ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಸದ್ಯಕ್ಕೆ ಬಿಡುಗಡೆ ಸಿಗುವಂತೆ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 (Covid 19) ಪ್ರಸರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅವಿಷ್ಕಾರಗಳು ಹೊರಬರುತ್ತಿವೆ. ಏತನ್ಮಧ್ಯೆ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಏಜೆನ್ಸಿ (Australia national science agency) ನಡೆಸಿರುವ ಅಧ್ಯಯನ ಒಂದರ ಪ್ರಕಾರ ಮೊಬೈಲ್ ಫೋನ್ಗಳು ಮತ್ತು ನೋಟುಗಳಂತಹ ವಸ್ತುಗಳಲ್ಲಿ ಕರೋನಾವೈರಸ್ (Coronavirus) 28 ದಿನಗಳು ಜೀವಂತವಿರುವ ಸಾಧ್ಯತೆ ಇದೇ ಎಂಬ ಭಯಾನಕ ಅಂಶ ಹೊರಬಿದ್ದಿದೆ.
ತಾಪಮಾನ ಹೆಚ್ಚಾದಂತೆ ದುರ್ಬಲಗೊಳ್ಳುತ್ತಂತೆ ವೈರಸ್:
ಇದಲ್ಲದೆ ಈ ಅಧ್ಯಯನದಲ್ಲಿ ತಾಪಮಾನ ಹೆಚ್ಚಾದಂತೆ ವೈರಸ್ ದುರ್ಬಲಗೊಳ್ಳುತ್ತದೆ ಎಂಬ ಅಂಶವನ್ನು ಸಹ ಪತ್ತೆ ಹಚ್ಚಲಾಗಿದೆ. 20 ° C ತಾಪಮಾನದಲ್ಲಿ, ನಯವಾದ ಮೇಲ್ಮೈಗಳಲ್ಲಿ SARS-CoV-2 ಅತ್ಯಂತ ಪ್ರಬಲವಾಗಿದೆ ಎಂದು ಅಧ್ಯಯನದ ಸಮಯದಲ್ಲಿ ಕಂಡುಬಂದಿದೆ. ಈ ತಾಪಮಾನದಲ್ಲಿ ವೈರಸ್ ಗಾಜು, ಮೊಬೈಲ್ ಫೋನ್ (Mobile Phone), ಉಕ್ಕು ಮತ್ತು ಪ್ಲಾಸ್ಟಿಕ್ ನೋಟುಗಳಲ್ಲಿ 28 ದಿನಗಳ ಕಾಲ ವಾಸಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. 30 ° C ತಾಪಮಾನದಲ್ಲಿ ವೈರಸ್ನ ಬದುಕುಳಿಯುವಿಕೆಯ ಪ್ರಮಾಣ ಏಳು ದಿನಗಳವರೆಗೆ ಕಡಿಮೆಯಾದರೆ 40 ° C ನಲ್ಲಿ, ಅದು 24 ಗಂಟೆಗಳ ಕಾಲ ಕುಸಿಯಿತು. ಅಂದರೆ ಈ ಅಧ್ಯಯನದಲ್ಲಿ ತಾಪಮಾನ ಹೆಚ್ಚಳದೊಂದಿಗೆ ವೈರಸ್ ದುರ್ಬಲಗೊಂಡಿರುವುದು ಕಂಡುಬಂದಿದೆ.
ಕೊರೊನಾ ಲಸಿಕೆಯ ಪರೀಕ್ಷೆ ವಿವಿಧ ಹಂತದಲ್ಲಿದೆ- ಕೇಂದ್ರ ಸಚಿವ ಹರ್ಷವರ್ಧನ್
ಹಿಂದಿನ ಸಂಶೋಧನೆಗಿಂತ ಈ ಭಾರೀ ವಿಭಿನ್ನ ಪರಿಣಾಮ:
ವೈರಸ್ ಹತ್ತಿ ಮತ್ತು ಇತರ ವಸ್ತುಗಳ ಮೇಲೆ ಅಲ್ಪಾವಧಿವರೆಗಷ್ಟೇ ಬದುಕಬಲ್ಲದು. ಬಹಳ ಕಡಿಮೆ ತಾಪಮಾನದಲ್ಲಿ ಈ ವೈರಸ್ 14 ದಿನಗಳವರೆಗೆ ಜೀವಂತವಿದ್ದರೆ, ಗರಿಷ್ಠ ತಾಪಮಾನದಲ್ಲಿ ಕೇವಲ 16 ಗಂಟೆಗಳ ಕಾಲವಷ್ಟೇ ಬದುಕಬಲ್ಲದು ಎಂದು ಅಧ್ಯಯನ ಬಹಿರಂಗಪಡಿಸಿದೆ. ಹೊಸ ಫಲಿತಾಂಶಗಳು SARS-CoV-2 ರಂಧ್ರಗಳಿಲ್ಲದ ಮೇಲ್ಮೈಗಳಲ್ಲಿ ನಾಲ್ಕು ದಿನಗಳವರೆಗೆ ಬದುಕಬಲ್ಲವು ಎಂಬ ಹಿಂದಿನ ಸಂಶೋಧನೆಗಿಂತ ಈಗ ಹೆಚ್ಚು ಸಮಯದವರೆಗೆ ವೈರಸ್ ಇರಬಹುದೆಂದು ಸೂಚಿಸುತ್ತದೆ.
ಕರೋನಾದೊಂದಿಗಿನ ಯುದ್ಧದಲ್ಲಿ ಡೊನಾಲ್ಡ್ ಟ್ರಂಪ್ ಅವರ ಸ್ಪೀಡಿ ರಿಕವರಿ ರಹಸ್ಯ ಇದು
ಈ ರೀತಿ ಅಜಾಗರೂಕತೆಯಿಂದ ನಡೆದುಕೊಳ್ಳಬೇಡಿ:-
ಯಾವುದೇ ವ್ಯಕ್ತಿ ತಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್, ನೋಟುಗಳು ಇತ್ಯಾದಿಗಳನ್ನು ಸ್ಪರ್ಶಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಮತ್ತು ಅದೇ ಕೈಗಳಿಂದ ಮೂಗು ಅಥವಾ ಕಣ್ಣುಗಳನ್ನು ಮುಟ್ಟಿದರೆ ಸೋಂಕು ತಗಲುವ ಅಪಾಯ ಹೆಚ್ಚಿದೆ ಎಂದು ಆಸ್ಟ್ರೇಲಿಯನ್ ಸೆಂಟರ್ ಫಾರ್ ಡಿಸೀಸ್ (Centre for Disease Preparedness) ಸನ್ನದ್ಧತೆಯ ನಿರ್ದೇಶಕ ಟ್ರೆವರ್ ಡ್ರೂ ಹೇಳಿದ್ದಾರೆ.