ವಿಮುಕ್ತ ದೇವದಾಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಹಾಯಧನ

2020-21 ನೇ ಸಾಲಿನಲ್ಲಿ ಆದಾಯ ಉತ್ಪನ್ನಕರ ಚಟುವಟಿಕೆ ಅಡಿಯಲ್ಲಿ ಸಹಾಯಧನವನ್ನು ವಿತರಿಸಲು 1993-94 ರ ಸಮೀಕ್ಷಾ ಪಟ್ಟಿಯಲ್ಲಿರುವ ಹಾಗೂ 2007 ರ ಸಮೀಕ್ಷಾ ಪಟ್ಟಿಯಲ್ಲಿ ಮಾತ್ರ ಇರುವ ವಿಮುಕ್ತ ದೇವದಾಸಿ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

Last Updated : Nov 26, 2020, 09:18 PM IST
ವಿಮುಕ್ತ ದೇವದಾಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಹಾಯಧನ title=
ಸಾಂದರ್ಭಿಕ ಚಿತ್ರ

ಧಾರವಾಡ : 2020-21 ನೇ ಸಾಲಿನಲ್ಲಿ ಆದಾಯ ಉತ್ಪನ್ನಕರ ಚಟುವಟಿಕೆ ಅಡಿಯಲ್ಲಿ ಸಹಾಯಧನವನ್ನು ವಿತರಿಸಲು 1993-94 ರ ಸಮೀಕ್ಷಾ ಪಟ್ಟಿಯಲ್ಲಿರುವ ಹಾಗೂ 2007 ರ ಸಮೀಕ್ಷಾ ಪಟ್ಟಿಯಲ್ಲಿ ಮಾತ್ರ ಇರುವ ವಿಮುಕ್ತ ದೇವದಾಸಿ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ನಿಗದಿತ ಅರ್ಜಿ ನಮೂನೆಗಳನ್ನು  ಭರ್ತಿ ಮಾಡಿ, ನವೆಂಬರ್ 27, 2020 ರಿಂದ ಡಿಸೆಂಬರ್ 11, 2020 ರವರೆಗೆ ಯೋಜನಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು.

ಅರ್ಜಿಯೊಂದಿಗೆ ಖಾಯಂ ರಹವಾಸಿ ಪತ್ರ, ಬ್ಯಾಂಕ್ ಖಾತೆ ಪ್ರತಿ ಹಾಗೂ ಬ್ಯಾಂಕುಗಳಲ್ಲಿ ಯಾವುದೇ ಸುಸ್ತಿದಾರರು ಆಗಿರುವುದಿಲ್ಲ ಎಂಬುದರ ಪ್ರಮಾಣ ಪತ್ರ ಮತ್ತು ಇತ್ತೀಚಿನ ಭಾವಚಿತ್ರದ ದಾಖಲಾತಿಗಳೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾ ಜಿಲ್ಲಾ ಕಛೇರಿ, ಮನೆ ನಂ. 183, ಸೆಂಟ್ರಲ್ ಏಕ್ಸಸೈಜ್ ಕಾಲೋನಿ, ರಾಮಲಿಂಗೇಶ್ವರ ಮಸೀದಿ ಹತ್ತಿರ, ಗೋಕುಲ ರಸ್ತೆ, ಹುಬ್ಬಳ್ಳಿ -580030 ವಿಳಾಸಕ್ಕೆ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Trending News