ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಅವರು ಸ್ವಯಂ-ಪ್ರತ್ಯೇಕತೆಗೆ ಒಳಗಾಗಿದ್ದಾರೆ. ಅವರು ಶನಿವಾರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದ ಹಿನ್ನಲೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್ ಕ್ವಾರೆಂಟೈನ್ಗೆ (Quarantine) ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರವಿಶಂಕರ್ ಪ್ರಸಾದ್ಗೆ ಯಾವುದೇ ರೀತಿಯ ಲಕ್ಷಣಗಳಿಲ್ಲದಿದ್ದರೂ ಈಗಿರುವ ನಿಯಮಗಳಿಗೆ ಅನುಗುಣವಾಗಿ ಅವರು ಕ್ವಾರೆಂಟೈನ್ನಲ್ಲಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Union Minister Ravi Shankar Prasad goes into self-isolation as he met Home Minister Amit Shah on Saturday evening. His health, however, is fine: Ravi Shankar Prasad's Office
Home Minister had announced yesterday that he tested positive for #COVID19
— ANI (@ANI) August 3, 2020
ಗಮನಾರ್ಹವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit shah) ಅವರಿಗೆ ಕರೋನಾ ದೃಢಪಟ್ಟ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಮ್ಮನ್ನು ಭೇಟಿಯಾದವರನ್ನು ಮುನ್ನಚ್ಚರಿಕೆ ವಹಿಸುವಂತೆ ಷಾ ಮನವಿ ಮಾಡಿದ್ದಾರೆ.