ನವದೆಹಲಿ: ಭಾರತೀಯ ರೈಲ್ವೆ ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಕೊರತೆಯಿಂದಾಗಿ ಲಕ್ನೋ-ದೆಹಲಿ ಮತ್ತು ಮುಂಬೈ-ಅಹಮದಾಬಾದ್ ನಡುವಿನ ತೇಜಸ್ ಎಕ್ಸ್‌ಪ್ರೆಸ್ ರೈಲಿನ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಐಆರ್‌ಸಿಟಿಸಿ ನಿರ್ಧರಿಸಿದೆ.
ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್‌ಪ್ರೆಸ್ ಸೇವೆ ಇಂದಿನಿಂದ ಸ್ಥಗಿತ:
ಭಾರತೀಯ ರೈಲ್ವೆಯ (Indian Railways) ಐಆರ್‌ಸಿಟಿಸಿ ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು 24 ನವೆಂಬರ್ 2020 ರಿಂದ ನಿಲ್ಲಿಸಿದೆ. ನೀವೂ ಕೂಡ ಈ ರೈಲಿನ ಟಿಕೆಟ್ ಕಾಯ್ದಿರಿಸಿದ್ದರೆ, ಶೀಘ್ರದಲ್ಲೇ ನಿಮಗೆ ಟಿಕೆಟ್ ಮರುಪಾವತಿ ಸಿಗುತ್ತದೆ (Tejas Express ticket refund). ವಾಸ್ತವವಾಗಿ ಪ್ರಯಾಣಿಕರ ಕೊರತೆಯಿಂದಾಗಿ ತೇಜಸ್ ಎಕ್ಸ್‌ಪ್ರೆಸ್ (Tejas Express) ರೈಲುಗಳ ಸೇವೆಯನ್ನು ರದ್ದುಗೊಳಿಸುವುದಾಗಿ ರೈಲ್ವೆ ಘೋಷಿಸಿದೆ.
Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು
ಐಆರ್‌ಸಿಟಿಸಿ ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು ಏಕೆ ನಿಲ್ಲಿಸಿದೆ?
ಕೋವಿಡ್ 19 (Covid 19) ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತೇಜಸ್ ಎಕ್ಸ್‌ಪ್ರೆಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು ರದ್ದುಪಡಿಸಲಾಗಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಚಲಿಸುತ್ತಿರುವ ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು 24.11.2020 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಈ ರೈಲುಗಳನ್ನು ಮತ್ತೆ ಚಲಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಲಕ್ನೋ-ನವದೆಹಲಿ ತೇಜಸ್ ಎಕ್ಸ್‌ಪ್ರೆಸ್ ಕೂಡ ರದ್ದುಗೊಂಡಿದೆ (Lucknow-New Delhi Tejas Express)
ಭಾರತೀಯ ರೈಲ್ವೆಯ ಐಆರ್‌ಸಿಟಿಸಿ 2020 ರ ನವೆಂಬರ್ 23 ರಿಂದ ಲಖನೌ-ನವದೆಹಲಿ ನಡುವೆ ಸಂಚರಿಸುತ್ತಿದ್ದ ತೇಜಸ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕೂಡ ಸ್ಥಗಿತಗೊಳಿಸಿದೆ.
ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಪ್ರಮುಖ ಬದಲಾವಣೆ
ಈ ರೀತಿಯಾಗಿ ಪಡೆಯಿರಿ ಸಂಪೂರ್ಣ ರೀಫಂಡ್:
ಈ ತೇಜಸ್ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ನೀಡಲಾಗುವುದು. ಟಿಕೆಟ್‌ನಿಂದ ಯಾವುದೇ ರೀತಿಯ ರದ್ದತಿ ಶುಲ್ಕವನ್ನು ಕಡಿತಗೊಳಿಸಲಾಗುವುದಿಲ್ಲ. ಈ ರೈಲುಗಳಲ್ಲಿ ಇ-ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸುವ ಅಗತ್ಯವಿಲ್ಲ. ಟಿಕೆಟ್‌ಗಳನ್ನು ಐಆರ್‌ಸಿಟಿಸಿ (IRCTC) ಸ್ವತಃ ರದ್ದುಗೊಳಿಸುತ್ತದೆ ಮತ್ತು ಟಿಕೆಟ್ ಕಾಯ್ದಿರಿಸಿದ ಖಾತೆಗೆ ಹಣವನ್ನು ಹಿಂದಿರುಗಿಸಲಾಗುವುದು ಎಂದು ಐಆರ್‌ಸಿಟಿಸಿ ತಿಳಿಸಿದೆ.