Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಗುರುವಾರದ ಈ ದಿನ ಆಶ್ಲೇಷಾ ನಕ್ಷತ್ರ ಆಯು ಯೋಗ, ವಣಿಜ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದು ಬೆಟ್ಟದಂತ ಸವಾಲುಗಳು ನಿಮ್ಮ ಎದುರಿಗೆ ಬಂದರೂ ಸುಲಭವಾಗಿ ಜಯಿಸಲು ಅನುವು ಮಾಡಿಕೊಡಲಿದೆ. ವೃತ್ತಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಪೂರ್ವಾಗ್ರಹ ಪೀಡಿತರಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಬದಲಿಗೆ ಸ್ವಲ್ಪ ತಾಳ್ಮೆಯಿಂದ ಯೋಚಿಸುವುದನ್ನು ಪರಿಗಣಿಸಿ. ವಿಶೇಷವಾಗಿ ಹಣಕಾಸಿನ ವಿಚಾರಗಳಲ್ಲಿ ತಾಳ್ಮೆ ಅಗತ್ಯ. ಭಾವನಾತ್ಮಕ ವಿಚಾರಗಳಲ್ಲಿ ನಿಮಗೆ ಬೆಂಬಲರಾಗಿರುವವರೊಂದಿಗೆ ಮಾತನಾಡಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ಸಂವಹನ ಕೌಶಲ್ಯದಿಂದ ಕೈ ಜಾರುತ್ತಿದ್ದ ವ್ಯವಹಾರವನ್ನು ಕುದುರಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಅವಕಾಶಗಳ ಹಾದಿ ಸುಗಮವಾಗಲಿದೆ. ನೀವು ಒಳ್ಳೆಯ ಮಾತುಗಾರರು ಆದರೆ, ಬೇರೆಯವರ ಮಾತನ್ನು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಕಠಿಣ ಸನ್ನಿವೇಶಗಳನ್ನು ನಿಭಾಯಿಸಲು ಭಾವನಾತ್ಮಕ ಸ್ಪಷ್ಟತೆ ನಿಮಗೆ ಸಹಾಯಕವಾಗಲಿದೆ. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ, ವೈಯಕ್ತಿಕ ವಿಚಾರಗಳತ್ತ ಗಮನಹರಿಸಿ ಮುಂದುವರೆದರೆ ಒಳ್ಳೆಯದು. ಕೇವಲ ಬೇರೆಯವರ ಬಗ್ಗೆ ಮಾತನಾಡುವ ಬದಲಿಗೆ ಸ್ವಯಂ-ಆರೈಕೆಗೆ ಒತ್ತು ನೀಡಿ.
ಇದನ್ನೂ ಓದಿ- 18ವರ್ಷಗಳ ಬಳಿಕ ರಾಹು-ಶುಕ್ರ ಸಂಯೋಗ: ಈ ರಾಶಿಯವರಿಗೆ ಅದೃಷ್ಟವೇ ಬದಲು, ಅಷ್ಟದಿಕ್ಕುಗಳಿಂದ ಕೈ ಸೇರುವುದು ಸಂಪತ್ತು
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ನಿಮ್ಮ ಆಲೋಚನೆಗಳು ಜನರನ್ನು ನಿಮ್ಮತ್ತ ಸೆಳೆಯುತ್ತದೆ. ಹಣಕಾಸಿನ ವಿಚಾರಗಳಲ್ಲಿ ಹಠಾತ್ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ಇಲ್ಲವೇ ಭವಿಷ್ಯದಲ್ಲಿ ತೊಂದರೆಗೆ ಸಿಲುಕಬೇಕಾಗಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಸಂಘಟನೆ ಮತ್ತು ನಿಮ್ಮ ಗುರಿಯತ್ತ ಗಮನವಹಿಸಿ ಮುಂದುವರೆಯುವುದು ಒಳಿತು. ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಕುಟುಂಬದವರು ನಿಮ್ಮ ಸಹಾಯಕ್ಕೆ ನಿಲ್ಲುವರು. ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಸಂಬಂಧಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದನ್ನು ಪರಿಗಣಿಸಿ. ಮನೆಯಲ್ಲಿ ನಿಮ್ಮವರೊಂದಿಗೆ ಕುಳಿತು ಕಾಲ ಕಳೆಯುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ. ಈ ರಾಶಿಯ ವ್ಯಾಪಾರಸ್ಥರಿಗೆ ಅದೃಷ್ಟದ ದಿನ. ಬಂಪರ್ ಆದಾಯದಿಂದ ಹಣಕಾಸಿನ ಸಮಸ್ಯೆಯಿಂದ ಪರಿಹಾರ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಬದಲಾವಣೆ ಜಗದ ನಿಯಮ. ಬದಲಾವಣೆಯನ್ನು ಸ್ವೀಕರಿಸಿ ಮುಂದುವರೆಯಿರಿ. ಹಿಂದಿನ ವಿಚಾರಗಳಿಗೆ ಯೋಚಿಸುತ್ತಾ ಈ ದಿನವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ಮಾನಸಿಕ ಸ್ಥಿತಿಸ್ಥಾಪಕತ್ವವು ಯಶಸ್ಸಿನತ್ತ ಮಾರ್ಗದರ್ಶನವನ್ನು ನೀಡಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ನಿಮ್ಮ ಸಾಹಸ ಮನೋಭಾವವು ಇಂದು ನಿಮ್ಮ ದಿನವನ್ನು ಬೆಳಗಲಿದೆ. ಹೊಸ ಅನುಭವಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವಿರಿ. ವೈಯಕ್ತಿಕ ಅಥವಾ ವೃತ್ತಿಪರ ವಿಷಯಗಳಲ್ಲಿ ನಂಬಿಕೆ ಉಳಿಸಿಕೊಳ್ಳಲು ಪ್ರಾಮುಖ್ಯತೆ ನೀಡಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ನಿಮ್ಮ ಜೀವನದ ಶಿಸ್ತು ಮತ್ತು ಕಠಿಣ ಪರಿಶ್ರಮವು ಉತ್ತಮ ಪ್ರತಿಫಲವನ್ನು ನೀಡುತ್ತದೆ. ಗೊಂದಲಗಳನ್ನು ತಪ್ಪಿಸಿ, ನಿಮ್ಮ ದೀರ್ಘಕಾಲಿನ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ. ಯಾವುದೇ ಪ್ರಮುಖ ವಿಚಾರಗಳಲ್ಲಿ ತಾಳ್ಮೆಯಿಂದ ವರ್ತಿಸುವುದರಿಂದ ಯಶಸ್ಸು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಸೃಜನಶೀಲತೆ ಮತ್ತು ನಾವೀನ್ಯತೆ ಇಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದಾರಿ ದೀಪವಾಗಲಿದೆ. ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಲು ಈ ಶಕ್ತಿಯನ್ನು ಬಳಸಿ. ಸಹೋದ್ಯೋಗಿಗಳ ಸಹಯೋಗವು ನಿಮ್ಮ ಪ್ರಗತಿಗೆ ಕಾರಣವಾಗಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ನಿಮ್ಮ ಸಹಾನುಭೂತಿ ಸ್ವಭಾವವು ಇತರರೊಂದಿಗೆ ಆಳವಾಗಿ ಸಂಪರ್ಕಿಸಲು ನಿಮಗೆ ಸಹಾಯಕವಾಗಲಿದೆ. ನಿಮ್ಮ ಭಾವನಾತ್ಮಕ ಅಗತ್ಯಗಳನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಿ. ಬೇರೆಯವರೊಂದಿಗೆ ಮಾತನಾಡುವಾಗ ಆರೋಗ್ಯಕರ ಗಡಿ ಹೊಂದಿಸಿದರೆ ಒಳ್ಳೆಯದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.