Shukra Shani Gochar: 2025ರ ಹೊಸ ವರ್ಷ ಆರಂಭವಾಗಿ ಇನ್ನೇನು ಮೊದಲ ತಿಂಗಳು ಮುಗಿಯುತ್ತಾ ಬಂದಿದೆ. ಅದಕ್ಕೂ ಮೊದಲು ಡಬಲ್ ರಾಜಯೋಗಗಳು ನಿರ್ಮಾಣವಾಗಲಿವೆ.
Rajayoga: ಈ ತಿಂಗಳಾಂತ್ಯದ ವೇಳೆಗೆ ಶನಿ ಶುಕ್ರರಿಂದ ಒಟ್ಟೊಟ್ಟಿಗೆ ಎರಡೆರಡು ರಾಜಯೋಗಗಳು ನಿರ್ಮಾಣವಾಗಲಿದ್ದು ಕೆಲವು ರಾಶಿಯವರ ಬದುಕಿನಲ್ಲಿ ಹೊನ್ನಿನ ಮಳೆಯಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ, ಸುಖ-ಸಂಪತ್ತುಕಾರಕ ಎಂದು ಬಣ್ಣಿಸಲಾಗಿರುವ ಶುಕ್ರ 28 ಜನವರಿ 2025ರಂದು ಪಥ ಬದಲಾಯಿಸಿ ತನ್ನ ಉಚ್ಚ ರಾಶಿಯಾದ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.
ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಇದಲ್ಲದೆ, ತನ್ನ ಮೂಲ ತ್ರಿಕೋನ ರಾಶಿಯಲ್ಲಿರುವ ಶನಿಯಿಂದ ಶಶ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಕೆಲವರ ಬಾಳಲ್ಲಿ ಶುಕ್ರ ದೆಸೆಯೊಂದಿಗೆ ಶನಿ ಮಹಾತ್ಮನ ಕೃಪೆಯೂ ದೊರೆಯಲಿದೆ.
ವೃಷಭ ರಾಶಿ: ಡಬಲ್ ರಾಜಯೋಗಗಳ ಫಲವಾಗಿ ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ. ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭ ದೊರೆಯಲಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ.
ಮಕರ ರಾಶಿ: ಒಟ್ಟೊಟ್ಟಿಗೆ ನಿರ್ಮಾಣವಾಗಲಿರುವ ಮಾಲವ್ಯ ರಾಜಯೋಗ ಹಾಗೂ ಶಶ ರಾಜಯೋಗವು ಈ ರಾಶಿಯವರಿಗೆ ಹಠಾತ್ ಧನಯೋಗವನ್ನು ನೀಡಲಿದೆ. ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ವ್ಯವಹಾರವನ್ನು ನಷ್ಟದಿಂದ ಲಾಭದತ್ತ ಕೊಂಡೊಯ್ಯುವಿರಿ.
ಕುಂಭ ರಾಶಿ: ಶುಕ್ರ ದೆಸೆ ಹಾಗೂ ಶನಿ ಮಹಾದಶ ಪ್ರಭಾವದಿಂದ ಈ ರಾಶಿಯವರ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಬದುಕಿನಲ್ಲೂ ಸಕಾರಾತ್ಮಕ ಫಲಗಳನ್ನು ನಿರೀಕ್ಷಿಸಬಹುದು. ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸವೊಂದು ಪೂರ್ಣಗೊಳ್ಳುವ ಸುಸಮಯ ಇದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.