ಮೆಹಬೂಬ ನಡೆ ವಿರೋಧಿಸಿ ಪಿಡಿಪಿ ತೊರೆದ ಮೂವರು ಹಿರಿಯ ನಾಯಕರು

ಪಿಡಿಪಿ ನಾಯಕರಾದ ಟಿಎಸ್ ಬಾಜ್ವಾ, ವೇದ ಮಹಾಜನ್ ಮತ್ತು ಹುಸೇನ್ ಎ ವಫಾ ತಮ್ಮ ಪಕ್ಷದ ನಾಯಕಿ ಮೆಹಬೂಬ ಮುಫ್ತಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

Last Updated : Oct 26, 2020, 07:26 PM IST
  • ಮೆಹಬೂಬ ಮುಫ್ತಿ ನಡೆ ಮತ್ತು ನಿಲುವಿಗೆ ಬೇಸತ್ತ ಪಿಡಿಪಿ ನಾಯಕರು
  • ಪಿಡಿಪಿಗೆ ರಾಜೀನಾಮೆ ಸಲ್ಲಿಸಿದ ಬಾಜ್ವಾ, ವೇದ ಮಹಾಜನ್, ಹುಸೇನ್ ವಫಾ
  • ಮೆಹಬೂಬ ಅವರಿಂದಾಗಿ ದೇಶಭಕ್ತಿ ಭಾವನೆಗೆ ನೋವುಂಟಾಗಿದೆ ಎಂದ ನಾಯಕರು
ಮೆಹಬೂಬ ನಡೆ ವಿರೋಧಿಸಿ ಪಿಡಿಪಿ ತೊರೆದ ಮೂವರು ಹಿರಿಯ ನಾಯಕರು title=
File Image

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಅರ್ಟಿಕಲ್ 370 ರದ್ದತಿ ತೀರ್ಮಾನ ವಿರೋಧಿಸಿ ಹೋರಾಟದ ದಾರಿ ಹಿಡಿದಿರುವ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ (Mehabooba Mufti) ಅವರಿಗೆ ಭಾರೀ ಹಿನ್ನಡೆಯಾಗಿದ್ದು ಮುಫ್ತಿ ಅವರ ರಾಜಕೀಯ ನಡೆಯನ್ನು ವಿರೋಧಿಸಿರುವ ಪಿಡಿಪಿ(PDP)ಯ ಮೂವರು ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪಿಡಿಪಿ ನಾಯಕರಾದ ಟಿಎಸ್ ಬಾಜ್ವಾ, ವೇದ ಮಹಾಜನ್ ಮತ್ತು ಹುಸೇನ್ ಎ ವಫಾ ತಮ್ಮ ಪಕ್ಷದ ನಾಯಕಿ ಮೆಹಬೂಬ ಮುಫ್ತಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. 'ತಾವು ಇತ್ತಿಚಿಗೆ ತೆಗೆದುಕೊಂಡ ಕೆಲವು ನಿಲುವುಗಳು ಹಾಗೂ ರಾಜಕೀಯ ನಡೆಗಳಿಂದ ನಮಗೆ ಅತೀವ ಬೇಸರವಾಗಿದೆ.. ತಮ್ಮ ಕೆಲವು ಅನಪೇಕ್ಷಿತ ಹೇಳಿಕೆಗಳು ಅದರಲ್ಲೂ, ದೇಶಭಕ್ತಿಗೆ ಸಂಬಂಧಿಸಿದ ಹೇಳಿಕೆಗಳು ನಮಗೆ ತುಂಬಾ ನೋವುಂಟುಮಾಡಿವೆ' ಎಂದು ರಾಜೀನಾಮೆ ನೀಡಿರುವ  ನಾಯಕರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ದೇಶವು ಸಂವಿಧಾನದ ಮೇಲೆ ನಡೆಯುತ್ತದೆ ಹೊರತು ಬಿಜೆಪಿಯ ಪ್ರಣಾಳಿಕೆ ಮೇಲೆ ಅಲ್ಲ -ಮೆಹಬೂಬಾ ಮುಫ್ತಿ

'ಜಮ್ಮು ಕಾಶ್ಮೀರದ ಧ್ವಜವನ್ನು ಹಾರಿಸಲು ಅವಕಾಶ ನೀಡದೇ ಹೋದರೆ, ರಾಷ್ಟ್ರಧ್ವಜವನ್ನೂ ಹಾರಿಸುವುದಿಲ್ಲ' ಎಂದು ಇತ್ತೀಚೆಗೆ ಮೆಹಬೂಬ ಮುಫ್ತಿ ಹೇಳಿದ್ದರು. ಇದು ದೇಶಾದ್ಯಂತ ವಿವಾದ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ಅವರು 14 ತಿಂಗಳ ಗೃಹಬಂಧನದಿಂದ ಹೊರಗೆ ಬಂದಿದ್ದರು. ಕಾಶ್ಮೀರದಲ್ಲಿ ಅರ್ಟಿಕಲ್ 370 ರದ್ದತಿ ನಿರ್ಧಾರ ಪ್ರಕಟವಾಗುತ್ತಿದ್ದಂತೆ, ಮೆಹಬೂಬ ಮುಫ್ತಿ ಅವರನ್ನು ಕೇಂದ್ರ ಸರಕಾರ ಗೃಹಬಂಧನದಲ್ಲಿ ಇರಿಸಿತ್ತು.
 

Trending News