ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಸ್ಥಿತಿ ಯಾವಾಗ, ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಡು ಬಡತನದಿಂದ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಎಷ್ಟೋ ಜನ, ನಂತರ ಸಾವಿರಾರು ರೂಪಾಯಿ ಕೂಡಿಹಾಕಿ ಸಿರಿವಂತ ಸೆಲೆಬ್ರಿಟಿಗಳಾಗಿ ಇಂದಿಗೂ ಮುಂದುವರೆದಿದ್ದಾರೆ.. ಕೆಲವರು ಸಿಕ್ಕ ಹಣವನ್ನು ಪೋಲು ಮಾಡಿ ತಿನ್ನಲು ಅನ್ನವಿಲ್ಲದೆ ಪರದಾಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸ್ಟಾರ್ ಆಗಿ ಮಿಂಚಿ ನಂತರ ಭಿಕ್ಷುಕರಾದ ಅನೇಕ ನಟ ನಟಿಯರಿದ್ದಾರೆ. ಈ ಪರಿಸ್ಥಿತಿ ಬರೀ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಇದೆ ಎಂದೇ ಹೇಳಬೇಕು. ಸಾಮಾನ್ಯವಾಗಿ ಮುಂಬೈನಲ್ಲಿ ಸೆಲೆಬ್ರಿಟಿ ಆಗಲು ಬರೀ ಗ್ಲಾಮರ್ ಇದ್ದರೆ ಸಾಲದು, ಅದೃಷ್ಟವೂ ಇರಬೇಕು. ಅದರಲ್ಲೂ ಇಲ್ಲಿ ಗೆಲುವಿಗಾಗಿ ಬಂದು ಸೋತವರೂ ಇದ್ದಾರೆ.
ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬೆಳಕಾಗಿದ್ದ ಆಕೆ ಈಗ ನಿರ್ಗತಿಕ ಸ್ಥಿತಿ ತಲುಪಿದ್ದಾಳೆ. ಆಕೆ ಬೇರೆ ಯಾರು ಅಲ್ಲ ನಟಿ ಮಿಥಾಲಿ ಶರ್ಮಾ..!
ಮುಂಬೈನಲ್ಲಿ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಮಿಥಾಲಿ ಶರ್ಮಾ ಕೆಲವು ಚಿತ್ರಗಳನ್ನು ಮಾಡಿ ನಂತರ ಮಾಡೆಲಿಂಗ್ ನತ್ತ ಮುಖ ಮಾಡಿದ್ದರು. ಹಲವು ತಿಂಗಳುಗಳಿಂದ ಯಾವುದೇ ಉತ್ತಮ ಆಫರ್ಗಳು ಸಿಗದೇ, ಬಂದ ಚಿತ್ರಗಳನ್ನೇ ತಮ್ಮದಾಗಿಸಿಕೊಂಡರು. ಆ ನಂತರ ಆಫರ್ ಗಳ ಕೊರತೆಯಿಂದ ಹಣದ ಕೊರತೆ ಎದುರಾಗಿತ್ತು. ಇದು ಮುಂದೆ ಮಾನಸಿಕ ಖಿನ್ನತೆಗೆ ಕಾರಣವಾಯಿತು. ಒಂದು ಕಾಲದಲ್ಲಿ ಭೋಜ್ಪುರಿ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಎಂದೇ ಗುರುತಿಸಿಕೊಂಡಿದ್ದ ಮಿಥಾಲಿ ಶರ್ಮಾ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದರು.
ಹೀಗಾಗಿಯೇ ಆಕೆಯ ಜೀವನ ಬದಲಾಯಿತು. ಆಕೆಯ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲಲು ಪ್ರಾರಂಭಿಸಿದವು. ಅಲ್ಲಿಂದ ನಿರ್ದೇಶಕರು, ನಿರ್ಮಾಪಕರು ಕೂಡ ಆಕೆಯನ್ನು ದೂರವಿಟ್ಟಿದ್ದರು. ಹೆಚ್ಚಿನ ಅವಕಾಶಗಳಿಲ್ಲದೆ, ಖಿನ್ನತೆಗೆ ಒಳಗಾಗಿ ಮುಂಬೈನ ಲೋಖಂಡವಾಲಾ ಬೀದಿಗಳಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದಳು.
ಮೇಲಾಗಿ ಮಿಥಾಲಿ ಶರ್ಮಾ ಮುಂಬೈನ ಬೀದಿಗಳಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಅದೇ ದಿನ ಆಕೆಯನ್ನು ಕೂಡ ಪೊಲೀಸರು ಬಂಧಿಸಿದ್ದರು. ಮಹಿಳಾ ಪೊಲೀಸರು ಕೈಕೋಳ ಹಾಕಲು ಮುಂದಾದಾಗ ಅವರೊಂದಿಗೆ ವಾಗ್ವಾದ ನಡೆಸಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾಳೆ. ಆಕೆಯ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಆಕೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಯಿತು.