ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ, ಸಜ್ಜಾದ್ ಲೋನ್ ಮತ್ತು ಇತರ ಪ್ರಾದೇಶಿಕ ಗುಂಪುಗಳೊಂದಿಗೆ 370 ನೇ ವಿಧಿ ಪುನಃಸ್ಥಾಪನೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಪರಿಹಾರಕ್ಕಾಗಿ ಮೈತ್ರಿ ಘೋಷಿಸಿದ್ದಾರೆ.
ಜಾಮೀನಿನ ಮೇಲೆ ಫಾರೂಕ್ ಅಬ್ದುಲ್ಲಾ ಸಹೋದರಿ, ಪುತ್ರಿ ಬಿಡುಗಡೆ
'ನಾವು ಈ ಮೈತ್ರಿಯನ್ನು ಗುಪ್ಕರ್ ಘೋಷಣೆಗಾಗಿ ಪೀಪಲ್ಸ್ ಅಲೈಯನ್ಸ್ ಎಂದು ಹೆಸರಿಸಿದ್ದೇವೆ. ನಮ್ಮ ಯುದ್ಧವು ಸಾಂವಿಧಾನಿಕ ಯುದ್ಧವಾಗಿದೆ, ಭಾರತ ಸರ್ಕಾರವು 2019 ರ ಆಗಸ್ಟ್ 5 ರ ಮೊದಲು ಅವರು ಹೊಂದಿದ್ದ ಹಕ್ಕುಗಳನ್ನು ರಾಜ್ಯದ ಜನರಿಗೆ ಹಿಂದಿರುಗಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅಬ್ದುಲ್ಲಾ ಹೇಳಿದ್ದಾರೆ.
ಏಳು ತಿಂಗಳ ಬಂಧನದಿಂದ ಬಿಡುಗಡೆಯಾದ ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ "ಗುಪ್ಕರ್ ಘೋಷಣೆ" ಕುರಿತು ಮುಂದಿನ ಕ್ರಮಗಳನ್ನು ರೂಪಿಸಲು ನಾಷನಲ್ ಕಾನ್ಫರೆನ್ಸ್ ನ ಮುಖ್ಯಸ್ಥರು ತಮ್ಮ ಮನೆಯಲ್ಲಿ ಸಭೆ ಕರೆದಿದ್ದರು.
ಕಳೆದ ವರ್ಷ ಆಗಸ್ಟ್ನಲ್ಲಿ, ಕೇಂದ್ರವು ಸಂವಿಧಾನದ ಅಡಿಯಲ್ಲಿ ನೀಡಲಾದ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.