ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯ ಅಡಿ 20 ಲಕ್ಷ ಕೋಟಿ ರೂ. ಮೌಲ್ಯದ ಬೃಹತ್ ಪ್ಯಾಕೆಜ್ ಬಿಡುಗಡೆಗೊಳಿಸಿತ್ತು. ಇದೀಗ ಈ ಯೋಜನೆಯಡಿ ಉದ್ಯಮ ಆರಂಭಿಸಲು ಸಾಲ ಪಡೆಯಲು ಕೇಂದ್ರ ಸರ್ಕಾರ ನಿಯಮಗಳನ್ನು ಹೊರಡಿಸಿದೆ. ಇದರಿಂದ ಈಗ ಮನೆ ನಿರ್ಮಾಣ ಮಾಡುವವರು ಫ್ಲ್ಯಾಟ್ ಖರೀಸಿಸಲು ಬಯಸುವವರು, ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬಯಸುವರು ಕೂಡ ಸಾಲ ಪಡೆಯಲಿದ್ದಾರೆ. ಹೀಗಾಗಿ ಅವರಿಗೆ ಸಾಲ ನೀಡುವ ಕಂಪನಿಗಳು ಬದುಕಲಿವೆ ಮತ್ತು ಅವರಿಗೆ ತೊಂದರೆಗೆ ಒಳಗಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡುವ ಅವಶ್ಯಕತೆ ಕೂಡ ಬೀಳುವುದಿಲ್ಲ. ಈ ನೂತನ ನಿಯಮಗಳು ಸ್ವಾವಲಂಭಿ ಭಾರತ ಯೋಜನೆಯಡಿ ಸಾಲ ಪಡೆಯುವವರಿಗೆ ಅನ್ವಯಿಸಲಿವೆ.
ಹಣಕಾಸಿನ ಕೊರತೆಯ ಕಾರಣ ಬ್ಯಾಂಕೇತರ ಹಣಕಾಸು ಕಂಪನಿಗಳು, ಮೈಕ್ರೋ ಫೈನಾನ್ಸ್ ಕಂಪನಿಗಳು, ಹೌಸಿಂಗ್ ಬ್ಯಾಂಕ್ ಕಂಪನಿಗಳಿಗೆ ಇದೀಗ ಬ್ಯಾಂಕ್ ಗಳು ಹಣಕಾಸು ಪೂರೈಸಲಿವೆ ಮತ್ತು ಈ ಸಾಲದ ಸಂಪೂರ್ಣ ಗ್ಯಾರಂಟಿ ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. 'ಆತ್ಮ ನಿರ್ಭರ ಭಾರತ್' ಪ್ಯಾಕೇಜ್ ಅಡಿ ಘೋಷಿಸಲಾಗಿರುವ ಭಾಗಶಃ ಸಾಲ ಖಾತರಿ ಯೋಜನೆಗಾಗಿ ಕೇಂದ್ರ ಹಣಕಾಸು ಸಚಿವಾಲಯ ಇದೀಗ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
ಮಾರ್ಚ್ 31ರವರೆಗೆ ಸಿಗಲಿದೆ ಲಾಭ
ಮಾರ್ಚ್ 31, 2021ರವರೆಗೆ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಬ್ಯಾಂಕ್ ಗಳು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳು, ಹೌಸಿಂಗ್ ಫೈನಾನ್ಸ್ ಕಂಪನಿಗಳು, ಮೈಕ್ರೋಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ ಗಳಿಗೆ ಸಾಲವನ್ನು ನೀಡಲಿವೆ. ಈ ಯೋಜನೆಯ ಅಡಿ ಸುಮಾರು 45,000 ಕೋಟಿ ರೂ. ಸಾಲವನ್ನು ವಿತರಿಸಬೇಕಾಗಿದ್ದು, ಕೇಂದ್ರ ಸರ್ಕಾರ ಸುಮಾರು 10 ಸಾವಿರ ಕೋಟಿ ರೂ.ಗಳ ಗ್ಯಾರಂಟಿ ನೀಡಲಿದೆ.
ಈ ಯೋಜನೆಯಡಿ NBFC, HFC, MFI ಗಳ ಪೋರ್ಟ್ ಫೋಲಿಯೋ ಗಳಲ್ಲಿ ಬ್ಯಾಂಕ್ ಗಳು ಹಣ ವಿನಿಯೋಗಿಸಲಿದ್ದು, ಇದರಿಂದ ಈ ಕಂಪನಿಗಳಲ್ಲಿನ ನಗದು ಕೊರತೆ ದೂರವಾಗಲಿದೆ. ಈ ಪೋರ್ಟ್ ಫೋಲಿಯೋಗಳಲ್ಲಿ ಹಣ ವಿನಿಯೋಗಿಸಲು SIDBIಗೆ ಪ್ರಸ್ತಾವನೆ ಸಲ್ಲಿಸಬೇಕು. ಬ್ಯಾಂಕ್ ಗಳ ಈ ಕಾರ್ಯದಿಂದ ನಗದು ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ತೊಂದರೆ ಅನುಭವಿಸುತ್ತಿರುವ ಕಂಪನಿಗಳ ಬಳಿ ಹಣ ಬರಲಿದ್ದು, ಡಿಸ್ಟ್ರೆಸ್ ಸೇಲ್ಲಿಂಗ್ ನಿಂದ ಅವು ದೂರ ಉಳಿಯಲಿವೆ.