ನವದೆಹಲಿ: ಇಂದು ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಆರಂಭವಾದ ಅಂತಿಮ ವಿಚಾರಣೆಯಲ್ಲಿ ನ್ಯಾಯಾಧಿಕರಣದ ಅವಧಿಯ ವಿಚಾರವಾಗಿ ಮೂರು ರಾಜ್ಯಗಳ ವಕೀಲರು ಅಸಮಾಧಾನಗೊಂಡ ಹಿನ್ನಲೆಯಲ್ಲಿ ಅಂತಿಮ ಹಂತದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ನ್ಯಾಯಾಧಿಕರಣದ ಅವಧಿ ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಶೀಘ್ರ ತೀರ್ಪು ನೀಡುವಂತೆ ಪತ್ರ ನೀಡುವಂತೆ ಪತ್ರ ಬರೆದಿದೆ,ಆದ್ದರಿಂದಾಗಿ ಫೆಬ್ರುವರಿ 22 ರ ಒಳಗೆ ಅಂತಿಮ ಹಂತದ ವಾದ ಮುಗಿಸುವಂತೆ ಮೂರು ರಾಜ್ಯಗಳ ವಕೀಲರಿಗೆ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ತ್ರಿ ಸದಸ್ಯ ಪೀಠ ಸೂಚಿಸಿದೆ.ಆದರೆ ನ್ಯಾಯಾಧಿಕರಣದ ಈ ಸೂಚನೆಗೆ ಮೂರು ರಾಜ್ಯಗಳ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಜಾ ದಿನಗಳನ್ನು ಹೊರತು ಪಡಿಸಿ ಕೇವಲ 11 ದಿನಗಳಲ್ಲಿ ಸಮರ್ಪಕವಾದ ಮಂಡಿಸಲು ಸಾಧ್ಯವಿಲ್ಲ ಒಂದುವೇಳೆ ಮಂಡಿಸಿದರೆ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಧಿಕರಣದ ಅವಧಿ ಹೆಚ್ಚಿಸುವ ಕುರಿತು ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ವಕೀಲರು ತಿರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಾಧಿಕರಣಕ್ಕೆ ನ್ಯಾಯಂಗ ನಿಂಧನೆ ಅರ್ಜಿಯನ್ನು ವಿಚಾರಣೆ ನಡೆಸುವ ಅಧಿಕಾರ ಇಲ್ಲವೆಂದ ಕರ್ನಾಟಕ
ಇಂದು ವಿಚಾರಣೆ ವೇಳೆ, ಮೊದಲು ಗೋವಾ ಸಲ್ಲಿಸಿದ ನ್ಯಾಯಂಗ ನಿಂಧನೆ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಕರ್ನಾಟಕ ಪರ ವಕೀಲ ಅಶೋಕ್ ದೇಸಾಯಿ, ನ್ಯಾಯಾಧಿಕರಣಕ್ಕೆ ನ್ಯಾಯಂಗ ನಿಂಧನೆ ಅರ್ಜಿಯನ್ನು ವಿಚಾರಣೆ ನಡೆಸುವ ಅಧಿಕಾರ ಇಲ್ಲ ಈ ಅರ್ಜಿಯನ್ನು ಸುಪ್ರಿಂಕೊರ್ಟ್ ಮಾತ್ರ ವಿಚಾರಣೆ ನಡೆಬೇಕು ಎಂದು ತಿಳಿಸಿದರು. ಈ ವೇಳೆ ಗೋವಾ ಪರ ವಕೀಲ ಆತ್ಮರಾಮ್ ನಾಡಕರ್ಣಿ ನ್ಯಾಯಂಗ ನಿಂದನೆ ಅರ್ಜಿ ಪುನರ್ ಪರಿಶೀಲಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಫೆ 13 ರಂದು ನ್ಯಾಯಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಜೆ ಎಂ ಪಾಂಚಾಲ್ ತಿಳಿಸಿದ್ದಾರೆ. ಮೂಲ ಮಹಾದಾಯಿ ಅರ್ಜಿಯನ್ನು ಮತ್ತೆ ಗುರುವಾರದಿಂದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಧಿಕರಣ ತಿಳಿಸಿದೆ.