ಬೆಂಗಳೂರು: ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿದರೆ ಅದನ್ನು ಜನರು ನಂಬಲಿದ್ದಾರೆ ಎನ್ನುವುದನ್ನು ನೀವು ಹಿಟ್ಲರ್ ಬಳಿ ಮಾಹಿತಿ ಸಚಿವನಾಗಿದ್ದ ಹಿಟ್ಲರ್ ಬಳಿ ಕಲಿತಿದ್ದಿರಿ ಎಂದು ಸಿದ್ದರಾಮಯ್ಯ ಬಿಜೆಪಿಯ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.
Repeat a lie 100 times & people will start believing it to be true. You learnt this from Goebbels, Hitler’s Information Minister.
PNB, CBI, the Finance Ministry & PMO slept at their job & you want to blame an unexecuted warrant in a junior court in 2016 in an unconnected case! https://t.co/H9OXyIAodx
— Siddaramaiah (@siddaramaiah) 20 February 2018
ಟ್ವಿಟ್ಟರ್ ನಲ್ಲಿ ಯಡಿಯೂರಪ್ಪನವರು 2015 ರಲ್ಲಿ ಸಿವಿಲ್ ಕೋರ್ಟ್ ನ ಆದೇಶವನ್ನು ಸಿದ್ದರಾಮಯ್ಯನವರು ಧಿಕ್ಕರಿಸಿದ ಬಗ್ಗೆ ಪ್ರಸ್ತಾಪಿಸುತ್ತಾ ಇದು ಕೂಡಾ 10 ಪರ್ಸೆಂಟ್ ಭಾಗವೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಯಿಸಿರುವ ಸಿದ್ದರಾಮಯ್ಯ "ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿದರೆ ಅದನ್ನು ಜನರು ನಂಬಲಿದ್ದಾರೆ ಎನ್ನುವುದನ್ನು ನೀವು ಹಿಟ್ಲರ್ ಬಳಿ ಮಾಹಿತಿ ಸಚಿವನಾಗಿದ್ದ ಹಿಟ್ಲರ್ ಬಳಿ ಕಲಿತಿದ್ದಿರಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಣಕಾಸು ಸಚಿವಾಲಯ,ಮತ್ತು ಪ್ರಧಾನ ಮಂತ್ರಿ ಕಚೇರಿಗಳು ತಮ್ಮ ಕಾರ್ಯನಿರ್ವಹಿಸಿದೆ ನಿದ್ರಿಸುತ್ತಿವೆ,ಆದರೆ ನೀವು ಮಾತ್ರ ನಮಗೆ ಯಾವುದೇ ಸಂಬಂಧಪಡದ, ವಾರಂಟ್ ಇಲ್ಲದ ಪ್ರಕರಣದ ಬಗ್ಗೆ ಆರೋಪ ಹೊರಿಸುತ್ತಿದ್ದಿರೀ" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಯಡಿಯೂರಪ್ಪನವರಿಗೆ ಉತ್ತರಿಸಿದ್ದಾರೆ.