ಮೆಂಗೈ ಕೌಂಟಿ: ಕರೋನಾವೈರಸ್ ಅನ್ನು ಎದುರಿಸಲು ಇಡೀ ಜಗತ್ತು ಹೋರಾಡುತ್ತಿದೆ. ಕರೋನಾ ಕಾಳಗದಿಂದ ತಪ್ಪಿಸಿಕೊಂಡರೆ ಸಾಕು ಎಂದು ವಿಶ್ವವೇ ಟೊಂಕ ಕಟ್ಟಿ ನಿಂತಿರುವಾಗ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಬಾಗಿಲು ತಟ್ಟಿದೆ. ಹೌದು ಚೀನಾದಲ್ಲಿ ಇತ್ತೀಚಿಗೆ ಮೂರು ವರ್ಷದ ಮಗುವಿಗೆ ಬುಬೊನಿಕ್ ಪ್ಲೇಗ್ ಸೋಂಕು ತಗುಲಿರುವುದು ಕಂಡುಬಂದಿದೆ. ಒಂದು ಕಾಲದಲ್ಲಿ 'ಬ್ಲ್ಯಾಕ್ ಡೆತ್' ಎಂದು ಭೀತಿ ಹುಟ್ಟಿಸಿದ್ದ ಬುಬೊನಿಕ್ ಪ್ಲೇಗ್ (Bubonic plague) ಈಗ ಮತ್ತೆ ಚೀನಾಕ್ಕೆ ಮರಳಿದೆ.
'ಬ್ಲ್ಯಾಕ್ ಡೆತ್' (Black Death) ರೂಪದಲ್ಲಿ ಹಾನಿ ಉಂಟುಮಾಡಿದ್ದ ಬುಬೊನಿಕ್ ಪ್ಲೇಗ್ನಿಂದಾಗಿ 2009ರಲ್ಲಿ ಅನೇಕ ಜನರು ಸಾವನ್ನಪ್ಪಿದರು. ಈಗ ನೈಋತ್ಯ ಚೀನಾದ (China) ಮೆನ್ಘೈ ಕೌಂಟಿಯಲ್ಲಿ ಮೂರು ವರ್ಷದ ಮಗುವಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಇದಲ್ಲದೆ ಮಗುವಿನಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಆದರೆ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈಗ ಚೀನಾದಲ್ಲಿ ಕೊರೊನಾವೈರಸ್ (Corornavirus) ಬಳಿಕ ಮತ್ತೊಂದು ಸಾಂಕ್ರಾಮಿಕ ರೋಗವನ್ನು ತಡೆಯುವ ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ.
ಸತ್ತ ಮೂರು ಇಲಿಗಳನ್ನು ಕಂಡು ಹಿಡಿದು ಸ್ಕ್ರೀನಿಂಗ್:
ವರದಿಯ ಪ್ರಕಾರ ಮೂರು ವರ್ಷದ ಮಗುವಿಗೆ ಸ್ಕ್ರೀನಿಂಗ್ ನಂತರ ಬುಬೊನಿಕ್ ಪ್ಲೇಗ್ ಇರುವುದು ಪತ್ತೆಯಾಗಿದೆ. ಯಾವುದೇ ಕಾರಣವಿಲ್ಲದೆ ಹಳ್ಳಿಯಲ್ಲಿ ಮೂರು ಇಲಿಗಳು ಶವವಾಗಿ ಪತ್ತೆಯಾದ ನಂತರ ತಪಾಸಣೆ ನಡೆಸಲಾಯಿತು. ಇದಕ್ಕೂ ಮೊದಲು ಬುಬೊನಿಕ್ ಪ್ಲೇಗ್ನಿಂದ ಗ್ರಾಮಸ್ಥನೊಬ್ಬ ಸಾವನ್ನಪ್ಪಿದ ನಂತರ ಆಗಸ್ಟ್ನಲ್ಲಿ ಉತ್ತರ ಮಂಗೋಲಿಯಾದ ಆಂತರಿಕ ಮಂಗೋಲಿಯಾದಲ್ಲಿ ಅಧಿಕಾರಿಗಳು ಈ ಗ್ರಾಮವನ್ನು ಮೊಹರು (ಸೀಲ್) ಮಾಡಿದ್ದರು. ನವೆಂಬರ್ 2019ರಲ್ಲಿ ಇನ್ನರ್ ಮಂಗೋಲಿಯಾದಲ್ಲಿ ನಾಲ್ಕು ಬುಬೊನಿಕ್ ಪ್ಲೇಗ್ ಪ್ರಕರಣಗಳು ವರದಿಯಾಗಿವೆ.
ಪ್ರತಿ 100 ವರ್ಷಗಳಿಗೊಮ್ಮೆ ಬರುತ್ತಂತೆ coronavirus ನಂತಹ ಮಹಾಮಾರಿ.. ! ಇಲ್ಲಿವೆ ಅಂಕಿ-ಅಂಶಗಳು
ಪ್ಲೇಗ್ ಎಂದರೇನು?
ವಾಸ್ತವವಾಗಿ ಪ್ಲೇಗ್ ಎಂಬುದು ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಂನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಸಣ್ಣ ಸಸ್ತನಿಗಳು ಮತ್ತು ಅವುಗಳ ಚಿಗಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಜೂನೋಟಿಕ್ ಬ್ಯಾಕ್ಟೀರಿಯಂ ಆಗಿದೆ. ಒಬ್ಬ ವ್ಯಕ್ತಿಗೆ ಸೋಂಕಿತ ಬ್ಯಾಕ್ಟೀರಿಯ ಕಚ್ಚಿದಾಗ ಬುಬೊನಿಕ್ ಪ್ಲೇಗ್ ಸಂಭವಿಸಬಹುದು.
ಕೆಲವೊಮ್ಮೆ ಬುಬೊನಿಕ್ ಪ್ಲೇಗ್ ಶ್ವಾಸಕೋಶವನ್ನು ತಲುಪಿದ ನಂತರ ನ್ಯುಮೋನಿಕ್ ಪ್ಲೇಗ್ ಆಗಿ ಬದಲಾಗುತ್ತದೆ (ಶ್ವಾಸಕೋಶದ ಸೋಂಕು). ಇದು ಆರಂಭದಲ್ಲಿ ಪತ್ತೆಯಾದರೆ ಮತ್ತು ಸಾಮಾನ್ಯ ಪ್ರತಿಜೀವಕಗಳನ್ನು ನೀಡಿದರೆ, ಅದು ಪ್ಲೇಗ್ ಅನ್ನು ಗುಣಪಡಿಸಲು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಬುಬೊನಿಕ್ ಪ್ಲೇಗ್ ಬಹಳ ಅಪಾಯಕಾರಿ ಕಾಯಿಲೆಯಾಗಿದ್ದು ಇದು ಅಜಾಗರೂಕತೆ ಅಥವಾ ತಡವಾಗಿ ಪತ್ತೆಹಚ್ಚುವಿಕೆಯಿಂದಾಗಿ ನಂತರ ನ್ಯುಮೋನಿಕ್ ಆಗುತ್ತದೆ.
ವ್ಯಕ್ತಿಯಿಂದ ವ್ಯಕ್ತಿಗೆ ಪರಿವರ್ತನೆಯ ಸಾಧ್ಯತೆ!
ಬ್ಯಾಕ್ಟೀರಿಯಾ ಅಥವಾ ವೈರಸ್ ಉಸಿರಾಟದ ಮೂಲಕ ಸೂಕ್ಷ್ಮ ಕಣಗಳ ಮೂಲಕ ತಲುಪಿದರೆ ಅದು ಸೋಂಕಿತ ವ್ಯಕ್ತಿಗೆ ಉಸಿರಾಟ ಅಥವಾ ಸೀನುವ ಮೂಲಕ ಸೋಂಕು ತಗುಲಿಸುತ್ತದೆ. ಸೋಂಕಿನ ಎರಡು ಹಂತಗಳಿವೆ.
ಇದು COVID-19 ಅಲ್ಲ ಚೀನಾದಿಂದ ಬಂದ ಪ್ಲೇಗ್: ಯುಎಸ್ ಅಧ್ಯಕ್ಷ ಟ್ರಂಪ್ ಹೊಸ ವರಸೆ
1. ಬುಬೊನಿಕ್ ಪ್ಲೇಗ್:
ಬುಬೊನಿಕ್ ಜಾಗತಿಕವಾಗಿ ಪ್ಲೇಗ್ನ ಸಾಮಾನ್ಯ ರೂಪವಾಗಿದೆ ಮತ್ತು ಇದು ಸೋಂಕಿತ ಚಿಗಟ ಕಡಿತದಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಪ್ರಕಾರ ಬುಬೊನಿಕ್ ಪ್ಲೇಗ್ನ ಮಾನವ ಹರಡುವ ಸಂಭವನೀಯತೆ ತೀರಾ ಕಡಿಮೆ. ಇದು ಶ್ವಾಸಕೋಶಕ್ಕೆ ಹರಡಬಹುದು. ಇದು ಶ್ವಾಸಕೋಶಕ್ಕೆ ಸೋಂಕು ತಗುಲಿದಾಗ ಅದು ಮಾರಣಾಂತಿಕ ನ್ಯುಮೋನಿಕ್ ಪ್ಲೇಗ್ ಆಗುತ್ತದೆ.
2. ನ್ಯುಮೋನಿಕ್ ಪ್ಲೇಗ್:
ಇದು ಪ್ಲೇಗ್ನ ಮಾರಕ ಮಟ್ಟವಾಗಿದೆ. ಕಾವು 24 ಗಂಟೆಗಳ ಒಳಗೆ ಕಡಿಮೆ ಮಾಡಬಹುದು. ನ್ಯುಮೋನಿಕ್ ಪ್ಲೇಗ್ನಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಯು ಹನಿಗಳ ಮೂಲಕ ಇತರ ವ್ಯಕ್ತಿಗಳಿಗೆ ಸಹ ಸೋಂಕು ತಗುಲಿಸಬಹುದು. ನೀವು ಚಿಕಿತ್ಸೆಯನ್ನು ಪಡೆಯದಿದ್ದರೆ ಅದು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು. 24 ಗಂಟೆಗಳ ಒಳಗೆ ಸೋಂಕು ಪತ್ತೆಯಾದರೆ ಚೇತರಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ.
ಬುಬೊನಿಕ್ ಪ್ಲೇಗ್ನ ಲಕ್ಷಣಗಳು:
ಜ್ವರ, ಶೀತ, ತಲೆ ಮತ್ತು ದೇಹದ ನೋವು ಮತ್ತು ದೌರ್ಬಲ್ಯ, ವಾಂತಿ ಮತ್ತು ವಾಕರಿಕೆ ಬುಬೊನಿಕ್ ಪ್ಲೇಗ್ ಲಕ್ಷಣಗಳಾಗಿವೆ. ದುಗ್ಧರಸ ಗ್ರಂಥಿಗಳಲ್ಲೂ ಉರಿಯೂತ ಕಂಡುಬರುತ್ತದೆ.
ತಡೆಗಟ್ಟುವಿಕೆ ಮತ್ತು ಚಿಕಿತ್ಸೆ:
ಬುಬೊನಿಕ್ ಪ್ಲೇಗ್ ತಡೆಗಟ್ಟಲು ಸತ್ತ ಪ್ರಾಣಿಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಪ್ಲೇಗ್ ಅನ್ನು ಗುಣಪಡಿಸಲು ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಬಹುದು. ಚಿಕಿತ್ಸೆಯು ಮೊದಲೇ ಪ್ರಾರಂಭವಾದರೆ ಚೇತರಿಕೆ ಸಾಧ್ಯ. ಪ್ಲೇಗ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಇದರ ಲಕ್ಷಣಗಳು ಕಂಡುಬರುವ ಜನರು ತಕ್ಷಣ ಚಿಕಿತ್ಸೆ ಪಡೆಯಬೇಕು. ಪ್ರಸ್ತುತ ಇದು ಕಾಂಗೋ, ಮಡಗಾಸ್ಕರ್ ಮತ್ತು ಪೆರುವಿನಲ್ಲಿ ಹೆಚ್ಚಾಗಿ ಹರಡಿದೆ.
ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ:
ಚೀನಾ ದೊಡ್ಡ ಪ್ರಮಾಣದಲ್ಲಿ ಪ್ಲೇಗ್ ಅನ್ನು ನಿವಾರಿಸಿದೆ, ಆದರೆ ಇನ್ನೂ ಅದರ ಪ್ರಕರಣಗಳು ಅಲ್ಲಿಗೆ ಬರುತ್ತಲೇ ಇವೆ. 2009 ರಿಂದ 2018 ರವರೆಗೆ 26 ಪ್ರಕರಣಗಳು ಮತ್ತು 11 ಸಾವುಗಳು ಸಂಭವಿಸಿವೆ. ಹದಿನಾಲ್ಕನೆಯ ಶತಮಾನದಲ್ಲಿ ಇದನ್ನು 'ಬ್ಲ್ಯಾಕ್ ಡೆತ್' ಎಂದು ಕರೆಯಲಾಗುತ್ತಿತ್ತು, ಇದು ಯುರೋಪಿನಲ್ಲಿತ್ತು. ಅಲ್ಲಿ 5 ಕೋಟಿಗೂ ಹೆಚ್ಚು ಸಾವುಗಳು ಸಂಭವಿಸಿವೆ.