/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಮತ್ತು ಇತರ 31 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಸ್ವಾಗತಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಈ ತೀರ್ಪು ರಾಮ್ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು ಲಖನೌ ನ್ಯಾಯಾಲಯವು ನೀಡಿದ ತೀರ್ಪಿನ ನಂತರ ಅಡ್ವಾಣಿ ಹೇಳಿದರು. ಅವರು, ಮತ್ತೊಬ್ಬ ಆರೋಪಿ ಮುರಳಿ ಮನೋಹರ್ ಜೋಶಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಎಲ್ಲಾ 32 ಆರೋಪಿಗಳು ಖುಲಾಸೆ

ಇದು ನ್ಯಾಯಾಲಯದ ಐತಿಹಾಸಿಕ ನಿರ್ಧಾರ. ಅಯೋಧ್ಯೆಯಲ್ಲಿ ಡಿಸೆಂಬರ್ 6 ರ ಘಟನೆಗೆ ಯಾವುದೇ ಪಿತೂರಿ ನಡೆದಿಲ್ಲ ಎಂದು ಇದು ಸಾಬೀತುಪಡಿಸುತ್ತದೆ. ನಮ್ಮ ಕಾರ್ಯಕ್ರಮ ಮತ್ತು ರ್ಯಾಲಿಗಳು ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ. ನಾವು ಸಂತೋಷವಾಗಿದ್ದೇವೆ, ಎಲ್ಲರೂ ಈಗ ರಾಮ್ ಮಂದಿರ ನಿರ್ಮಾಣದ ಬಗ್ಗೆ ಉತ್ಸುಕರಾಗಬೇಕು ಎಂದು ಜೋಶಿ ಹೇಳಿದರು.

1992 Babri mosque demolition case: ಎಲ್.ಕೆ.ಅಡ್ವಾಣಿಗೆ 100 ಪ್ರಶ್ನೆ ಕೇಳಿದ ನ್ಯಾಯಾಧೀಶರು...!

ನ್ಯಾಯಾಲಯವು ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿತು, ಮಸೀದಿ ಧ್ವಂಸ ಪೂರ್ವ ಯೋಜಿತವಲ್ಲ ಎಂದು ಹೇಳಿದೆ. ಆರೋಪಿಗಳ ವಿರುದ್ಧ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಅದು ಹೇಳಿದೆ.ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಕೋರಿತ್ತು. ಅವರಲ್ಲಿ ಇಪ್ಪತ್ತಾರು ಮಂದಿ ಉಪಸ್ಥಿತರಿದ್ದರು. 

ಅಡ್ವಾಣಿ ಮತ್ತು ಜೋಶಿ ಅವರಲ್ಲದೆ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಅವರು  ತೀರ್ಪಿನ ವೇಳೆ ಅನಾರೋಗ್ಯದ ಕಾರಣದಿಂದ ಹಾಜರಾಗಿರಲಿಲ್ಲ.

ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. 48 ಜನರ ವಿರುದ್ಧ ಆರೋಪಗಳನ್ನು ವಿಧಿಸಲಾಯಿತು, ಆದರೆ ವಿಚಾರಣೆಯ ಸಮಯದಲ್ಲಿ 16 ಮಂದಿ ಸಾವನ್ನಪ್ಪಿದ್ದರು. 32 ಆರೋಪಿಗಳಲ್ಲಿ ಎರಡು ಡಜನ್‌ಗೂ ಹೆಚ್ಚು ಮಂದಿ ಹಾಜರಿದ್ದರು.

Section: 
English Title: 
Babri mosque demolition case:BJP leader Lal Krishna Advani welcomed the judgement by the special CBI court
News Source: 
Home Title: 

ಬಾಬರಿ ಮಸೀದಿ ಧ್ವಂಸ ಪ್ರಕರಣ: ತೀರ್ಪು ಸ್ವಾಗತಿಸಿದ ಎಲ್.ಕೆ ಅಡ್ವಾಣಿ

 ಬಾಬರಿ ಮಸೀದಿ ಧ್ವಂಸ ಪ್ರಕರಣ:  ತೀರ್ಪು ಸ್ವಾಗತಿಸಿದ ಎಲ್.ಕೆ ಅಡ್ವಾಣಿ
Caption: 
Photo Courtsey : PTI
Yes
Is Blog?: 
No
Tags: 
Facebook Instant Article: 
Yes
Mobile Title: 
ಬಾಬರಿ ಮಸೀದಿ ಧ್ವಂಸ ಪ್ರಕರಣ: ತೀರ್ಪು ಸ್ವಾಗತಿಸಿದ ಎಲ್.ಕೆ ಅಡ್ವಾಣಿ
Publish Later: 
No
Publish At: 
Wednesday, September 30, 2020 - 15:48
Created By: 
Manjunath Naragund
Updated By: 
Manjunath Naragund
Published By: 
Manjunath Naragund