ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ

Last Updated : Oct 29, 2020, 01:06 PM IST
ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ  title=
file photo

ನವದೆಹಲಿ:  ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಎದೆನೋವಿನಿಂದ ದೂರಿದ ನಂತರ ಅವರನ್ನು ಅಹಮದಾಬಾದ್‌ನ ಸ್ಟರ್ಲಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು.

ಕೇಶುಭಾಯ್ ಪಟೇಲ್ 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದರು.ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಆರು ಬಾರಿ ಆಯ್ಕೆಯಾಗಿದ್ದರು. ಕೇಶುಭಾಯ್ ಪಟೇಲ್ ಆವರು 2012 ರಲ್ಲಿ ಬಿಜೆಪಿಯನ್ನು ತೊರೆದು ತಮ್ಮದೇ ರಾಜಕೀಯ ಪಕ್ಷವಾದ ಗುಜರಾತ್ ಪರಿವರ್ತನ ಪಕ್ಷವನ್ನು ಸ್ಥಾಪಿಸಿದರು. 2012 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಶಾವದಾರ್‌ನಿಂದ ಆಯ್ಕೆಯಾದರು ಆದರೆ ನಂತರ ಅನಾರೋಗ್ಯದ ಕಾರಣ 2014 ರಲ್ಲಿ ರಾಜೀನಾಮೆ ನೀಡಿದರು.

ಕೇಶುಭಾಯ್ ಪಟೇಲ್ 1928 ರಲ್ಲಿ ಜುನಾಗಡ ಜಿಲ್ಲೆಯ ವಿಶಾವದಾರ್ ಪಟ್ಟಣದಲ್ಲಿ ಜನಿಸಿದರು. ಅವರು 1945 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಪ್ರಚಾರಕ್ ಆಗಿ ಸೇರಿದರು. 1960 ರ ದಶಕದಲ್ಲಿ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

Trending News