ನವದೆಹಲಿ: ಮುಂದಿನ ವಾರ ಚುನಾವಣೆಗೆ ಮುನ್ನ ಬಿಹಾರದಲ್ಲಿ ಬಿಜೆಪಿಯು ಎಲ್ಲರಿಗೂ ಉಚಿತ ಕೊರೊನಾವೈರಸ್ ಲಸಿಕೆ ನೀಡುವುದಾಗಿ ತನ್ನ ಪ್ರನಾಳಿಕೆಯಲ್ಲಿ ನೀಡಿರುವ ಭರವಸೆಯು ಈಗ ಭಾರಿ ವಿವಾಧಕ್ಕೆ ಕಾರಣವಾಗಿದೆ.ಕೊರೊನಾ ಲಸಿಕೆಯನ್ನು ಬಿಜೆಪಿ ರಾಜಕೀಯ ಅಜೆಂಡಾಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಗಳು ವ್ಯಕ್ತವಾಗಿವೆ.
ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ-ಬಿಜೆಪಿ
'COVID-19 ಲಸಿಕೆ ಸಾಮೂಹಿಕ ಪ್ರಮಾಣದಲ್ಲಿ ಉತ್ಪಾದನೆಗೆ ಲಭ್ಯವಾದ ತಕ್ಷಣ, ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ಸಿಗುತ್ತದೆ. ಇದು ನಮ್ಮ ಮತದಾನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಮೊದಲ ಭರವಸೆ" ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಪ್ರಕಟಿಸಿದರು.
What about non-BJP ruled states?
Indians who didn't vote BJP will not get free Covid vaccine? https://t.co/kjid5IC5aH
— AAP (@AamAadmiParty) October 22, 2020
ಕರೋನವೈರಸ್ ಲಸಿಕೆ ತಯಾರಿಸಲು ಎಲ್ಲ ರಾಷ್ಟ್ರಗಳು ಇನ್ನೂ ಪ್ರಯೋಗಗಳನ್ನು ನಡೆಸುತ್ತಿವೆ. ಈಗ ಬಿಜೆಪಿ ನಡೆಯನ್ನು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷವು ಬಿಜೆಪಿಯೇತರ ಆಡಳಿತದ ರಾಜ್ಯಗಳ ಬಗ್ಗೆ ಏನು? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ಸಿಗುವುದಿಲ್ಲವೇ?" - ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ಟ್ವೀಟ್ ಮಾಡಿದ್ದು, ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ನಿಲುವು ಸ್ಪಷ್ಟ ಲೋಕ ಜನ ಶಕ್ತಿ ಪಕ್ಷ ಎನ್ಡಿಎ ಮೈತ್ರಿಕೂಟದ ಭಾಗವಲ್ಲ-ಭೂಪೇಂದರ್ ಯಾದವ್
ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು 'ಕರೋನಾ ಲಸಿಕೆಯನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತಿದೆ. ಅದು ಸಿದ್ಧವಾದಾಗ, ಲಸಿಕೆ ವಿತರಿಸುವ ಬಗ್ಗೆ ವಿಸ್ತಾರವಾದ ಯೋಜನೆಯನ್ನು ನಾವು ಸಿದ್ಧಪಡಿಸಿದ್ದೇವೆ, ಅವರಿಗೆ ಆದ್ಯತೆಗೆ ಅನುಗುಣವಾಗಿ ನೀಡಲಾಗುವುದು. ಪ್ರತಿ ರಾಜ್ಯಕ್ಕೂ ಉಚಿತ ಕರೋನವೈರಸ್ ಲಸಿಕೆ ನೀಡಲಾಗುವುದು" ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು .
ಕೆಲವರು #vaccineelectionism ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಿದ್ದಾರೆ.