ಮೊದಲ ಭಾರತೀಯ ಬಹು-ತರಂಗ ಉಪಗ್ರಹ ಆಸ್ಟ್ರೋಸಾಟ್(Astrosat) ಬಾಹ್ಯಾಕಾಶದಲ್ಲಿ ಅಪರೂಪದ ಆವಿಷ್ಕಾರವನ್ನು ಮಾಡಿದೆ.
ಮೊದಲ ಭಾರತೀಯ ಬಹು-ತರಂಗ ಉಪಗ್ರಹ ಆಸ್ಟ್ರೋಸಾಟ್(Astrosat) ಬಾಹ್ಯಾಕಾಶದಲ್ಲಿ ಅಪರೂಪದ ಆವಿಷ್ಕಾರವನ್ನು ಮಾಡಿದೆ. ದೂರದ ಗೆಲಕ್ಸಿಗಳಿಂದ ಹೊರಹೊಮ್ಮುವ ತೀವ್ರವಾದ ನೇರಳಾತೀತ ಕಿರಣಗಳನ್ನು ಅದು ತನ್ನ ಕಣ್ಣಿನಲ್ಲಿ ಸೆರೆಹಿಡಿದಿದೆ.
ನವದೆಹಲಿ: ಮೊದಲ ಭಾರತೀಯ ಬಹು-ತರಂಗ ಉಪಗ್ರಹ ಆಸ್ಟ್ರೋಸಾಟ್(Astrosat) ಬಾಹ್ಯಾಕಾಶದಲ್ಲಿ ಅಪರೂಪದ ಆವಿಷ್ಕಾರವನ್ನು ಮಾಡಿದೆ. ದೂರದ ಗೆಲಕ್ಸಿಗಳಿಂದ ಹೊರಹೊಮ್ಮುವ ತೀವ್ರವಾದ ನೇರಳಾತೀತ ಕಿರಣಗಳನ್ನು ಅದು ತನ್ನ ಕಣ್ಣಿನಲ್ಲಿ ಸೆರೆಹಿಡಿದಿದೆ. ಈ ನಕ್ಷತ್ರಪುಂಜವು ಭೂಮಿಯಿಂದ 9.3 ಶತಕೋಟಿ ಪ್ರಕಾಶವರ್ಷಗಳಷ್ಟು ದೂರದಲ್ಲಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪುಣೆ ಮೂಲದ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ (ಐಯುಸಿಎಎ), ಸಂಸ್ಥೆಯ ನೇತೃತ್ವದಲ್ಲಿ ಜಾಗತಿಕ ತಂಡ ಈ ಸಾಧನೆಯನ್ನು ಮಾಡಿದೆ ಎಂದು ಹೇಳಿದೆ.
ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆಸ್ಟ್ರೋಸಾಟ್ ಐದು ವಿಶಿಷ್ಟ ಎಕ್ಸರೆ ಮತ್ತು ದೂರದರ್ಶಕಗಳನ್ನು ಹೊಂದಿದೆ ಎಂದು ಐಯುಸಿಎಎ ತಿಳಿಸಿದೆ.ಇವುಗಳು ಏಕಕಾಲಕ್ಕೆ ಕೆಲಸ ಮಾಡುತ್ತವೆ. AUDFS-01 ಎಂಬ ನಕ್ಷತ್ರಪುಂಜದಿಂದ ಹೊರಹೊಮ್ಮುವ ಬಲವಾದ ನೇರಳಾತೀತ ಕಿರಣವನ್ನು ಆಸ್ಟ್ರೋಸಾಟ್ ಸೆರೆಹಿಡಿದಿದೆ. ಇದು ಭೂಮಿಯಿಂದ 9.3 ಶತಕೋಟಿ ಪ್ರಕಾಶವರ್ಷಗಳಷ್ಟು ದೂರದಲ್ಲಿದೆ.
ಐಯುಸಿಎಎ ಸಹಾಯಕ ಪ್ರಾಧ್ಯಾಪಕ ಡಾ.ಕಣಕ್ ಷಾ ಮಾತನಾಡಿ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರವನ್ನು ಪ್ರಕಾಶ್ ವರ್ಷ ಎಂದು ಕರೆಯಲಾಗುತ್ತದೆ. ಇದು ಸುಮಾರು 95 ಟ್ರಿಲಿಯನ್ ಕಿಲೋಮೀಟರ್ಗೆ ಸಮಾನವಾಗಿರುತ್ತದೆ ಎಂದಿದ್ದಾರೆ. ತೀವ್ರವಾದ ನೇರಳಾತೀತ ಕಿರಣಗಳನ್ನು ಹುಡುಕುವ ಜಾಗತಿಕ ತಂಡದ ನೇತೃತ್ವ ಡಾ. ಕನಕ್ ಷಾ ವಹಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಅವರ ತಂಡ ನಡೆಸಿರುವ ಈ ಸಂಶೋಧನೆಯನ್ನು ಆಗಸ್ಟ್ 24 ರ 'ನೇಚರ್ ಆಸ್ಟ್ರೋನಾಮಿ' ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.
ಈ ತಂಡದಲ್ಲಿ ಭಾರತ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಯುಎಸ್ಎ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ ವಿಜ್ಞಾನಿಗಳು ಶಾಮೀಲಾಗಿದ್ದಾರೆ. ಈ ನೇರಳಾತೀತ ಕಿರಣಗಳು 2016 ರ ಅಕ್ಟೋಬರ್ ತಿಂಗಳಲ್ಲಿ ಸತತ 28 ದಿನಗಳವರೆಗೆ ಗೋಚರಿಸಿದ್ದವು. ಆದರೆ ಅವುಗಳನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಾಲಾವಕಾಶ ಬೇಕಾಯಿತು.
ಈ ಕುರಿತು ಹೇಳಿಕೆ ನೀಡಿರುವ IUCAA ನಿರ್ದೇಶಕ ಡಾ. ಸೋಮಕ್ ರಾಯ್ ಚೌಧರಿ, ದೂರದ ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಇಂದಿಗೂ ಕೂಡ ಬೆಳಕಿನ ಕಿರಣಗಳು ತೆಲಾಡುತ್ತಿವೆ. ಅವುಗಳ ಹುಡುಕಾಟಕ್ಕೆ ನಮಗೆ ಕಾಲಾವಕಾಶ ಬೇಕು. ಆದರೆ, ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ಭೊಮಿ ಹಾಗೂ ಬಾಹ್ಯಾಕಾಶದ ಉಗಮದ ಆರಂಭ, ಅವುಗಳ ವಯಸ್ಸು ಹಾಗೂ ಅವುಗಳ ಸಂಭವನೀಯ ಅಂತ್ಯದ ದಿನಾಂಕಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದ್ದಾರೆ.
ಕೆಲವು ಸಣ್ಣ-ಪುಟ್ಟ ಗೆಲಕ್ಸಿಗಳು ಕ್ಷೀರಪಥದ ನಕ್ಷತ್ರಪುಂಜಕ್ಕಿಂತ 10–100 ಪಟ್ಟು ವೇಗದಲ್ಲಿ ಹೊಸ ನಕ್ಷತ್ರಗಳನ್ನು ಸೃಷ್ಟಿಸುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಬ್ರಹ್ಮಾಂಡದ ಶತಕೋಟಿ ಗ್ಯಾಲಕ್ಸಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ-ಚಿಕ್ಕ ಗೆಲಕ್ಸಿಗಳಿವೆ ಎಂದು ಎಂದು ಅವರು ವಿವರಿಸಿದ್ದಾರೆ, ಇದರ ದ್ರವ್ಯರಾಶಿ ಕ್ಷೀರಪಥದ ಗೆಲಕ್ಸಿಗಳಿಗಿಂತ 100 ಪಟ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.
ಎರಡು ಭಾರತೀಯ ದೂರದರ್ಶಕಗಳ ಮೂಲಕ ನಡೆಸಲಾಗಿರುವ ಈ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಗೆಲಕ್ಸಿಗಳ ವಿಚಿತ್ರ ವರ್ತನೆಯು ಅವುಗಳಲ್ಲಿ ಅಸ್ತವ್ಯಸ್ತಗೊಂಡ ಹೈಡ್ರೋಜನ್ ವಿತರಣೆ ಮತ್ತು ಗೆಲಕ್ಸಿಗಳ ನಡುವಿನ ಘರ್ಷಣೆಯಿಂದಾಗಿ ಕಂಡುಬಂದಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಯಾವುದೇ ನಕ್ಷತ್ರದ ರಚನೆಗೆ ಹೈಡ್ರೋಜನ್ ಅತ್ಯಗತ್ಯ ಅಂಶವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗ್ಯಾಲಕ್ಸಿಗಳಿಗೆ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳನ್ನು ರೂಪಿಸಲು ಹೆಚ್ಚಿನ ಸಾಂಧ್ರತೆಯ ಹೈಡ್ರೋಜನ್ ಆವಶ್ಯಕವಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Next Gallery