ಒಂದೇ ಒಂದು ರನ್‌ ಬಾರಿಸಿಲ್ಲ, ಯಾವುದೇ ಕ್ಯಾಚ್‌ ಹಿಡಿಲಿಲ್ಲ... ವಿಕೆಟ್‌ ಕೂಡ ಕಿತ್ತಿಲ್ಲ! ಆದ್ರೂ ಈ ಕ್ರಿಕೆಟಿಗನಿಗೆ ಸಿಕ್ತು ʼಪಂದ್ಯ ಶ್ರೇಷ್ಠʼ ಪ್ರಶಸ್ತಿ

AUS vs NZ T20I, 2009: ಫೆಬ್ರವರಿ 15, 2009 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಅಂತರರಾಷ್ಟ್ರೀಯ ಪಂದ್ಯ ನಡೆಯಿತು. ಈ ರೋಮಾಂಚಕಾರಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಒಂದು ರನ್‌ನಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು

Written by - Bhavishya Shetty | Last Updated : Jan 12, 2025, 04:01 PM IST
    • ಓರ್ವ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಿಮಗೆ ತಿಳಿದಿದೆಯೇ?
    • ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ T20 ಅಂತರರಾಷ್ಟ್ರೀಯ ಪಂದ್ಯ
    • ಇದರಲ್ಲಿ ಆಸ್ಟ್ರೇಲಿಯಾದ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು
ಒಂದೇ ಒಂದು ರನ್‌ ಬಾರಿಸಿಲ್ಲ, ಯಾವುದೇ ಕ್ಯಾಚ್‌ ಹಿಡಿಲಿಲ್ಲ... ವಿಕೆಟ್‌ ಕೂಡ ಕಿತ್ತಿಲ್ಲ! ಆದ್ರೂ ಈ ಕ್ರಿಕೆಟಿಗನಿಗೆ ಸಿಕ್ತು ʼಪಂದ್ಯ ಶ್ರೇಷ್ಠʼ ಪ್ರಶಸ್ತಿ title=
Nathan Bracken

AUS vs NZ T20I, 2009: ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಯಾವುದೇ ರನ್ ಗಳಿಸದ, ಯಾವುದೇ ವಿಕೆಟ್ ಪಡೆಯದ ಮತ್ತು ಯಾವುದೇ ಕ್ಯಾಚ್ ಹಿಡಿಯದ ಓರ್ವ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಿಮಗೆ ತಿಳಿದಿದೆಯೇ? 2009 ರಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ T20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಾಯಿತು, ಇದರಲ್ಲಿ ಆಸ್ಟ್ರೇಲಿಯಾದ ಆಟಗಾರನಿಗೆ ಪಂದ್ಯ ಶ್ರೇಷ್ಠ  ಪ್ರಶಸ್ತಿಯನ್ನು ನೀಡಲಾಯಿತು.

ಇದನ್ನೂ ಓದಿ: ಸಂಕ್ರಾಂತಿಗೂ ಮೊದಲೇ ಅಪರೂಪದ ಗ್ರಹಗಳ ಮೈತ್ರಿ... 100 ವರ್ಷ ನಂತರ ಈ ರಾಶಿಗಳಿಗೆ ರಾಜಯೋಗ, ಹರಿಯಲಿದೆ ಹಣದ ಹೊಳೆ, ಕೈಯಿಟ್ಟಲ್ಲೆಲ್ಲ ಯಶಸ್ಸು.. ಅಷ್ಟೈಶ್ವರ್ಯ ಪ್ರಾಪ್ತಿ!

ಫೆಬ್ರವರಿ 15, 2009 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಅಂತರರಾಷ್ಟ್ರೀಯ ಪಂದ್ಯ ನಡೆಯಿತು. ಈ ರೋಮಾಂಚಕಾರಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಒಂದು ರನ್‌ನಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ನ್ಯೂಜಿಲೆಂಡ್ ಇಡೀ ಓವರ್‌ಗಳಲ್ಲಿ ಕೇವಲ 149 ರನ್‌ಗಳನ್ನು ಗಳಿಸಲು ಶಕ್ತವಾಯಿತು ಮತ್ತು ಪಂದ್ಯ ಸೋತಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾದ ನಾಥನ್ ಬ್ರಾಕೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯದಲ್ಲಿ ನಾಥನ್ ಬ್ರಾಕನ್ ಅವರ ಕೊಡುಗೆಯ ಬಗ್ಗೆ ಹೇಳುವುದಾದರೆ, ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದ ಕಾರಣ ತಂಡಕ್ಕೆ ಯಾವುದೇ ರನ್ ಸೇರಿಸಲು ಅವಕಾಶ ಸಿಗಲಿಲ್ಲ. ಇದಲ್ಲದೆ,  ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಆಗಲಿ, ಬೌಲಿಂಗ್ ಮಾಡುವಾಗ ವಿಕೆಟ್‌ ಆಗಲಿ ಪಡೆದಿರಲಿಲ್ಲ. ಆದರೂ ಈತನಿಗೆ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ನೀಡಿದ್ದೇಕೆ? ಇದಕ್ಕೆ ಒಂದು ಕಾರಣವಿದೆ.

ಇದನ್ನೂ ಓದಿ: ಟೊಮೆಟೋ ಜೊತೆ ಈ 3 ಮಿಶ್ರಣ ಮಾಡಿ ಹಚ್ಚಿಕೊಂಡ್ರೆ ಕೂದಲು ಉದರಲ್ಲ, ದಡ್ಡವಾಗಿ ಬೆಳೆಯುತ್ತವೆ..!

ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲು 14 ರನ್‌ಗಳು ಬೇಕಾಗಿದ್ದವು. ಆಸ್ಟ್ರೇಲಿಯಾದ ನಾಯಕ ಬ್ರಾಡ್ ಹ್ಯಾಡಿನ್ ಈ ಓವರ್ ಅನ್ನು ನಾಥನ್ ಬ್ರಾಕೆನ್ ಗೆ ಹಸ್ತಾಂತರಿಸಿದರು. ಕೊನೆಯ ಓವರ್ ಅನ್ನು ನಾಥನ್ ಬ್ರಾಕನ್ ಗೆ ನೀಡಿದ್ದು ಪಂದ್ಯದ ಅತಿದೊಡ್ಡ ತಿರುವು. ಅವರು ಕಿವೀಸ್‌ ತಂಡವನ್ನು ಗೆಲುವಿನ ಹೊಸ್ತಿಲು ದಾಟಲು ಬಿಡಲಿಲ್ಲ. ಈ ಓವರ್‌ನಲ್ಲಿ ಬ್ರಾಕನ್ ಕೇವಲ 12 ರನ್‌ಗಳನ್ನು ಬಿಟ್ಟುಕೊಟ್ಟು, ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯಾದ ಗೆಲುವಿನಲ್ಲಿ ಬ್ರಾಕನ್ ದೊಡ್ಡ ಪಾತ್ರ ವಹಿಸಿದರು. ಅದಕ್ಕಾಗಿಯೇ ಅವರಿಗೆ POTM ಪ್ರಶಸ್ತಿ ದೊರೆಯಿತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News