ಬೋಫೋರ್ಸ್ ಹಗರಣ : ಫೆ.17ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ನ್ಯಾಯಾಲಯ

ಬೋಫೋರ್ಸ್ ಹಗರಣದ ತೀರ್ಪಿನ ಮರುವಿಚಾರಣೆಗೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ತೀಸ್ ಹಜಾರ್ ಕೋರ್ಟ್ ಫೆ.17ಕ್ಕೆ ಮುಂದೂಡಿದೆ. 

Last Updated : Feb 3, 2018, 04:05 PM IST
ಬೋಫೋರ್ಸ್ ಹಗರಣ : ಫೆ.17ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ನ್ಯಾಯಾಲಯ title=
Pic : ANI

ನವ ದೆಹಲಿ: ರಾಜಕೀಯ ಪ್ರೇರಿತವಾದ 64 ಕೋಟಿ ರೂ. ಮೌಲ್ಯದ ಬೋಫೋರ್ಸ್ ಹಗರಣದ ತೀರ್ಪಿನ ಮರುವಿಚಾರಣೆಗೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ತೀಸ್ ಹಜಾರ್ ಕೋರ್ಟ್ ಫೆ.17ಕ್ಕೆ ಮುಂದೂಡಿದೆ. 

ಈ ಪ್ರಕರಣದ ಆರೋಪಿಗಳಾದ ಯೂರೋಪ್ ಮೂಲದ ಕೈಗಾರಿಕೊದ್ಯಮಿಗಳಾದ ಹಿಂದುಜಾ ಸಹೋದರರನ್ನೂ ಒಳಗೊಂಡಂತೆ ಇತರ ಎಲ್ಲ ಆರೋಪಿಗಳನ್ನು ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಮೇ 31, 2005ರಲ್ಲಿ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಫೆ.2ರಂದು ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. 

ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ದೆಹಲಿಯಾ ತೀಸ್ ಹಜಾರ್ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದೆ.  

Trending News