Dhanteras 2020: ಪೂಜೆ ಹಾಗೂ ಖರೀದಿಯ ಶುಭ ಮುಹೂರ್ತ, ಈ ದಿನ ದಾನಕ್ಕು ವಿಶೇಷ ಮಹತ್ವ

ಈ ಬಾರಿ ಶುಕ್ರವಾರ  ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಧನತ್ರಯೋದಶಿ ಇದು ಎರಡು ಶಬ್ದಗಳ ಒಂದು ಶಬ್ದ ಧನ+ತ್ರಯೋದಶಿ ಅಂದರೆ, ಧನ+13ನೆ ದಿನ. ಇಲ್ಲಿದೆ ಪೂಜಾವಿಧಿ ಹಾಗೂ ಶುಭ ಮುಹೂರ್ತಗಳು. ಈ ದಿನ ದಾನಕ್ಕು ಕೂಡ ವಿಶೇಷ ಮಹತ್ವವಿದೆ.

Last Updated : Nov 10, 2020, 06:55 PM IST
  • ಈ ಬಾರಿ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ.
  • ಧನತ್ರಯೋದಶಿ ಇದು ಎರಡು ಶಬ್ದಗಳ ಒಂದು ಶಬ್ದ ಧನ+ತ್ರಯೋದಶಿ ಅಂದರೆ, ಧನ+13ನೆ ದಿನ.
  • ಈ ಶುಭ ದಿನದಂದು ದಾನಕ್ಕು ವಿಶೇಷ ಮಹತ್ವವಿದೆ.
Dhanteras 2020: ಪೂಜೆ ಹಾಗೂ ಖರೀದಿಯ ಶುಭ ಮುಹೂರ್ತ, ಈ ದಿನ ದಾನಕ್ಕು ವಿಶೇಷ ಮಹತ್ವ title=

ನವದೆಹಲಿ: ಈ ದಿನಗಳಲ್ಲಿ ದೇಶಾದ್ಯಂತ ಜನರು ದೀಪಾವಳಿ 2020 (Diwali 2020)ಗಾಗಿ ಕಾಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿದ್ಧತೆಗಳು ತೀವ್ರವಾಗಿ ನಡೆಯುತ್ತಿವೆ. ಜನರು ಈ ದಿನಗಳಲ್ಲಿ ತಮ್ಮ ಆಪ್ತರಿಗೆ ಉಡುಗೊರೆ ಮತ್ತು ಸಿಹಿತಿಂಡಿಗಳನ್ನು ಖರೀದಿಸಲು ಆರಂಭಿಸಿದ್ದಾರೆ.

ಇದನ್ನು ಓದಿ- Diwali 2020: ಈ ದೀಪಾವಳಿ ವಾಸ್ತುಶಾಸ್ತ್ರದ ಪ್ರಕಾರ ತೋರಣ ಹಚ್ಚಿ, ಸಫಲತೆ ಹಾಗೂ ಸಮೃದ್ಧಿಯ ಬಾಗಿಲು ತೆರೆಯಿರಿ

ದೀಪಾವಳಿ ಪರ್ವದಲ್ಲಿ ಧನತ್ರಯೋದಶಿಯ ಹಬ್ಬ ಕೂಡ ಆಚರಿಸಲಾಗುತ್ತದೆ. ಎರಡೇ ಎರಡು ದಿನಗಳ ಬಳಿಕ ಕುಬೇರನ ಹಬ್ಬ ಧನತ್ರಯೋದಶಿ ಆಚರಿಸಲಾಗುತ್ತಿದೆ. ಈ ಬಾರಿ ಶುಕ್ರವಾರ  ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಧನತ್ರಯೋದಶಿ ಇದು ಎರಡು ಶಬ್ದಗಳ ಒಂದು ಶಬ್ದ ಧನ+ತ್ರಯೋದಶಿ ಅಂದರೆ, ಧನ+13ನೆ ದಿನ. ಇಲ್ಲಿದೆ ಪೂಜಾವಿಧಿ ಹಾಗೂ ಶುಭ ಮುಹೂರ್ತಗಳು. ಈ ದಿನ ದಾನಕ್ಕು ಕೂಡ ವಿಶೇಷ ಮಹತ್ವವಿದೆ.

27 ನಿಮಿಷಗಳ ಶುಭ ಮುಹೂರ್ತ
ಈ ವರ್ಷ, ಧನತ್ರಯೋದಶಿಯ ಶುಭ ಸಮಯ ಸಂಜೆ 5.32 ರಿಂದ ಸಂಜೆ 5.59 ರವರೆಗೆ ಇರಲಿದೆ. ಕೇವಲ 27 ನಿಮಿಷಗಳ ಈ ಶುಭ ಸಮಯದಲ್ಲಿ ಪೂಜಿಸುವುದನ್ನು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಇದೇ ವೇಳೆ ಈ ದಿನದಂದು ಯಾರಾದರೂ ದೀಪವನ್ನು ದಾನ ಮಾಡಿದರೆ, ಅದು ಶುಭವಾಗಿರುತ್ತದೆ. ಮಾಹಿತಿಗಾಗಿ, ನವೆಂಬರ್ 13 ರಂದು ಧನತ್ರಯೋದಶಿಯ ದಿನ ಶಾಪಿಂಗ್ ಮಾಡಲು ಮೊದಲ ಮುಹೂರ್ತ  ಬೆಳಗ್ಗೆ 7 ರಿಂದ 10 ರವರೆಗೆ ಇರಲಿದೆ. ಆದರೆ, ಎರಡನೇ ಮುಹೂರ್ತ ಮಧ್ಯಾಹ್ನ 1 ರಿಂದ 2.30 ರವರೆಗೆ ಇರಲಿದೆ.

ಇದನ್ನು ಓದಿ- Diwali 2020: ಆರ್ಥಿಕ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ದೀಪಾವಳಿಯಂದು ಈ 4 ಉಪಾಯಗಳನ್ನು ಮಾಡಿ

ಯಾವ ಯಾವ ವಸ್ತುಗಳ ದಾನ ಶುಭಕರ
ವಸ್ತ್ರ ದಾನ

ವಸ್ತ್ರದಾನವನ್ನು ಮಹಾದಾನ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಧನತ್ರಯೋದಶಿಯ ದಿನ ವಸ್ತ್ರದಾನ ಆವಷ್ಯವಾಗಿ ಮಾಡಿ. ಅದರಲ್ಲೂ ವಿಶೇಷವಾಗಿ ಅತ್ಯಾವಶ್ಯಕ ಇರುವವರಿಗೆ ವಸ್ತ್ರಗಳ ದಾನ ಮಾಡಿ. ಇದರಿಂದ ಶುಭಫಲ ಪ್ರಾಪ್ತಿಯಾಗಲಿದೆ. ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಸಂಪನ್ನತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಅನ್ನ ದಾನ
ಧನತ್ರಯೋದಶಿಯ ದಿನ ಅನ್ನ ದಾನಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ವಿಶೇಷವಾಗಿ ಪಾಯಸ ಮತ್ತು ಪೂರಿಯನ್ನು ದಾನ ಮಾಡಿ.  ದೇವಿ ಲಕ್ಷ್ಮಿಯ ಪೂಜೆಯ ವೇಳೆ ಪಾಯಸವನ್ನು ಮುಖ್ಯ ರೂಪದಲ್ಲಿ ಶಾಮೀಲುಗೊಳಿಸಲಾಗುತ್ತದೆ. ಮನೆಗೆ ಅತಿಥಿಗಳನ್ನು ಕರೆದು ಅಥವಾ ದೇವಸ್ಥಾನಕ್ಕೆ ಹೋಗಿ ಅನ್ನದಾನ ಮಾಡಲಾಗುತ್ತದೆ. ಜೊತೆಗೆ ದಕ್ಷಿಣೆಯನ್ನು ನೀಡಿ. ಈ ದಾನದಿಂದ ದೇವಿ ಲಕ್ಷ್ಮಿ ಭಾರಿ ಪ್ರಸನ್ನಳಾಗುತ್ತಾಳೆ ಮತ್ತು ಆಶೀರ್ವಾದ ನೀಡುತ್ತಾಳೆ ಎನ್ನಲಾಗುತ್ತದೆ.

ಇದನ್ನು ಓದಿ- Dhanteras 2020: ಧನತ್ರಯೋದಶಿಯ ದಿನ ಅಪ್ಪಿ-ತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ, ಶುಭ ಎನ್ನಲಾಗಿದೆ

ತೆಂಗು ಮತ್ತು ಮಿಠಾಯಿಗಳ ದಾನ ಮಾಡಿ
ತೆಂಗಿನ ಕಾಯಿಯನ್ನು ಶ್ರಿಫಲ ಎಂದೂ ಕೂಡ ಹೇಳಲಾಗುತ್ತದೆ. ಹೀಗಾಗಿ ಪ್ರತಿ ಪೂಜೆಯಲ್ಲಿ ತೆಂಗಿನ ಕಾಯಿಯನ್ನು ಅತ್ಯಾವಶ್ಯಕವಾಗಿ ಶಾಮೀಲುಗೊಳಿಸಲಾಗುತ್ತದೆ. ಇದಲ್ಲದೆ ಮಿಠಾಯಿಯ ದಾನ ಕೂಡ ಮಾಡಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಶುಭ ಫಲ ಪ್ರಾಪ್ತಿಯಾಗುತ್ತದೆ.

ಕಬ್ಬಿಣ
ಧನತ್ರಯೋದಶಿಯ ದಿನ ಕಬ್ಬಿಣ ಅಥವಾ ಕಬ್ಬಿಣದಿಂದ ತಯಾರಿಸಲಾಗಿರುವ ವಸ್ತುವನ್ನು ಖರೀದಿಸಬಾರದು. ಆದರೆ, ಈ ದಿನ ಕಬ್ಬಿಣದಿಂದ ತಯಾರಿಸಲಾಗಿರುವ ವಸ್ತು ಅಥವಾ ಪಾತ್ರೆಯನ್ನು ದಾನವಾಗಿ ನೀಡುವುದು ಉತ್ತಮ ಎನ್ನಲಾಗುತ್ತದೆ. ಇದರಿಂದ ಶುಭಫಲ ಪ್ರಾಪ್ತಿಯಾಗುತ್ತದೇ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಸ್ಥೆ ಅಲ್ಲ ಇದರಿಂದ ಕೌರ್ಭಾಗ್ಯ ಕೂಡ ದೂರವಾಗುತ್ತದೆ ಹಾಗೂ ಸೌಭಾಗ್ಯದಲ್ಲಿ ಹೆಚ್ಚಳವಾಗುತ್ತದೆ.

Trending News