#MannKiBaat: ಕರೋನಾ ಬಿಕ್ಕಟ್ಟಿನ ವೇಳೆ ಹಬ್ಬಗಳ ಆಚರಣೆಯಲ್ಲಿ ಸಂಯಮ ಮುಖ್ಯ

ದಸರಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

Last Updated : Oct 25, 2020, 12:40 PM IST
  • ಕರೋನಾ ಯುದ್ಧದಲ್ಲಿ ನಮಗೆ ಗೆಲುವು ನಿಶ್ಚಿತ. ಆದರೆ ಹಬ್ಬಗಳ ಸಮಯದಲ್ಲಿ ಎಲ್ಲರೂ ಸಂಯಮ ಕಾಯ್ದುಕೊಳ್ಳುವುದು ಬಹಳ ಮುಖ್ಯ.
  • ದೇಶದ ಗಡಿಗಳಲ್ಲಿ ನಮ್ಮ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವ ಸೈನಿಕರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ
  • ಖಾದಿ ಕೇವಲ ಬಟ್ಟೆಯಲ್ಲ ಅದೊಂದು ಜೀವನ ಪದ್ಧತ
#MannKiBaat: ಕರೋನಾ ಬಿಕ್ಕಟ್ಟಿನ ವೇಳೆ ಹಬ್ಬಗಳ ಆಚರಣೆಯಲ್ಲಿ ಸಂಯಮ ಮುಖ್ಯ title=

ನವದೆಹಲಿ: ದಸರಾ ಸಂದರ್ಭದಲ್ಲಿ ಇಂದು ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರೋನಾ ಅವಧಿಯಲ್ಲಿ ಸಂಯಮದಿಂದ ಹಬ್ಬಗಳನ್ನು ಆಚರಿಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.

ಮೊದಲನೆಯದಾಗಿ ದೇಶದ ಜನತೆಗೆ ದಸರಾ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಜಯದಶಮಿ ಎಂದರೆ ಕಷ್ಟಗಳನ್ನು ಎದುರಿಸಿ ಸಂಕಟದ ವಿರುದ್ಧ ಗೆಲ್ಲುವ ಹಬ್ಬ. ಕರೋನಾ ಯುದ್ಧದಲ್ಲಿ ನಮಗೆ ಗೆಲುವು ನಿಶ್ಚಿತ. ಆದರೆ ಹಬ್ಬಗಳ ಸಮಯದಲ್ಲಿ ಎಲ್ಲರೂ ಸಂಯಮ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಮಾಸ್ಕ್ (Mask) ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಹಬ್ಬಗಳನ್ನು ಆಚರಿಸಿ ಎಂದು ಕರೆ ನೀಡಿದರು.

ಕರೋನಾದಿಂದಾಗಿ ನಮ್ಮ ಹಬ್ಬಗಳ ಆಚರಣೆಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಮೊದಲೆಲ್ಲಾ ನವರಾತ್ರಿಯಲ್ಲಿ ರಾಮ್ ಲೀಲಾ ಪ್ರಮುಖ ಆಕರ್ಷಣೆಯಾಗಿತ್ತು. ದುರ್ಗಾ ಪಂಡಲ್‌ನಲ್ಲಿ ತಾಯಿ ದುರ್ಗಾ ಮಾತೆಯ ದರ್ಶನಕ್ಕಾಗಿ ಸಾಕಷ್ಟು ಜನ ಸಮೂಹ ಸೇರುತ್ತಿತ್ತು. ಹಲವೆಡೆ ದಸರಾ ಉತ್ಸವಗಳು ಅದ್ಧೂರಿಯಾಗಿ ಜರುಗುತ್ತಿದ್ದವು. ಆದರೆ ಈ ಬಾರಿ ಕರೋನಾದ ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲವೂ ಬದಲಾಗಿದೆ. ಈ ಸಂದರ್ಭದಲ್ಲಿ ನಮಗೆ ಸಂಯಮ ಮುಖ್ಯ. ಜೊತೆಗೆ ಹಬ್ಬದ ಸಂದರ್ಭದಲ್ಲಿಯೂ ಪದೇ ಪದೇ ಸಾಬೂನ್‌ನಿಂದ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯಬೇಡಿ ಎಂದು ಮತ್ತೊಮ್ಮೆ ದೇಶವಾಸಿಗಳಿಗೆ ಮನವಿ ಮಾಡಿದರು.

ಸೈನಿಕರಿಗಾಗಿ ನಿಮ್ಮ ಮನೆಗಳಲ್ಲಿ ದೀಪ ಬೆಳಗಿಸಿ: 
ಈ ಸಂದರ್ಭದಲ್ಲಿ ದೇಶದ ಗಡಿಗಳಲ್ಲಿ ನಮ್ಮ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವ ಸೈನಿಕರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ (Narendra Modi)  ಭಾರತ ಮಾತೆಯ ಈ ಧೈರ್ಯಶಾಲಿಗಳಿಗೆ ಗೌರವಾರ್ಥವಾಗಿ ನಾವು ಪ್ರತಿಯೊಬ್ಬರೂ ನಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸಬೇಕಾಗಿದೆ. ನೀವು ಗಡಿಯಲ್ಲಿದ್ದರೂ ಇಡೀ ದೇಶವು ನಿಮ್ಮೊಂದಿಗಿದೆ ಎಂದು ನನ್ನ ಧೈರ್ಯಶಾಲಿ ಸೈನಿಕರಿಗೆ ಹೇಳಲು ನಾನು ಬಯಸುತ್ತೇನೆ ಎಂದರು.

Local Toysಗಳಿಗೆ Vocal ಆಗುವ ಸಮಯ ಕೂಡಿಬಂದಿದೆ: ಪ್ರಧಾನಿ ಮೋದಿ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಖಾದಿ ಕೊಂಡಾಡಿದ ಮೋದಿ:
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಮೋದಿ, ಆರೋಗ್ಯದ ವಿಷಯದಲ್ಲಿ ಖಾದಿ ಬಾಡಿ ಫ್ರೆಂಡ್ಲಿ ಫ್ಯಾಬ್ರಿಕ್ ಆಗಿದೆ,  ಇಂದು ಖಾದಿ ಫ್ಯಾಶನ್ ಕೂಡ ಹೌದು. ಖಾದಿಯ ಜನಪ್ರಿಯತೆ ಹೆಚ್ಚುತ್ತಿದೆ. ಅಲ್ಲದೆ ವಿಶ್ವದ ಹಲವೆಡೆ ಖಾದಿಯನ್ನು ತಯಾರಿಸಲಾಗುತ್ತಿದೆ ಎಂದು ಮೆಕ್ಸಿಕೋದ ಬಗ್ಗೆ ಪ್ರಸ್ತಾಪಿಸಿದ ಮೋದಿ ಇಂದು ಮೆಕ್ಸಿಕೋದ ಖಾದಿ ಬಹಳ ಪ್ರಸಿದ್ಧಿ ಪಡೆದಿದೆ. ಮೆಕ್ಸಿಕೋದಲ್ಲಿ ಖಾದಿ ತಯಾರು ಮಾಡಲಾಗುತ್ತಿದೆ. ಖಾದಿ ಕೇವಲ ಬಟ್ಟೆಯಲ್ಲ ಅದೊಂದು ಜೀವನ ಪದ್ಧತಿ ಎಂದು ಮೆಕ್ಸಿಕೋ ತಿಳಿಸಿದೆ.  "ಮೆಕ್ಸಿಕೊದಲ್ಲಿ ಒಂದು ಸ್ಥಳ 'ಓಕ್ಸಾಕ'(Oaxaca). ಈ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರು ಖಾದಿಯನ್ನು ನೇಯ್ಗೆ ಕೆಲಸ ಮಾಡುವ ಅನೇಕ ಹಳ್ಳಿಗಳಿವೆ. ಇಂದು, ಇಲ್ಲಿ ಖಾದಿ 'ಓಹಾಕಾ ಖಾದಿ' ಎಂದು ಪ್ರಸಿದ್ಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮೂಲಕ ಸರ್ದಾರ್ ಪಟೇಲ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ:
ಅಕ್ಟೋಬರ್ 31 ರಂದು ನಾವೆಲ್ಲರೂ ಸರ್ದಾರ್ ವಲ್ಲಭಭಾಯ್ ಪಟೇಲ್ ಜಿ ಅವರ ಜನ್ಮ ದಿನಾಚರಣೆಯನ್ನು 'ರಾಷ್ಟ್ರೀಯ ಏಕತೆ ದಿನ' ಎಂದು ಆಚರಿಸುತ್ತೇವೆ.  ಸರ್ದಾರ್ ಪಟೇಲ್ ತಮ್ಮ ಸಂಪೂರ್ಣ ಜೀವನವನ್ನು ರಾಷ್ಟ್ರೀಯ ಏಕತೆಗಾಗಿ ಮೀಸಲಿಟ್ಟಿದ್ದರು. ನಾವೆಲ್ಲರೂ ಅವುಗಳನ್ನು ಮುಂದುವರೆಸಬೇಕು. ನಮ್ಮ ಪೂರ್ವಜರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳಬೇಕು ಎಂದು ಪಿಎಂ ಮೋದಿ ಹೇಳಿದರು.

ಇದೇ ವೇಳೆ ಭಾರತದ ನದಿಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಅವರು ಸಿಂಧೂ ನದಿಯಿಂದ ಕಾವೇರಿ ನದಿವರೆಗೆ ಹಬ್ಬಿರುವ ಸಂಸ್ಕೃತಿಯ ಬಗ್ಗೆ ತಿಳಿಸಿದರು. 

ಸವಾಲುಗಳನ್ನು ನಿಭಾಯಿಸುವುದನ್ನು ನಾವು ಇತಿಹಾಸದ ಮೂಲಕ ತಿಳಿಯಬೇಕಾಗಿದೆ-ಪ್ರಧಾನಿ ಮೋದಿ

ಕಾರ್ಯಕ್ರಮದ ಮೂಲಕ ದೇಶವಾಸಿಗಳಿಗೆ 'ಏಕ್ ಭಾರತ್ ಶ್ರೇಷ್ಠ ಭಾರತ್'   ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಮನವಿ ಮಾಡಿದ ಪ್ರಧಾನ ಮಂತ್ರಿ ಈ ವೆಬ್‌ಸೈಟ್- http://ekbharat.gov.in ನಲ್ಲಿ ರಾಷ್ಟ್ರೀಯ ಏಕೀಕರಣದ ನಮ್ಮ ಅಭಿಯಾನವನ್ನು ಮುನ್ನಡೆಸಲು ಹಲವು ಪ್ರಯತ್ನಗಳನ್ನು ಮಾಡಲಾಗುವುದು. ನೀವು ಈ ವೆಬ್‌ಸೈಟ್‌ಗೆ ಸಹಕರಿಸಬೇಕು. ಇಲ್ಲಿ ಪ್ರತಿ ರಾಜ್ಯದ ಬಗ್ಗೆ ವಿವರವನ್ನು ಪಡೆಯಬಹುದು. ಅಲ್ಲಿನ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ವಿವರವಾಗಿ ತಿಳಿಯಬಹುದು. ಅಂದರೆ ಉದಾಹರಣೆಗೆ ಪ್ರತಿಯೊಂದು ರಾಜ್ಯ ಮತ್ತು ಸಂಸ್ಕೃತಿಯು ವಿಭಿನ್ನ ಆಹಾರವನ್ನು ಹೊಂದಿದೆ. ಈ ಭಕ್ಷ್ಯಗಳನ್ನು ಸ್ಥಳೀಯ ವಿಶೇಷ ಪದಾರ್ಥಗಳಿಂದ ಅಂದರೆ ಧಾನ್ಯಗಳು ಮತ್ತು ಮಸಾಲೆಗಳಿಂದ ತಯಾರಿಸಲಾಗುತ್ತದೆ. ನಾವು 'ಏಕ್ ಭಾರತ್-ಶ್ರೇಷ್ಠ ಭಾರತ್' ವೆಬ್‌ಸೈಟ್‌ನಲ್ಲಿ ಈ ಸ್ಥಳೀಯ ಆಹಾರ ಪಾಕವಿಧಾನಗಳನ್ನು ಸ್ಥಳೀಯ ಪದಾರ್ಥಗಳ ಹೆಸರಿನೊಂದಿಗೆ ಹಂಚಿಕೊಳ್ಳಬಹುದು ಎಂದು ವಿವರಿಸಿದರು.

Trending News