ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 3,713 ಕೊರೊನಾ ಪ್ರಕರಣ ದಾಖಲು...!

ತಮಿಳುನಾಡಿನ ಆರೋಗ್ಯ ಇಲಾಖೆಯ ಪ್ರಕಾರ ಶನಿವಾರದಂದು 3,713 ತಾಜಾ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ, ಆ ಮೂಲಕ ಸಾರ್ಸ್-ಕೋವ್ -2 ಸೋಂಕಿತ ಜನರ ಸಂಖ್ಯೆ ಈಗ 78,335 ಕ್ಕೆ ಏರಿದೆ ಮತ್ತು ಈ ಕಾಯಿಲೆಯಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ -1,025 ಆಗಿದೆ. ಕಳೆದ 24 ಗಂಟೆಗಳಲ್ಲಿ  68 ಸಾವು ನೋವುಗಳು ವರದಿಯಾಗಿದೆ.

Last Updated : Jun 27, 2020, 07:57 PM IST
ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 3,713 ಕೊರೊನಾ ಪ್ರಕರಣ ದಾಖಲು...! title=
ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿನ ಆರೋಗ್ಯ ಇಲಾಖೆಯ ಪ್ರಕಾರ ಶನಿವಾರದಂದು 3,713 ತಾಜಾ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ, ಆ ಮೂಲಕ ಸಾರ್ಸ್-ಕೋವ್ -2 ಸೋಂಕಿತ ಜನರ ಸಂಖ್ಯೆ ಈಗ 78,335 ಕ್ಕೆ ಏರಿದೆ ಮತ್ತು ಈ ಕಾಯಿಲೆಯಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ -1,025 ಆಗಿದೆ. ಕಳೆದ 24 ಗಂಟೆಗಳಲ್ಲಿ  68 ಸಾವು ನೋವುಗಳು ವರದಿಯಾಗಿದೆ.

ಇದನ್ನೂ ಓದಿ: ವುಹಾನ್‌ನಲ್ಲಿ ಅಂತ್ಯವಾಯಿತೇ ಕೊರೋನಾ ? ಏನ್ ಹೇಳುತ್ತೆ ಚೀನಾ..?

ಕಳೆದ ಎರಡು ದಿನಗಳಲ್ಲಿ ಕ್ರಮವಾಗಿ 3,645 ಮತ್ತು 3,509 ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿದ್ದವು. ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಶನಿವಾರ ಸಾವನ್ನಪ್ಪಿದವರ ಸಂಖ್ಯೆ 46 ಕ್ಕೂ ಹೆಚ್ಚು ಮತ್ತು ಗುರುವಾರ 45 ಎಂದು ವರದಿಯಾಗಿದೆ.

ರಾಜ್ಯವು ಶನಿವಾರ 2,737 ರೋಗಿಗಳನ್ನು ಬಿಡುಗಡೆ ಮಾಡಿದೆ, ಒಟ್ಟು ಚೇತರಿಕೆಯ ಸಂಖ್ಯೆಯನ್ನು 44,094 ಕ್ಕೆ ತಲುಪಿದೆ.ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 33,213 ಆಗಿದೆ.

Trending News