ಬೆಂಗಳೂರು: ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಚೀನಾ ಆಸಕ್ತಿ ತಳೆದಿದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇದೇ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಝಹೋಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಚೀನಾ ರಾಯಭಾರಿ ಲುವೋ ಝಾಹೊಯಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂಬ ಬಗ್ಗೆ ಮಾಹಿತಿ ತಿಳಿದಿದೆ, ಆದರೆ ಯಾವ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂಬುದರ ಕುರಿತು ಇನ್ನೂ ತಿರ್ಮಾನವಾಗಿಲ್ಲ. ಹೀಗಾಗಿ ಚೀನಾಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಚೀನಾ ರಾಯಭಾರಿ ಆಹ್ವಾನ ನೀಡಿದ್ದಾರೆ.
ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ವಿವರಿಸಿದ ಮುಖ್ಯಮಂತ್ರಿ, ಬಂಡವಾಳ ಹೂಡಿಕೆಗೆ ನಮ್ಮ ರಾಜ್ಯ ಪ್ರಶಸ್ತ ತಾಣವಾಗಿದೆ. ಕೈಗಾರಿಕೆಗಳ ಪಾರ್ಕ್ ಸ್ಥಾಪನೆಗೆ ನಮ್ಮಲ್ಲಿ ವಿಫುಲ ಅವಕಾಶ ಇದೇ ಎಂದು ತಿಳಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಆಲೋಚಿಸುವಂತೆ ಕೋರಿದ್ದರು.