/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ : ಎಲ್ಲರೂ ಕೋವಿಡ್ -19 ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೊರೊನಾವೈರಸ್ (Coronavirus) ಅನ್ನು ತಪ್ಪಿಸಲು ಅಸ್ತಿತ್ವದಲ್ಲಿರುವ ಕ್ರಮಗಳನ್ನು ನಾವು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಒಂದು ಸಂಶೋಧನೆಯಲ್ಲಿ ಯಾವುದೇ ಲಸಿಕೆ ಇಲ್ಲದೆ ಮತ್ತು ಯಾವುದೇ ಹೆಚ್ಚುವರಿ ಚಿಕಿತ್ಸೆಯಿಲ್ಲದೆ  ಕೋವಿಡ್ -19 (Covid 19) ರ ಸಾಂಕ್ರಾಮಿಕ ರೋಗವನ್ನು ನಿವಾರಿಸುವ ಮೂರು ಪರಿಹಾರಗಳಿವೆ ಎಂದು ಹೇಳಲಾಗಿದೆ. ಈ ಮೂರು ಕ್ರಮಗಳು ನಿಮ್ಮ ಕೈಯಲ್ಲಿಯೇ ಇವೆ ಎಂಬುದು ಇನ್ನೂ ವಿಶೇಷ.

ಸುದ್ದಿಯ ಪ್ರಕಾರ, ಕರೋನಮಂತ್ರವು ಯಾವುದೇ ರಾಕೆಟ್ ವಿಜ್ಞಾನವಲ್ಲ, ಆದರೆ ಕೇವಲ ಮೂರು ಮೂಲಭೂತ ನಿಯಮಗಳು. ಝೀ ಬಿಸಿನೆಸ್ ರಿಸರ್ಚ್ ತಂಡದ ಸುದ್ದಿಗಳ ಪ್ರಕಾರ ಕಾಲಕಾಲಕ್ಕೆ ಕೈ ತೊಳೆಯುವುದು, ಮಾಸ್ಕ್ (Mask) ಧರಿಸುವುದು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಇವು ಕರೋನಾ ವಿಮೋಚನೆಯ ಮೂರು ಮಂತ್ರಗಳು. ವಿಶ್ವ ಜನಸಂಖ್ಯೆಯ ಅರ್ಧದಷ್ಟು ಜನರು ಈ ಮೂರು ನಿಯಮಗಳನ್ನು ಪಾಲಿಸಿದರೆ, ಕರೋನಾದ ಸರಪಳಿ ಮುರಿಯಬಹುದು ಎಂದು ಸಂಶೋಧನಾ ವರದಿ ಹೇಳುತ್ತದೆ.

ಈ ಮೂರು ನಿಯಮಗಳನ್ನು ಅನುಸರಿಸಿದರೆ ಲಸಿಕೆ ಇಲ್ಲದೆ ಅಥವಾ ಚಿಕಿತ್ಸೆಯಿಲ್ಲದೆ ಕರೋನ ಏಕಾಏಕಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಪ್ರತಿಯೊಬ್ಬರೂ ಈ ಮೂರು ನಿಯಮಗಳನ್ನು ತಿಳಿದಿದ್ದಾರೆ ಮತ್ತು ಅದನ್ನು ಅನುಸರಿಸುತ್ತಲೂ ಇದ್ದಾರೆ. ಇದರಲ್ಲಿ ಹೊಸತೇನಿದೆ ಎಂದು ಯೋಚಿಸುತ್ತಿದ್ದೀರಾ...  ಈ ನಿಯಮಗಳನ್ನು ಸರಿಯಾದ ಮಾರ್ಗದಲ್ಲಿ ಅನುಸರಿಸಬೇಕು ಎಂಬುದೇ ನಾವೆಲ್ಲರೂ ಮಾಡಬೇಕಾದ ಕೆಲಸ.

ಕರೋನಾ: ಬಿಹಾರದಲ್ಲಿ ಲಾಕ್‌ಡೌನ್‌ ನಡುವೆಯೂ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದ ಕೋರ್ಟ್

ಮೊದಲು ಮಾಸ್ಕ್‌ಗಳ ಬಗ್ಗೆ ತಿಳಿಯೋಣ-  ಮಾಸ್ಕ್‌ಗಳನ್ನು ಧರಿಸುವ ಬಗ್ಗೆ ಜನರ ನಿರ್ಲಕ್ಷ್ಯವನ್ನು ಯಾರಿಂದಲೂ ಮರೆಮಾಡಲಾಗುವುದಿಲ್ಲ. ನಿರ್ಲಕ್ಷ್ಯದಿಂದಾಗಿ ಮಾಸ್ಕ್‌ ಕೇವಲ ಔಪಚಾರಿಕತೆಯಾಗಿತ್ತು. ಈಗ ಸುರಕ್ಷಿತವೆಂದು ಪರಿಗಣಿಸಲ್ಪಟ್ಟ N-95 ಮಾಸ್ಕ್‌ಗಳ (N-95 Mask) ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಮಾಸ್ಕ್‌ಗಳಿಂದ ಕರೋನಾ ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಮೂಗು ಮತ್ತು ಬಾಯಿಯನ್ನು ಚೆನ್ನಾಗಿ ಮುಚ್ಚದಿದ್ದರೆ ಮಾಸ್ಕ್‌ಗಳನ್ನು ಧರಿಸುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು.

ಆಗಾಗ್ಗೆ ಕೈ ತೊಳೆಯುವ ಪ್ರೋಟೋಕಾಲ್‌-
ಕೈ ತೊಳೆಯುವುದು ಅಥವಾ ಪದೇ ಪದೇ ಹ್ಯಾಂಡ್‌ವಾಶ್ (Hand Wash) ಮಾಡುವಂತೆ ಹೇಳಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಕೈಯಲ್ಲಿ ಸಾಬೂನು ಕನಿಷ್ಠ 20 ಸೆಕೆಂಡುಗಳ ಕಾಲ ಉಜ್ಜಿಕೊಂಡು ತೊಳೆಯಿರಿ. ಅಂತಿಮವಾಗಿ ಮಣಿಕಟ್ಟನ್ನು ಸ್ವಚ್ಛಗೊಳಿಸಿ. ಸ್ಯಾನಿಟೈಜರ್‌ಗಳಿಂದಲೂ ಕೈಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಕರೋನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ತಪ್ಪದೇ ಆಗಾಗ್ಗೆ ಕೈ ತೊಳೆಯಿರಿ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಚಿವ ಎಸ್.ಟಿ.‌ ಸೋಮಶೇಖರ್

ಇನ್ನು ಸಾಮಾಜಿಕ ಅಂತರದ (Social Distance) ಬಗ್ಗೆ ಮಾತನಾಡುವುದಾದರೆ ಸೀನುವುದು ಮತ್ತು ಕೆಮ್ಮುವುದರಿಂದ ಹನಿಗಳು ಹೊರಬರುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಇಬ್ವರ ನಡುವೆ ಕನಿಷ್ಠ 3 ರಿಂದ 6 ಅಡಿಗಳಷ್ಟು ಅಂತರ ಕಾಯ್ದುಕೊಳ್ಳಬೇಕು. ಸಾಮಾಜಿಕ ಅಂತರ ಕಡಿಮೆ ಮಾಡುವುದರಿಂದ ಕರೋನದ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪ್ರತಿಯೊಬ್ಬರೂ ಈ 3 ಮಂತ್ರಗಳನ್ನು ಸರಿಯಾಗಿ ಪಾಲಿಸಿದರೆ ಇಡೀ ಜಗತ್ತಿಗೇ ಮಾರಕವಾಗಿ ಕಾಡುತ್ತಿರುವ ಕರೋನಾವೈರಸ್ ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಬಹುದು.

Section: 
English Title: 
Coronavirus will die in these three ways, know the mantra of liberation from corona
News Source: 
Home Title: 

ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ

 ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ
Yashaswini V
Publish Later: 
Yes
Publish At: 
Saturday, July 25, 2020 - 08:40
Created By: 
Yashaswini V
Updated By: 
Yashaswini V