ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ಆವೃತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮುಂಬೈ ತಂಡವು 5 ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
🏆 WE ARE THE CHAMPION5 💙#OneFamily #MumbaiIndians #Believe🖐🏼 #MIChampion5 #MIvDC pic.twitter.com/UvmskenYpD
— Mumbai Indians (@mipaltan) November 10, 2020
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳನ್ನು ಗಳಿಸಿತು.ಆರಂಭದಲ್ಲಿ 22 ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ (65) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಶಬ್ ಪಂತ್ (56) ನೆರವಾದರು.
🏆 CHAMPIONS! 🏆
Congratulations to #IPL2020 winners, Mumbai Indians! 🎉🎉
🇮🇳 Rohit Sharma and 🇳🇿 Trent Boult starred as they beat Delhi Capitals by five wickets 👏 pic.twitter.com/lhDkeUi0S2
— ICC (@ICC) November 10, 2020
ಈ 157 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರ 68 ಹಾಗೂ ಇಶಾನ್ ಕಿಶನ್ ಅವರ 33 ರನ್ ಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 18.4 ಓವರ್ ಗಳಲ್ಲಿ ಗೆಲುವಿನ ಗುರಿಯನ್ನು ತಲುಪಿತು ಆ ಮೂಲಕ ಐದನೇ ಬಾರಿಗೆ ಐಪಿಎಲ್ ಟ್ರೋಪಿಯನ್ನು ಗೆದ್ದ ದಾಖಲೆಯನ್ನು ಮುಂಬೈ ಬರೆಯಿತು.