bbk 11 mid week elimination: ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ.. ಸದ್ಯ ದೊಡ್ಮನೆಯಲ್ಲಿ ಎಂಟು ಜನ ಸ್ಪರ್ಧಿಗಳಿದ್ದು, ಇವರ ಪೈಕಿ ಒಬ್ಬರು ಈ ವಾರದ ಮಿಡ್‌ವೀಕ್ ಎಲಿಮಿನೇಟ್ ಆಗಲಿದ್ದಾರೆ..
ಜನವರಿ 19ಕ್ಕೆ ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.. ಇದೇ ವೇಳೆ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ಘೋಷಣೆಯಾಗಿದೆ.. ಹೀಗಾಗಿ ಉಳಿದ ಎಂಟು ಸ್ಪರ್ಧಿಗಳು ಪರಸ್ಪರ ಪೈಪೋಟಿ ನೀಡುತ್ತಾ ಆಟವಾಡುತ್ತಿದ್ದಾರೆ..
ಫಿನಾಲೆಯತ್ತ ಹೆಜ್ಜೆಹಾಕುತ್ತಿರುವ ಬಿಗ್‌ಬಾಸ್ ಮನೆಯಿಂದ ಮೂರು ಜನ ಹೊರಬರಲಿದ್ದು, ಐದು ಜನ ಮಾತ್ರ ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ.. ಹಾಗಾದ್ರೆ ಬಿಗ್‌ಬಾಸ್ ಮನೆಯಿಂದ ತಮ್ಮ ಆಟವನ್ನುನ ಕೊನೆಗೊಳಿಸಿ ಹೊರಬರುವ ಸ್ಪರ್ಧಿಗಳು ಯಾರು? ಮನೆಯಲ್ಲಿ ಉಳಿದುಕೊಂಡು ಫಿನಾಲೆ ತಲುಪುವವರು ಯಾರು?
ಕಳೆದ ವಾರು ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಟಿಕೆಟ್ ಟು ಫಿನಾಲೆ ಟಾಸ್ಕ್‌ವೊಂದನ್ನು ನೀಡಲಾಗಿತ್ತು.. ಇದರಲ್ಲಿ ಸಿಂಗರ್ ಹನುಮಂತ ತುಂಬಾ ನಿಯತ್ತಾಗಿ ಆಡಿ ಮೊದಲ ಫೈನಲಿಸ್ಟ್ ಆದರು.. ಇದರೊಂದಿಗೆ ತ್ರಿವಿಕ್ರಮ್ ಸಹ ಟಾಸ್ಕ್ ಗೆದ್ದು ಫಿನಾಲೆ ಪ್ರವೇಶಿಸಿದ್ದಾರೆ...
ಇಷ್ಟೇ ಅಲ್ಲ.. ಕಳೆದವಾರ ಕ್ಯಾಪ್ಟನ್ ಪಟ್ಟ ಪಡೆದುಕೊಂಡ ರಜತ್ ಸಹ ನೇರವಾಗಿ ಫಿನಾಲೆ ತಲುಪುವ ಅವಕಾಶ ಪಡೆದುಕೊಂಡಿದ್ದಾರೆ.. ಆದರೆ ಅವರ ಕ್ಯಾಪ್ಟನ್ಸಿ ಅವಧಿಯಲ್ಲಿ ಉಸ್ತುವಾರಿ ಕೆಲಸ ಸರಿಯಾಗಿ ನಿಭಾಯಿಸಿಲ್ಲ.. ಹೀಗಾಗಿ ಅಲ್ಲಿ ರಜತ್ ಕೆಲವರ ಪರವಾಗಿ ಟಾಸ್ಕ್ ಆಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.. ಇದರಿಂದ ಕಿಚ್ಚನು ಸಹ ವಾರದ ಪಂಚಾಯಿತಿಯಲ್ಲಿ ತರಾಟೆ ತೆಗೆದುಕೊಂಡರು..
ಇನ್ನು ಉಗ್ರಂ ಮಂಜು ಆಟದಲ್ಲಿ ಉತ್ತರ ಪ್ರದರ್ಶನ ನೀಡಿದರೂ ರಜತ್ ಉಸ್ತುವಾರಿಯಿಂದ ಅವರಿಗೆ ಫಿನಾಲೆ ತಲುಪುವ ಅವಕಾಶ ಸಿಗಲಿಲ್ಲ.. ಜೊತೆಗೆ ಗೌತಮಿ ಸ್ನೇಹ ಬಿಡತ್ತೇನೆ ಎಂದು ವೀಕ್ಷಕರಿಗೆ ಮಾತುಕೊಟ್ಟಿದ್ದ ಮಂಜು ಮತ್ತೆ ಅವರೊಂದಿಗೆ ಸೇರಿಕೊಂಡಿದ್ದಾರೆ.. ಮಂಜಣ್ಣ ಇಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲಾರಾಗಿದ್ದಾರೆ..
ತಮ್ಮ ಸೇಫ್‌ಝೋನ್‌ನಿಂದ ಹೊರಬಂದು ಚೆನ್ನಾಗಿ ಆಟವಾಡುತ್ತಿದ್ದ ಮೋಕ್ಷಿತಾ ತಾವು ಮಾಡುವ ಒಳಸಂಚಿನಿಂದ ಬಿಗ್‌ಬಾಸ್ ಮನೆಯಿಂದ ಅವರೇ ಮಿಡ್‌ವೀಕ್ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.. ಒಂದು ವೇಳೆ ಮೋಕ್ಷಿತಾ ರಜತ್ ವಿರುದ್ಧ ಸಂಚು ರೂಪಿಸುವಲ್ಲಿ ಭವ್ಯ ಜೊತೆಗೆ ಕೈಜೋಡಿಸದೇ ಇದ್ದಿದ್ದರೇ ಅವರೂ ಟಾಪ್ 5 ಸ್ಪರ್ಧಿ ಆಗುವ ಸಾಧ್ಯತೆಗಳಿದ್ದವು.. ಆದರೆ ಇದೀಗ ಅವರು ಮತ್ತೊಬ್ಬರ ವಿರುದ್ಧ ಸಂಚು ರೂಪಿಸಲು ಹೋಗಿ ತಾವೇ ಬಲಿಯಾಗುತ್ತಾರಾ? ಎನ್ನುತ್ತಿದ್ದಾರೆ ವೀಕ್ಷಕರು..
ಒಟ್ಟಿನಲ್ಲಿ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿಗಳಲ್ಲಿ ಭವ್ಯ, ಮೋಕ್ಷಿತಾ, ಗೌತಮಿ, ಇಲ್ಲವೇ ರಜತ್ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.. ಆದರೆ ಯಾರು ಹೊರಹೋಗುತ್ತಾರೆ ಎನ್ನುವುದರ ಅಧಿಕೃತ ಮಾಹಿತಿ ಗುರುವಾರದ ಸಂಚಿಕೆಯಲ್ಲಿ ತಿಳಿಯಲಿದೆ..