ಧಾರವಾಡ: 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ಇನ್ಸ್ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈಗ ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ. ಅರ್ಹತಾ ಷರತ್ತುಗಳಲ್ಲಿ (ವಯೋಮಿತಿ ಸೇರಿದಂತೆ) ಯಾವುದೇ ಬದಲಾವಣೆಗಳಿರುವುದಿಲ್ಲ ಎನ್ನಲಾಗಿದೆ.
ಆರ್.ಎಸ್.ಐ (ಸಿಎಆರ್/ ಡಿಎಆರ್) 45 ಹುದ್ದೆಗಳು 16-ಜುಲೈ 2020 ರವರೆಗೆ, ವಿಶೇಷ .ಆರ್.ಎಸ್.ಐ (ಕೆ.ಎಸ್.ಆರ್.ಪಿ)40 ಹುದ್ದೆಗಳು,ಎಸ್.ಐ (ಕೆ.ಎಸ್.ಐ.ಎಸ್.ಎಫ್)51 ಹುದ್ದೆಗಳು ಹಾಗೂ ಪಿ.ಎಸ್.ಐ.(ವೈರ್ಲೆಸ್) 26 ಹುದ್ದೆಗಳಿಗೆ 18 ಜುಲೈ 2020 ರವರೆಗೆ ವಿಸ್ತರಿಸಲಾಗಿದೆ ಎಂದು ಧಾರವಾಡ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.