ವಿಮಾ ಪಾಲಸಿಧಾರಕರಿಗೊಂದು ಲಾಭದ ಸುದ್ದಿ, ಸಿಗಲಿದೆ ಶೇ.15 ರಷ್ಟು ಹೆಚ್ಚುವರಿ ಬೋನಸ್

ಖಾಸಗಿ ವಲಯದ ಪ್ರಮುಖ ಜೀವ ವಿಮಾ ಕಂಪನಿಯಾಗಿರುವ ICICI Prudential ತನ್ನ ವಿಮಾಧಾರಕರಿಗೆ ಲಾಭದ ಸುದ್ದಿಯೊಂದನ್ನು ಪ್ರಕಟಿಸಿದೆ. ಆರ್ಥಿಕ ವರ್ಷ 2019-20 ರಲ್ಲಿ 788 ಕೋಟಿ ರೂ.ಜೊತೆಗೆ ಶೇ.15ರಷ್ಟು ಹೆಚ್ಚುವರಿ ಬೋನಸ್ ನೀಡುವುದಾಗಿ ಘೋಷಿಸಿದೆ.

Last Updated : Jun 19, 2020, 06:12 PM IST
ವಿಮಾ ಪಾಲಸಿಧಾರಕರಿಗೊಂದು ಲಾಭದ ಸುದ್ದಿ, ಸಿಗಲಿದೆ ಶೇ.15 ರಷ್ಟು ಹೆಚ್ಚುವರಿ ಬೋನಸ್ title=

ನವದೆಹಲಿ: ಖಾಸಗಿ ವಲಯದ ಪ್ರಮುಖ ಜೀವ ವಿಮಾ ಕಂಪನಿಯಾಗಿರುವ ICICI Prudential ತನ್ನ ವಿಮಾಧಾರಕರಿಗೆ ಲಾಭದ ಸುದ್ದಿಯೊಂದನ್ನು ಪ್ರಕಟಿಸಿದೆ. ಆರ್ಥಿಕ ವರ್ಷ 2019-20 ರಲ್ಲಿ 788 ಕೋಟಿ ರೂ.ಜೊತೆಗೆ ಶೇ.15ರಷ್ಟು ಹೆಚ್ಚುವರಿ ಬೋನಸ್ ನೀಡುವುದಾಗಿ ಘೋಷಿಸಿದೆ. ಸತತ 14ನೇ ವರ್ಷ ಕಂಪನಿ ತನ್ನ ವಿಮಾಧಾರಕರಿಗೆ ಬೋನಸ್ ನೀಡಲು ಹೊರಟಿದೆ. ಇದರಿಂದ ಕಂಪನಿಯ ಒಟ್ಟು 9 ಲಕ್ಷ ಗ್ರಾಹಕರಿಗೆ ಲಾಭ ಸಿಗಲಿದೆ.

ಈ ಕುರಿತು ಹೇಳಿಕೆ ನೀಡಿರುವ ICICI Prudential Life MD NS Kannan 2019-20ರ ಆರ್ಥಿಕ ವರ್ಷದಲ್ಲಿ ಘೋಷಿಸಲಾಗಿರುವ 788 ಕೋಟಿ ರೂ. ಬೋನಸ್ 2018-19ರ ಸಾಲಿನಲ್ಲಿ ಪ್ರಕಟಿಸಲಾಗಿದ್ದ ಬೋನಸ್ ಗಿಂತ ಶೇ.15ರಷ್ಟು ಹೆಚ್ಚಾಗಿದೆ. ವಿಮಾ ಕಂಪನಿಗಳ ವತಿಯಿಂದ ನೀಡಲಾಗುವ ಬೋನಸ್ ವಿಮಾ ಧಾರಾಕಾರ ಫಂಡ್ ನಿಂದ ಆದ ಲಾಭದ ಭಾಗವಾಗಿರುತ್ತದೆ .

ಕಂಪನಿ ನೀಡುವ ಈ ಬೋನಸ್ ವಿಮಾಧಾರಕರಿಗೆ ತಮ್ಮ ಆರ್ಥಿಕ ಗುರಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಮಾರ್ಚ್ 2020ರವರೆಗೆ ಕಂಪನಿ ವತಿಯಿಂದ ನಿರ್ವಹಿಸಲಾಗಿರುವ ಒಟ್ಟು ಆಸ್ತಿ 1,52,968 ಕೋಟಿ ರೂ. ಆಗಿದೆ ಹಾಗೂ ವಿಮಾ ಮೊತ್ತವು 14.80 ಲಕ್ಷ ಕೋಟಿ ರೂ, ಇದೆ. ICICI Prudential ಷೇರುಗಳು BSEಯಲ್ಲಿ ಶೇ.0.23ರಷ್ಟು ಕುಸಿತ ಕಂಡು 395.40 ರೂ.ಗಳ ಮೇಲೆ ವಹಿವಾಟು ನಡೆಸುತ್ತಿದೆ.

Trending News