ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಸರ್ವೋಚ್ಚ ನ್ಯಾಯಾಲಯ BS-4 ವಾಹನಗಳ ನೊಂದಣಿಗೆ ತಡೆ ನೀಡಿದೆ. ಮಾರ್ಚ್ 2020ರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವಾಹನಗಳ ಮಾರಾಟವಾಗಿದ್ದು, ಇದರ ಮೇಲೆ ಶಂಕೆಯನ್ನು ಪರಿಗಣಿಸಿ ಸುಪ್ರೀಂ ಈ ತಡೆ ನೀಡಿದೆ ಎನ್ನಲಾಗಿದೆ.
ಮಾರ್ಚ್ 31 ರವರೆಗೆ ಬಿಎಸ್ -4 ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯ ಆದೇಶಿಸಿತ್ತು. ನಂತರ, ಲಾಕ್ ಡೌನ್ ಕಾರಣ ಮಾರಾಟವನ್ನು ನಿಲ್ಲಿಸುವ ಕೋರಿಕೆಯ ಮೇರೆಗೆ, ಬಳಿಕ ಉಳಿದ 10 ಪ್ರತಿಶತದಷ್ಟು ವಾಹನಗಳನ್ನು ಮಾರಾಟ ಮಾಡಲು ಡೀಲರ್ ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಇದೀಗ ಮಾರ್ಚ್ ಮಾರಾಟದ ಅಂಕಿಅಂಶಗಳನ್ನು ಗಮನಿಸಿರುವ ನ್ಯಾಯಾಲಯ, ವಂಚನೆಯ ಶಂಕೆ ವ್ಯಕ್ತಪಡಿಸಿದೆ.
31 ಮಾರ್ಚ್ 2020 ರ ನಂತರ ಮಾರಾಟವಾದ ಬಿಎಸ್ -4 ವಾಹನಗಳನ್ನು ನೋಂದಾಯಿಸಬಾರದು ಎಂದು ಜುಲೈ 9 ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಕೋವಿಡ್ -19 ರ ಕಾರಣದಿಂದಾಗಿ ಬಿಎಸ್-IV ವಾಹನಗಳ ಮಾರಾಟಕ್ಕಾಗಿ ವಿತರಕರು ಈ ವಾಹನಗಳನ್ನು ವಿಸ್ತೃತ ಅವಧಿಯನ್ನು ಮೀರಿ ಮಾರಾಟ ಮಾಡಿದ್ದಾರೆಯೇ ಎಂಬುದನ್ನು ತನಿಖೆ ನಡೆಸಬೇಕೆಂದು ನ್ಯಾಯಾಲಯ ಸರ್ಕಾರವನ್ನು ಕೋರಿತ್ತು.
ಜುಲೈ 9 ರಂದು ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನ್ಯಾಯಪೀಠವು ಮಾರ್ಚ್ 31 ರ ನಂತರವೂ ವಾಹನ ವಿತರಕರು ಬಿಎಸ್ -4 ವಾಹನಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮೋಸ ಮಾಡುವ ಮೂಲಕ ನ್ಯಾಯಾಲಯವನ್ನು ಮರುಳು ಮಾಡಬೇಡಿ ಎಂದು ಅವರು ಡೀಲರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
1 ಏಪ್ರಿಲ್ 2020 ರಿಂದ ಬಿಎಸ್ -6 ಹೊರಸೂಸುವಿಕೆ ಮಾನದಂಡಗಳು ದೇಶಾದ್ಯಂತ ಜಾರಿಗೆ ಬಂದಿವೆ. ಬಿಎಸ್ -6 ಅನುಷ್ಠಾನಗೊಳಿಸುವ ಗಡುವನ್ನು ಮುಂದುವರಿಸಲು ನ್ಯಾಯಾಲಯ ನಿರಾಕರಿಸಿತ್ತು. ನಂತರ, ಲಾಕ್ಡೌನ್ನಲ್ಲಿ ನೀಡಲಾಗಿರುವ ಸಡಿಲಿಕೆಯ ಬಳಿಕ ಹತ್ತು ಪ್ರತಿಶತದಷ್ಟು ವಾಹನಗಳ ದಾಸ್ತಾನುಗಳನ್ನು ಸೀಮಿತ ಸಮಯದಲ್ಲಿ ಮಾರಾಟ ಮಾಡಲು ನ್ಯಾಯಾಲಯ ಅನುಮತಿ ನೀಡಿತ್ತು,