ಕೃಷಿ ಮಸೂದೆ ವಿರೋಧದ ಹಿನ್ನೆಲೆ; ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ

ಕಳೆದ ಭಾನುವಾರ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆ ಮಂಡನೆಯಾಗಿತ್ತು. ಚರ್ಚೆ ವೇಳೆ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರ ತರಲೊರಟಿರುವ ಕಾನೂನು ರೈತರಿಗೆ ಮಾರಕವಾಗಿದೆ. 

Written by - Yashaswini V | Last Updated : Sep 22, 2020, 09:35 AM IST
  • ಕಳೆದ ಭಾನುವಾರ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆ ಮಂಡನೆ
  • ಚರ್ಚೆ ವೇಳೆ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರ ತರಲೊರಟಿರುವ ಕಾನೂನು ರೈತರಿಗೆ ಮಾರಕವಾಗಿದೆ.
  • ವಿವಾದಿತ ಕೃಷಿ ಮಸೂದೆ ವಿರುದ್ಧ ಅಮಾನತುಗೊಂಡಿರುವ ಎಂಟು ರಾಜ್ಯಸಭಾ (Rajya Sabha) ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕೃಷಿ ಮಸೂದೆ ವಿರೋಧದ ಹಿನ್ನೆಲೆ; ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ title=

ನವದೆಹಲಿ: ವಿವಾದಿತ ಕೃಷಿ ಮಸೂದೆ ವಿರೋಧಿಸಿ‌ ರಾಜ್ಯಸಭೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ತಮ್ಮನ್ನು ಅಮಾನತುಗೊಳಿಸಿದ ಸಭಾಪತಿಗಳ ನಿರ್ಧಾರದ ವಿರುದ್ಧ ಹಾಗೂ ವಿವಾದಿತ ಕೃಷಿ ಮಸೂದೆ (Agriculture bill) ವಿರುದ್ಧ ಅಮಾನತುಗೊಂಡಿರುವ ಎಂಟು ರಾಜ್ಯಸಭಾ (Rajya Sabha) ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಕಳೆದ ಭಾನುವಾರ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆ ಮಂಡನೆಯಾಗಿತ್ತು. ಚರ್ಚೆ ವೇಳೆ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರ ತರಲೊರಟಿರುವ ಕಾನೂನು ರೈತರಿಗೆ (Farmers) ಮಾರಕವಾಗಿದೆ. ಇದರ ಬಗ್ಗೆ ಸಮರ್ಪಕವಾಗಿ ಚರ್ಚೆಯಾಗಬೇಕೆಂದು‌ ಒತ್ತಾಯಿಸಿದರು.‌ ಸರ್ಕಾರ ಚರ್ಚೆಗೆ ಅವಕಾಶ ನೀಡದಿದ್ದಾಗ ಬಾವಿಗಿಳಿದು ಪ್ರತಿಭಟನೆ ನಡೆಸಿದರು.‌ ಪರಿಸ್ಥಿತಿ ಕೈ‌ ಮೀರಿ ಸಭಾಧ್ಯಕ್ಷರ ಸ್ಥಾನಕ್ಕೆ ಘೆರಾವ್ ಹಾಕಲು ಮುಂದಾದರು. ಹೀಗೆ ಮಾಡಿದ ಎಂಟು ಮಂದಿ ಸಂಸದರನ್ನು ಸೋಮವಾರ ಉಪರಾಷ್ಟ್ರಪತಿಗಳೂ ಆದ ಸಭಾಪತಿ ವೆಂಕಯ್ಯ ನಾಯ್ಡು (Venkaiah Naidu) ಒಂದು ವಾರದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸಿದರು.

ಅಮಾನತುಗೊಂಡವರಲ್ಲಿ ಕರ್ನಾಟಕದ ನಾಸೀರ್ ಹುಸೇನ್ ಸೇರಿ ಎಂಟು ಸದಸ್ಯರಿದ್ದಾರೆ. ಅವರೆಂದರೆ ಡೆರೆಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್‌.

ಎರಡನೇ ಬಾರಿಗೆ ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ ನಾರಾಯಣ್ ಸಿಂಗ್ ಆಯ್ಕೆ

ಇವರೆಲ್ಲಾ ಈಗ ಪ್ರತಿಭಟನೆ ಮಾಡುತ್ತಿದ್ದ ತಮ್ಮನ್ನು ಅಮಾನತುಗೊಳಿಸಿದ ಸಭಾಪತಿ ವಿರುದ್ಧ ಅಮಾನತುಗೊಂಡಿರುವ ಎಂಟು ರಾಜ್ಯಸಭಾ ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆಯೇ ಪ್ರತಿಭಟನೆ ಆರಂಭಿರುವ ಸಂಸದರು ರಾತ್ರಿ ಪೂರ್ತಿ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿಯೇ ಮಲಗಿದ್ದರು.

ನ್ಯಾಯ‌ ಸಿಗುವವರೆಗೆ ಈ‌ ಜಾಗದಿಂದ ಕದಲುವುದಿಲ್ಲ:-
ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಆಹೋರಾತ್ರಿ ಧರಣಿ‌ ನಡೆಯುತ್ತಿರುವುದು ಇದೇ ಮೊದಲು. ಪ್ರತಿಭಟನಾಕಾರರು ರೈತರ ಪರವಾಗಿ ಹೋರಾಡಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಸರ್ಕಾರ ಹೇಳಿದ್ದಕ್ಕೆಲ್ಲಾ ಕೇಳಿಕೊಂಡು ಇರಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಸದರು ಈ ರೀತಿ ಆಹೋರಾತ್ರಿ ಪ್ರತಿಭಟನೆಗೆ ಮುಂದಾಗಿರುವುದರಿಂದ ಸರ್ಕಾರಕ್ಕೆ ಇರಿಸುಮುರಿಸು ಆಗುತ್ತಿದೆ.‌ 

ಈ ಹಿನ್ನಲೆಯಲ್ಲಿ ಉಪಸಭಾಪತಿ ಹರಿವಂಶ್ (Harivansh) ಅವರು ಬೆಳಿಗ್ಗೆಯೇ ಪ್ರತಿಭಟನೆ ನಡೆಯುತ್ತಿರುವ ಗಾಂಧಿ ಪ್ರತಿಮೆ ಬಳಿ ಆಗಮಿಸಿ ಸಂಸದರ ಮನವೊಲಿಸಲು ಪ್ರಯತ್ನಿಸಿದ್ದಾರೆ.‌ ಬೆಳಗಿನ‌ ಚಹಾ ನೀಡಿ ಸಂಸದರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ತಮ್ಮ‌ ಪ್ರತಿಭಟನೆ ಹತ್ತಿಕ್ಕಿದ ಸರ್ಕಾರ ಮತ್ತು ಸಭಾಪತಿ ವಿರುದ್ಧ ಸಂಸದರ ಆಕ್ರೋಶ ಕಡಿಮೆ ಆಗಿಲ್ಲ.‌ ಪ್ರತಿಭಟನೆ ಹಿಂಪಡೆಯಲು ಒಪ್ಪಿಲ್ಲ ಎಂದು ತಿಳಿದುಬಂದಿದೆ.

Trending News