ನವದೆಹಲಿ: ಕೊರೊನಾವೈರಸ್ (Coronavirus) ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಗತ್ತು ದೊಡ್ಡ ಹಿನ್ನಡೆ ಅನುಭವಿಸಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ ಮಾನವ ಪ್ರಯೋಗಗಳನ್ನು ಪ್ರಸ್ತುತ ನಿಲ್ಲಿಸಲಾಗಿದೆ. ಟ್ರಯಲ್ ನಲ್ಲಿ ಭಾಗಿಯಾಗಿರುವ ವ್ಯಕ್ತಿಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ಈ ಟ್ರಯಲ್ ನಿಲ್ಲಿಸಲಾಗಿದೆ. ಅಸ್ಟ್ರಾಜೆನೆಕಾ ಪ್ರಕಾರ, ಇದೊಂದು ರುಟೀನ್ ಅಡೆತಡೆ ಎಂದೇ ಹೇಳಲಾಗುತ್ತಿದೆ, ಏಕೆಂದರೆ ಪರೀಕ್ಷೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ಅನಾರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ ಹೀಗಾಗಿ ಇದೊಂದು ರುಟೀನ್ ಅಡಚಣೆ ಎಂದೇ ಹೇಳಲಾಗುತ್ತಿದೆ.
ಆಕ್ಸ್ಫರ್ಡ್ ಮತ್ತು ಅಸ್ಟ್ರಾಜೆನೆಕಾದ ಈ ಲಸಿಕೆಯನ್ನು AZD1222 ಎಂದು ಹೆಸರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ವಿಶ್ವದ ಇತರ ಲಸಿಕೆ ಪ್ರಯೋಗಗಳಿಗೆ ಹೋಲಿಸಿದರೆ ಇದು ಮುಂದಿತ್ತು. ಭಾರತ ಸೇರಿದಂತೆ ಹಲವು ದೇಶಗಳು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಮೇಲೆ ನಿಗಾವಹಿಸಿವೆ . ಇದಕ್ಕೂ ಮೊದಲು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯು ಮಾರುಕಟ್ಟೆಗೆ ಮೊದಲು ಬರಲಿದೆ ಎಂಬ ಭರವಸೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
AFP ಪ್ರಕಟಿಸಿರುವ ವರದಿಯೊಂದರ ಪರಕಾರ, ಸಂಪೂರ್ಣ ವಿಶ್ವದಲ್ಲಿ ನಡೆಸಲಾಗುತ್ತಿದ್ದ ಈ ಲಸಿಕೆಯ ಟ್ರಯಲ್ ಗಳನ್ನು ನಿಲ್ಲಿಸಲಾಗಿದ್ದು. ಸ್ವತಂತ್ರ ತನಿಖೆಯ ಬಳಿಕ ಮಾತ್ರ ಇದನ್ನು ಮತ್ತೆ ಆರಂಭಿಸಲಾಗುವುದು ಎನ್ನಲಾಗಿದೆ. ವ್ಯಾಕ್ಸಿನ್ ನ 3 ನೇ ಹಂತದ ಟ್ರಯಲ್ ನಲ್ಲಿ ಸಾವಿರಾರು ಜನರು ಶಾಮೀಲಾಗಿದ್ದಾರೆ. ಪ್ರಸ್ತುತ ಇದರ ಮೂರನೇ ಹಂತದ ಪರೀಕ್ಷೆಯಲ್ಲಿ ಸುಮಾರು 30 ಸಾವಿರ ಜನರು ಶಾಮೀಲಾಗಿದ್ದಾರೆ. ಸಾಮಾನ್ಯವಾಗಿ ಒಂದು ವ್ಯಾಕ್ಸಿನ್ ಟ್ರಯಲ್ ನಲ್ಲಿ ಹಲವು ವರ್ಷಗಳೇ ಬೇಕಾಗುತ್ತವೆ. ಆದರೆ, ಕೊರೊನಾ ಪ್ರಕೋಪದ ತೀವ್ರತೆಯ ಹಿನ್ನೆಲೆ ಈ ಪರೀಕ್ಷೆಗಳನ್ನು ತುಂಬಾ ವೇಗವಾಗಿ ನಡೆಸಲಾಗುತ್ತಿದೇ.
ಈ ಕುರಿತು ಹೇಳಿಕೆ ನೀಡಿರುವ ಆಕ್ಸ್ಫರ್ಡ್ ಯುನಿವೆರ್ಸಿಟಿ ವಕ್ತಾರರು, ದೊಡ್ಡ ಪ್ರಮಾಣದ ಟ್ರಯಲ್ ನಲ್ಲಿ ಅಸ್ವಸ್ತತೆ ಎದುರಾಗುವುದು ಸಾಮಾನ್ಯ. ಆದರೆ, ಇದರ ಸ್ವತಂತ್ರ ತನಿಖೆ ನಡೆಸುವುದು ಅವಶ್ಯಕ. ಎರಡನೇ ಬಾರಿಗೆ ಆಕ್ಸ್ಫರ್ಡ್ ಯುನಿವೆರ್ಸಿಟಿ ವ್ಯಾಕ್ಸಿನ್ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.