆ ಹಣ ಸಿಗಲಿದೆ.
3. ಸಂಪೂರ್ಣ ಹಣ ಪಾವತಿಯಾಗದೆ ಹೋದಲ್ಲಿ ದೂರು ನೀಡಬಹುದು.
4. ಎಸ್.ಡಿ.ಎಂ ಒಂದೇ ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕು.
5. ನೂತನ ಕೃಷಿ ಕಾನೂನುಗಳಿಂದ ರೈತರ ಸಮಸ್ಯೆಗಳು ದೂರವಾಗುತ್ತಿವೆ.
6. ಕೃಷಿ ಕಾನೂನಿನ ಕುರಿತಾದ ಭ್ರಮೆಗಳನ್ನು ನಿವಾರಿಸುವ ಆವಶ್ಯಕತೆ ಇದೆ.
7. ರೈತರ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
8. ನೂತನ ಕೃಷಿ ಕಾನೂನುಗಳಿಂದ ರೈತರಿಗೆ ಹೊಸ ಅವಕಾಶಗಳು ಸಿಕ್ಕಂತಾಗಿದೆ.
9. ನೂತನ ಕೃಷಿ ಕಾನೂನುಗಳಿಂದ ರೈತರಿಗೆ ಅಧಿಕಾರ ಸಿಕ್ಕಿದೆ.
10. ಕೃಷಿ ಸುಧಾರಣೆಗಳಿಂದ ರೈತರು ಬಂಧಮುಕ್ತರಾಗಿದ್ದಾರೆ.

ಇದನ್ನು ಓದಿ- ಪ್ರತಿಭಟನೆಗೆ ಪಂಜಾಬ್ ಕಾರಣವೇ ಹೊರತು ನಮ್ಮ ರೈತರಲ್ಲ- ಹರ್ಯಾಣ ಸಿಎಂ

ಅತ್ತ ರೈತರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಗ್ರಹವನ್ನು ತಿರಸ್ಕರಿಸಿದ್ದಾರೆ ಹಾಗೂ ಪ್ರತಿಭಟನೆ ನಡೆಸಲು ತಾವು ಬುರಾಡಿ ಗ್ರೌಂಡ್ ಗೆ ತೆರಳುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಕುರಿತು ರೈತರಿಗೆ ಮನವಿ ಮಾಡಿದ್ದ ಅಮಿತ್ ಷಾ ರೈತರಿಗೆ ಬುರಾಡಿ ಗ್ರೌಂಡ್ ಗೆ ತೆರಳಲು ಮನವಿ ಮಾಡಿದ್ದರು.

Trending News