Income Tax ಸ್ಲ್ಯಾಬ್‌ನಲ್ಲಿ ಬರದವರೂ ಐ‌ಟಿ‌ಆರ್ ಫೈಲ್ ಮಾಡಬಹುದು, ಸಿಗುತ್ತೆ ಈ 10 ಪ್ರಯೋಜನ

ITR Filing Benefits: ಆದಾಯ ತೆರಿಗೆ ವ್ಯಾಪ್ತಿಗೆ ಬರದವರು ಐ‌ಟಿ‌ಆರ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನೀವು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬರದಿದ್ದರೂ ಐ‌ಟಿ‌ಆರ್ ಫೈಲ್ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. 

Written by - Yashaswini V | Last Updated : Dec 25, 2024, 07:21 AM IST
  • ನಮ್ಮಲ್ಲಿ ಬಹುತೇಕ ಜನರು ತಾವು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬರುವುದಿಲ್ಲ.
  • ಹಾಗಾಗಿ, ತಾವು ತೆರಿಗೆಗೆ ಜವಾಬ್ದಾರರಲ್ಲ, ಐ‌ಟಿ‌ಆರ್ ಸಲ್ಲಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ.
  • ಆದರೆ, ಹಣಕಾಸು ಸಲಹೆಗಾರರ ಪ್ರಕಾರ, ಆದಾಯ ತೆರಿಗೆ ವ್ಯಾಪ್ತಿಗೆ ಬರದವರೂ ಕೂಡ ಐ‌ಟಿ‌ಆರ್ ಸಲ್ಲಿಸಬೇಕು.
Income Tax ಸ್ಲ್ಯಾಬ್‌ನಲ್ಲಿ ಬರದವರೂ ಐ‌ಟಿ‌ಆರ್ ಫೈಲ್ ಮಾಡಬಹುದು, ಸಿಗುತ್ತೆ ಈ 10 ಪ್ರಯೋಜನ  title=

ITR Filing: ಯಾವುದೇ ಒಬ್ಬ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಆದಾಯದ ಒಂದು ಘನ ಪುರಾವೆಯಾಗಿದೆ. ಯಾವುದೇ ಉದ್ಯೋಗ, ವ್ಯವಹಾರ, ಇತರ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ಐ‌ಟಿ‌ಆರ್ ಸಲಿಸುವ ಮೂಲಕ ಆದಾಯದ ಸರಿಯಾದ ದಾಖಲೆಯನ್ನು ಸಿದ್ಧಪಡಿಸುತ್ತದೆ. ಇದನ್ನು ಹಲವು ಸ್ಥಳಗಳಲ್ಲಿ ಬಳಸಬಹುದು. 

ವಾಸ್ತವವಾಗಿ, ನಮ್ಮಲ್ಲಿ ಬಹುತೇಕ ಜನರು ತಾವು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬರುವುದಿಲ್ಲ. ಹಾಗಾಗಿ, ತಾವು ತೆರಿಗೆಗೆ ಜವಾಬ್ದಾರರಲ್ಲ, ಐ‌ಟಿ‌ಆರ್ ಸಲ್ಲಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ, ಹಣಕಾಸು ಸಲಹೆಗಾರರ ಪ್ರಕಾರ, ಆದಾಯ ತೆರಿಗೆ ವ್ಯಾಪ್ತಿಗೆ ಬರದವರೂ ಕೂಡ ಐ‌ಟಿ‌ಆರ್ ಸಲ್ಲಿಸಬೇಕು. ಇದರಿಂದ ಪ್ರಮುಖವಾಗಿ 10 ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ಹೇಳುತ್ತಾರೆ. 

ಐ‌ಟಿ‌ಆರ್ ಸಲ್ಲಿಸುವುದರಿಂದ ಸಿಗುವ 10 ಪ್ರಮುಖ ಪ್ರಯೋಜನಗಳೆಂದರೆ... 
ಆದಾಯ ಪುರಾವೆ:

ಯಾವುದೇ ವ್ಯಕ್ತಿಗೆ ಐ‌ಟಿ‌ಆರ್ ಆದಾಯದ ಮೂಲಗಳ ಪುರಾವೆಯಾಗಿದೆ. ಇದು ಆದಾಯದ ಸರಿಯಾದ ದಾಖಲೆಯನ್ನು ಸಿಡ್ಡಪಡಿಸುತ್ತದೆ. 

ಹಣಕಾಸು ದಾಖಲೆ: 
ಐ‌ಟಿ‌ಆರ್ ಫೈಲಿಂಗ್ ಬಲವಾದ ಆರ್ಥಿಕ ದಾಖಲೆಯನ್ನು ಸೃಷ್ಟಿಸುತ್ತದೆ. ಭವಿಷ್ಯದಲ್ಲಿ ಹಣಕಾಸು ಸಂಬಂಧಿತ ವ್ಯವಹಾರಗಳಲ್ಲಿ, ಯಾವುದಾದರೂ ದೊಡ್ಡ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಇದು ನಿಮಗೆ ಸಹಾಯಕವಾಗಲಿದೆ. 

ಇದನ್ನೂ ಓದಿ- Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...!

ಸಾಲ ಸೌಲಭ್ಯ: 
ಯಾವುದೇ ಬ್ಯಾಂಕ್ ಗಳಲ್ಲಿ ನೀವು ಹೋಮ್ ಲೋನ್, ಪರ್ಸನಲ್ ಲೋನ್ ಅಥವಾ ಕಾರ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಐ‌ಟಿ‌ಆರ್ ನಿಮ್ಮ ಆದಾಯದ ವಿಶ್ವಾಸಾರ್ಹ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. 

ತೆರಿಗೆ ಪಾವತಿ ಕ್ಲೈಮ್: 
ನೀವು ತೆರಿಗೆ ವ್ಯಾಪ್ತಿಗೆ ಬರದಿದ್ದರೂ ಯಾವುದಾದರೂ ಹಣಕಾಸಿನ ವ್ಯವಹಾರಗಳಲ್ಲಿ ಈಗಾಗಲೇ ನಿಮ್ಮ ಆದಾಯದ ಮೇಲೆ ತೆರಿಗೆಯನ್ನು ಕಡಿತಗೊಳಿಸಿದ್ದರೆ ಐ‌ಟಿ‌ಆರ್ ಸಲ್ಲಿಸುವ ಮೂಲಕ ನೀವು ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದು. 

ವೀಸಾ ಪಡೆಯಲು: 
ನೀವು ವಿದೇಶ ಪ್ರಯಾಣ ಕೈಗೊಳ್ಳಲು ವೀಸಾಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಐ‌ಟಿ‌ಆರ್ ಫೈಲಿಂಗ್ ಒಂದು ಪ್ರಮುಖ ದಾಖಲೆಯಾಗಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ. 

ಕಾನೂನು ರಕ್ಷಣೆ: 
ಐ‌ಟಿ‌ಆರ್ ಸಲ್ಲಿಸುವ ಮೂಲಕ ಭವಿಷ್ಯದಲ್ಲಿ ಯಾವುದೇ ರೀತಿಯ ಕಾನೂನು ವಿವಾದಗಳನ್ನು ತಪ್ಪಿಸಬಹುದು. 

ಇದನ್ನೂ ಓದಿ- Tax Saving Tips: ತೆರಿಗೆ ಉಳಿತಾಯ ಮಾಡಲು ಜನವರಿ 1ರಿಂದ ಈ 9 ಸಲಹೆಗಳನ್ನು ಅನುಸರಿಸಿ!

ಆದಾಯ ದೃಢೀಕರಣ: 
ನೀವು ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ ನಡೆಸುವವರಾಗಿದ್ದಾರೆ ಅನಿಯಮಿತ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ಐ‌ಟಿ‌ಆರ್ ಫೈಲಿಂಗ್ ನಿಮ್ಮ ಆದಾಯವನ್ನು ಮೌಲ್ಯೀಕರಿಸುತ್ತದೆ. 

ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ: 
ನೀವು ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಪಡೆಯಲು ಬಯಸಿದರೆ ಇದಕ್ಕಾಗಿ ಐ‌ಟಿ‌ಆರ್ ಸಲ್ಲಿಸುವುದು ಅತ್ಯಾವಶ್ಯಕ. 

ಸರ್ಕಾರದ ಯೋಜನೆಗಳ ಲಾಭ: 
ಹಲವು ಸರ್ಕಾಗಿ ಯೋಜನೆಗಳಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಐ‌ಟಿ‌ಆರ್ ಅನ್ನು ಆದಾಯ ಪುರಾವೆಯಾಗಿ ಸಲ್ಲಿಸುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. 

ದೊಡ್ಡ ಮೊತ್ತದ ವಿಮಾ ಪಾಲಿಸಿ: 
ಎಲ್‌ಐ‌ಸಿಯಲ್ಲಿ ವಿಶೇಷವಾಗಿ ನೀವು 50 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪಾಲಿಸಿ ಖರೀದಿಸಿದರೆ ಇಂತಹ ಸಂದರ್ಭದಲ್ಲಿ ಐ‌ಟಿ‌ಆರ್ ದಾಖಲೆ ಅಗತ್ಯವಿರುತ್ತದೆ. ಇದು ನೀವು ಇಷ್ಟು ದೊಡ್ಡ ಮೊತ್ತದ ವಿಮೆಗೆ ಅರ್ಹರೋ/ಇಲ್ಲವೋ ಎಂಬುದನ್ನೂ ನಿರ್ಧರಿಸುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News