ಮಕ್ಕಳಿಗೆ ಶಾಲಾ ದಾಖಲಾತಿಗಾಗಿ ಈ ರೀತಿ ಪಡೆಯಿರಿ ಆಧಾರ್ ಕಾರ್ಡ್

ಮಗುವಿನ ಆಧಾರ್ ಕಾರ್ಡ್ ಪಡೆಯಲು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕು.

Last Updated : Jun 2, 2020, 12:12 PM IST
ಮಕ್ಕಳಿಗೆ ಶಾಲಾ ದಾಖಲಾತಿಗಾಗಿ ಈ ರೀತಿ ಪಡೆಯಿರಿ ಆಧಾರ್ ಕಾರ್ಡ್ title=

ನವದೆಹಲಿ: ಲಾಕ್‌ಡೌನ್ ಕಾರಣದಿಂದಾಗಿ ಹಲವು ಪೋಷಕರು ಈ ವರ್ಷ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿರಬಹುದು. ಆದರೆ ಈ ವರ್ಷ ಜೂನ್ ಬದಲಿಗೆ ಜುಲೈನಲ್ಲಿ ಶಾಲೆ ತೆರೆಯುವ ನಿರೀಕ್ಷೆಯಿದ್ದು ಆ ಸಮಯದಲ್ಲಿ ನಿಮ್ಮ ಮಗುವನ್ನು ಶಾಲೆಗೆ ದಾಖಲು ಮಾಡಿಸಬಹುದು. ಶಾಲೆಗೆ ಅಡ್ಮಿಶನ್ ಮಾಡುವ ವೇಳೆ ಮಕ್ಕಳ ಆಧಾರ್ ಕಾರ್ಡ್ ಕೂಡ ಬಹಳ ಮುಖ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವೂ ಸಹ ಆಧಾರ್ ಕಾರ್ಡ್ ಮಾಡಿಸಬೇಕಿದ್ದರೆ ನಾವಿಂದು ನಿಮಗೆ ಸರಳ ಪ್ರಕ್ರಿಯೆ ಬಗ್ಗೆ ಮಾಹತಿ ನೀಡುತ್ತಿದ್ದೇವೆ. ಅದರ ಮೂಲಕ ನೀವು ನಿಮ್ಮ ಮಕ್ಕಳ ಆಧಾರ್ ಕಾರ್ಡ್  (Aadhaar Card) ಅನ್ನು ಸುಲಭವಾಗಿ ಪಡೆಯಬಹುದು.

ಮಗುವಿನ ವಯಸ್ಸು 5 ವರ್ಷಕ್ಕಿಂತ ಕಡಿಮೆ ಇದ್ದರೆ ಈ ಪ್ರಕ್ರಿಯೆ ಅನುಸರಿಸಿ:
ನಿಮ್ಮ ಮಗುವಿನ ವಯಸ್ಸು 5 ವರ್ಷಕ್ಕಿಂತ ಕಡಿಮೆ ಇದ್ದರೆ ನೀವು ಆಧಾರ್  (Aadhaar)ಕಾರ್ಡ್ ನೋಂದಣಿ ಕೇಂದ್ರಕ್ಕೆ ಹೋಗಿ ಅವನ / ಅವಳ ಹೆಸರನ್ನು ಭರ್ತಿ ಮಾಡಬೇಕು. ಇದರ ನಂತರ ನೀವು ಮಗುವಿನ ಜನನ ಪ್ರಮಾಣಪತ್ರ ಮತ್ತು ನಿಮ್ಮ ಆಧಾರ್ ನಕಲನ್ನು ನೀಡಬೇಕಾಗುತ್ತದೆ. ಆಧಾರ್ ಕೇಂದ್ರಕ್ಕೆ ಹೋಗುವಾಗ ನಿಮ್ಮ ನೈಜ ಆಧಾರ್ ಕಾರ್ಡನ್ನು ಸಹ ನೀವು ಜೊತೆಯಲ್ಲಿ ಕೊಂಡೊಯ್ಯಬೇಕಾಗುತ್ತದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಬಯೋಮೆಟ್ರಿಕ್ ಅಗತ್ಯವಿಲ್ಲ. ಬದಲಿಗೆ ಮಗುವಿನ ಆಧಾರ್ ಕಾರ್ಡ್ ಅನ್ನು ಅವರ ಹೆತ್ತವರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ. ಮಗುವಿಗೆ 5 ವರ್ಷ ವಯಸ್ಸಾದಾಗ ನೀವು ಆಧಾರ್ ಕೇಂದ್ರಕ್ಕೆ ಬೆರಳಚ್ಚುಗಳು, ರೆಟಿನಲ್ ಸ್ಕ್ಯಾನ್ ಮತ್ತು ನಿಮ್ಮ ಹತ್ತು ಬೆರಳುಗಳ ಛಾಯಾಚಿತ್ರಗಳನ್ನು ನೀಡಬೇಕಾಗುತ್ತದೆ.

5 ವರ್ಷಕ್ಕಿಂತ ಅಧಿಕ ವಯಸ್ಸಿನ ಮಕ್ಕಳಿಗೆ ಈ ಪ್ರಕ್ರಿಯೆ ಅನುಸರಿಸಿ:
ನಿಮ್ಮ ಮಗುವಿಗೆ ಐದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಮೊದಲು ನೀವು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ನೀವು ಜನನ ಪ್ರಮಾಣಪತ್ರ ಮತ್ತು ಶಾಲಾ ಗುರುತಿನ ಚೀಟಿಯನ್ನು ಸಹ ನೀಡಬೇಕಾಗುತ್ತದೆ. ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಎಲ್ಲಾ 10 ಬೆರಳುಗಳ ಫಿಂಗರ್ ಪ್ರಿಂಟ್, ರೆಟಿನಲ್ ಸ್ಕ್ಯಾನ್ ಮತ್ತು ಛಾಯಾಚಿತ್ರಗಳನ್ನು ಸಹ ತೆಗೆದುಕೊಳ್ಳಲಾಗಿಗುತ್ತದೆ. ಆದಾಗ್ಯೂ 15 ವರ್ಷದ ನಂತರ ಆಧಾರ್ನ ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಲಾಗುತ್ತದೆ.

ಮಗುವಿನ ಆಧಾರ್ ಕಾರ್ಡ್ ಪಡೆಯಲು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ನೀವು ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಿಮ್ಮ ಮಗುವಿನ ಮಾನ್ಯ ವಿಳಾಸವು ಪುರಾವೆಯಲ್ಲದಿದ್ದರೆ, ಮಗುವಿನ ಪೋಷಕರ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕು.

90 ದಿನಗಳಲ್ಲಿ ಆಧಾರ್ ಲಭ್ಯ:
ಸಂಪೂರ್ಣ ಪ್ರಕ್ರಿಯೆಯ ನಂತರ ದಾಖಲಾತಿ ಸ್ಲಿಪ್‌ನಲ್ಲಿ ನಿಮಗೆ ದಾಖಲಾತಿ ಐಡಿ, ಸಂಖ್ಯೆ ಮತ್ತು ದಿನಾಂಕವನ್ನು ನೀಡಲಾಗುವುದು. ಇದರ ಮೂಲಕ, ನಿಮ್ಮ ಆಧಾರ್‌ನ ಸ್ಥಿತಿಯನ್ನು(ಸ್ಟೇಟಸ್) ಸಹ ನೀವು ಪರಿಶೀಲಿಸಬಹುದು. 90 ದಿನಗಳಲ್ಲಿ ಅರ್ಜಿದಾರರ ಮನೆಯ ವಿಳಾಸಕ್ಕೆ ಆಧಾರ್ ಅನ್ನು ಪೋಸ್ಟ್ ಮಾಡಲಾಗುತ್ತದೆ.
 

Trending News