/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಗಾಗ್ಗೆ ಆಧಾರ್ ನಿಯಮಗಳನ್ನು ತಿದ್ದುಪಡಿ ಮಾಡುತ್ತಿರುತ್ತದೆ. ನಿಮ್ಮ ಮಾಹಿತಿಯನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬೇಕಾದರೆ, ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ, ನಿಮಗೆ ಅನೇಕ ಸೇವೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್‌ನೊಂದಿಗೆ ತಕ್ಷಣ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ. ಯುಐಡಿಎಐ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಒಂದು ಮಾರ್ಗವನ್ನು ನೀಡಿದೆ.

ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು. ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ನೀವು ಹತ್ತಿರದ ಯಾವುದೇ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ವಿನಂತಿಯನ್ನು ನೀಡಬಹುದು.

E-Aadhaar ತೆರೆಯುವುದು ಹೇಗೆ? ಯುಐಡಿಎಐನಿಂದ ನಿಮ್ಮ 8 ಅಂಕಿಯ ಪಾಸ್ವರ್ಡ್ ಅನ್ನು ತಿಳಿಯಿರಿ

ಯಾವುದೇ ಪರಿಶೀಲನಾ ಪ್ರಕ್ರಿಯೆಗೆ ನೀವು ಆಧಾರ್ (Aadhaar) ಸಂಖ್ಯೆಯನ್ನು ಬಳಸಿದರೆ ನಿಮ್ಮ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ಈ ಒಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ತಪ್ಪು ಅಥವಾ ಹಳೆಯ ಸಂಖ್ಯೆ ಆಧಾರ್‌ಗೆ ಲಿಂಕ್ ಆಗಿದ್ದಲ್ಲಿ ನಿಮಗೆ ಒಟಿಪಿ ಸಿಗುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದಲ್ಲದೆ ನಾವು ಯಾವುದೇ ಡಾಕ್ಯುಮೆಂಟ್‌ಗೆ ಆಧಾರ್ ಅನ್ನು ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ.

PAN-Aadhaar ಲಿಂಕ್ ಮಾಡಿಲ್ಲವೇ? 10 ಸಾವಿರ ದಂಡದ ಜೊತೆಗೆ ಈ ಕಷ್ಟವೂ ಎದುರಾಗಬಹುದು

ಸಂಖ್ಯೆಯನ್ನು ಕೇವಲ 50 ರೂಪಾಯಿಗಳಿಗೆ ನವೀಕರಿಸಲಾಗುತ್ತದೆ :
ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೀವು ಆಧಾರ್ ಅನ್ನು ಲಿಂಕ್ ಮಾಡಲು ಬಯಸಿದರೆ ನೀವು ನಿಮ್ಮ ಹತ್ತಿರವಿರುವ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕು. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಇಲ್ಲಿ ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು :
ಆಧಾರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನೀವು ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಬಹುದು. ನಿಮ್ಮ ದೂರು ಅಥವಾ ಸಮಸ್ಯೆಯನ್ನು ಇ-ಮೇಲ್ ಮೂಲಕ help@uidai.gov.in ಗೆ ಬರೆಯಬಹುದು. ಈ ರೀತಿಯಾಗಿ ನೀವು ದೂರು ಸಲ್ಲಿಸಿದರೆ ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಯುಐಡಿಎಐ ಪ್ರಯತ್ನಿಸುತ್ತದೆ.

Section: 
English Title: 
Updating mobile number in Aadhaar is very easy, it is not necessary to show document
News Source: 
Home Title: 

ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ

ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ
Yes
Is Blog?: 
No
Tags: 
Facebook Instant Article: 
Yes
Highlights: 

ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಗಾಗ್ಗೆ ಆಧಾರ್ ನಿಯಮಗಳನ್ನು ತಿದ್ದುಪಡಿ ಮಾಡುತ್ತಿರುತ್ತದೆ. 

ಯುಐಡಿಎಐ ಪ್ರಕಾರ ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ಡಾಕ್ಯುಮೆಂಟ್ ಇಲ್ಲದೆ ನವೀಕರಿಸಬಹುದು.

Mobile Title: 
ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ
Publish Later: 
Yes
Publish At: 
Monday, September 14, 2020 - 14:34
Created By: 
Yashaswini V
Updated By: 
Yashaswini V