ತಮ್ಮ ಬಾಳಸಂಗಾತಿ ಜೊತೆ ಹೆಚ್ಚು ವಯಸ್ಸಿನ ಅಂತರ ಹೊಂದಿರುವ ಕ್ರಿಕೆಟಿಗರ ಬಗ್ಗೆ ನಿಮಗೆಷ್ಟು ಗೊತ್ತು!

ಈ ಕ್ರಿಕೆಟಿಗರು ತಮ್ಮ ಆಟದ ಬಗ್ಗೆ ಎಷ್ಟು ಪ್ರಸಿದ್ಧರಾಗಿದ್ದಾದ್ದು ಅವರು ತಮ್ಮ ಆಟದ ಜೊತೆಗೆ  ವೈಯಕ್ತಿಕ ಜೀವನದ ಬಗ್ಗೆಯೂ ಮುಖ್ಯಾಂಶಗಳನ್ನು ಮಾಡಿದ್ದಾರೆ.

  • Aug 06, 2020, 10:34 AM IST

ನವದೆಹಲಿ: ಪ್ರೀತಿಯಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಪ್ರೀತಿ ಇರುವ ಕಡೆ ಸರಿ-ತಪ್ಪುಗಳ ಲೆಕ್ಕಾಚಾರವೂ ಇರುವುದಿಲ್ಲ. ಇದಕ್ಕೆ ಯಾವುದೇ ಮಿತಿಯೂ ಇರುವುದಿಲ್ಲ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ನಮ್ಮ ಕೆಲವು ಕ್ರಿಕೆಟಿಗರು ಸಹ ಇದನ್ನು ಸಾಬೀತುಪಡಿಸಿದ್ದಾರೆ, ಅವರ ಜೀವನ ಸಂಗಾತಿ ಹಾಗೂ ಅವರ ನಡುವೆ ದೊಡ್ಡ ವಯಸ್ಸಿನ ಅಂತರವನ್ನು ಹೊಂದಿದ್ದಾರೆ. ಆದ್ದರಿಂದ ಇಂದಿನ ಕಥೆ ಕ್ರಿಕೆಟಿಗರ ಜೀವನ ಸಂಗಾತಿ ಹಾಗೂ ಅವರ ನಡುವಿನ ವಯಸ್ಸಿನ ಅಂತರದ್ದಾಗಿದೆ. 
 

1 /5

1995 ರಲ್ಲಿ ಅಂಜಲಿ ಮೆಹ್ತಾ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿವಾಹವಾದರು. ಅಂಜಲಿ ಸಚಿನ್‌ಗಿಂತ 6 ವರ್ಷ ಹಿರಿಯರು.  

2 /5

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ತಮ್ಮ ಅದ್ಭುತ ಬೌಲಿಂಗ್‌ನಿಂದ ವಿಶ್ವದ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ತಲ್ಲಣಗೊಳಿಸಿದ್ದಾರೆ. ಅಂದಹಾಗೆ ಗ್ಲೆನ್‌ನ ಹೆಂಡತಿ ಸಾರಾ ಲಿಯೊನಾರ್ಡಿಗಿಂತ 12 ವರ್ಷ ಚಿಕ್ಕವಳು. ಇಟಾಲಿಯನ್ ಡಿಸೈನರ್ ಸಾರಾ ಮೆಕ್‌ಗ್ರಾತ್ ಅವರ ಎರಡನೇ ಪತ್ನಿ. ಮೆಕ್‌ಗ್ರಾತ್‌ರ ಮೊದಲ ಪತ್ನಿ ಜೇನ್ 2008 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು.

3 /5

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಅವರು 2013ರಲ್ಲಿ ಆಸ್ಟ್ರೇಲಿಯಾದ ಗೆಳತಿ ಶಾನಯ್ರಾ ಥಾಮ್ಸನ್ ಅವರನ್ನು ವಿವಾಹವಾದರು. ವಾಸಿಮ್ ಅಕ್ರಮ್ ಶಾನಯ್ರಾ ಅವರಿಗಿಂತ 17 ವರ್ಷ ಹಿರಿಯರು. ಶಾನಯ್ರಾ ಅಕ್ರಮ್ ಅವರ ಎರಡನೇ ಹೆಂಡತಿ. 2009 ರಲ್ಲಿ ಅವರ ಮೊದಲ ಪತ್ನಿ ಹುಮಾ ಸಾವನ್ನಪ್ಪಿದರು.  

4 /5

ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರ ಹೆಸರೂ ಸೇರಿದೆ. ಶಿಖರ್ 2012 ರಲ್ಲಿ ಆಯೆಷಾ ಮುಖರ್ಜಿ ಅವರನ್ನು ವಿವಾಹವಾದರು. ಆಯೆಷಾ ಶಿಖರ್ ಗಿಂತ 10 ವರ್ಷ ದೊಡ್ಡವಳು.

5 /5

ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಅವರು 2014 ರಲ್ಲಿ ರುಬಾಬ್ ಖಾನ್ ಅವರನ್ನು ವಿವಾಹವಾದರು. ರುಬಾಬ್ ಮತ್ತು ಶೋಯೆಬ್ ಅವರ ವಯಸ್ಸಿನ ಅಂತರ ಸಾಕಷ್ಟಿದೆ. ಶೋಯೆಬ್ ತನ್ನ ಹೆಂಡತಿಗಿಂತ 18 ವರ್ಷ ದೊಡ್ಡವರು.