12 ವರ್ಷಕ್ಕೆ ಸಿನಿಮಾ.. 18ನೇ ವಯಸ್ಸಿಗೆ ಮದುವೆ, ಮಕ್ಕಳು, ವಿಚ್ಛೇದನ.. ಈಗ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ ಸ್ಟಾರ್ ನಟಿ ಈಕೆ!!

Famous Actress: ರಂಗುರಂಗಿನ ಪ್ರಪಂಚ ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಸಾಮಾನ್ಯ. ನಟ-ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾಗಗುವು, ಬ್ರೇಕಪ್‌ ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ.. ಇದೀಗ ಇಂತಹ ದುರಂತ ಜೀವನವನ್ನು ಕಂಡ ನಟಿಯ ಬಗ್ಗೆ ತಿಳಿದುಕೊಳ್ಳೋಣ.. 

Written by - Savita M B | Last Updated : Dec 24, 2024, 12:11 PM IST
  • ಸ್ಟಾರ್ ಹೀರೋ ಎದುರು ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡು ಪ್ರೇಕ್ಷಕರ ಹೃದಯದಲ್ಲಿ ಉಳಿದ ನಟಿ.
  • ಕೋಟಿಗಟ್ಟಲೆ ಸಂಪಾದನೆ ಮಾಡಿದರೂ ವೈಯಕ್ತಿಕ ಬದುಕು ನಿರೀಕ್ಷಿತ ಮಟ್ಟದಲ್ಲಿಲ್ಲ.
12 ವರ್ಷಕ್ಕೆ ಸಿನಿಮಾ.. 18ನೇ ವಯಸ್ಸಿಗೆ ಮದುವೆ, ಮಕ್ಕಳು, ವಿಚ್ಛೇದನ.. ಈಗ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ ಸ್ಟಾರ್ ನಟಿ ಈಕೆ!! title=

Shweta Tiwari: ಸ್ಟಾರ್ ಹೀರೋ ಎದುರು ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡು ಪ್ರೇಕ್ಷಕರ ಹೃದಯದಲ್ಲಿ ಉಳಿದ ನಟಿ.. ಕೋಟಿಗಟ್ಟಲೆ ಸಂಪಾದನೆ ಮಾಡಿದರೂ ವೈಯಕ್ತಿಕ ಬದುಕು ನಿರೀಕ್ಷಿತ ಮಟ್ಟದಲ್ಲಿಲ್ಲ.. ಹಾಗಾದ್ರೆ ಯಾರು ಆ ನಟಿ ಅಂತೀರಾ.. ಮುಂದೆ ಓದಿ.. 

12ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಇವರು ಸಣ್ಣಪುಟ್ಟ ಪಾತ್ರಗಳ ಮೂಲಕ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. 18 ನೇ ವಯಸ್ಸಿನಲ್ಲಿ ವಿವಾಹವಾದರು. 20ರ ಹರೆಯದ ವಯಸ್ಸಿನಲ್ಲಿ ಇಬ್ಬರು ಮಕ್ಕಳ ತಾಯಿಯಾದರು.. ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ತಾರೆಯಾಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ನಟಿ ಶ್ವೇತಾ ತಿವಾರಿ..

ಶ್ವೇತಾ ತಿವಾರಿ ಟಿವಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಗಿ ಕಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಜನಪ್ರಿಯತೆ ಗಳಿಸಿದರು. ಪ್ರೇರಣಾ ಶರ್ಮಾ ಕಿರುತೆರೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕೇವಲ 12 ನೇ ವಯಸ್ಸಿನಲ್ಲಿ ಉದ್ಯಮಕ್ಕೆ ಪ್ರವೇಶಿಸಿದರು.

ಇದನ್ನೂ ಓದಿ-ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!

ಚಿಕ್ಕ ವಯಸ್ಸಿನಲ್ಲಿ ಭೋಜ್‌ಪುರಿ ಚಿತ್ರಗಳೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಅವರು ಧಾರಾವಾಹಿಗಳು ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಾಗ ರಾಜಾ ಚೌಧರಿ ಅವರೊಂದಿಗಿನ ಸ್ನೇಹ ಪ್ರೀತಿಗೆ ತಿರುಗಿತು. ಬಳಿಕ ನಟಿ ತಮ್ಮ ಕುಟುಂಬದ ವಿರುದ್ಧ ಹೋಗಿ ರಾಜಾ ಚೌಧರಿಯನ್ನು ಮದುವೆಯಾದರು.. ಶ್ವೇತಾ ತಿವಾರಿ ರಾಜಾ ಚೌಧರಿ ಅವರನ್ನು ಮದುವೆಯಾದಾಗ ಅವರಿಗೆ ಕೇವಲ 18 ವರ್ಷ ವಯಸ್ಸಾಗಿತ್ತು ಮತ್ತು 20 ನೇ ವಯಸ್ಸಿನಲ್ಲಿ ಅವರು ತಾಯಿಯಾದರು. 

ಇದನ್ನೂ ಓದಿ-ತಿನ್ನಲು ಬಲು ಸಿಹಿ.. ಮಧುಮೇಹಕ್ಕೆ ರಾಮಬಾಣ ಈ ಪುಟ್ಟ ಹಣ್ಣು! ನಿಯಮಿತವಾಗಿ ತಿಂದ್ರೆ ಶುಗರ್‌ ಹೆಚ್ಚಾಗೋದೇ ಇಲ್ಲ.. 

ಮಗಳು ಪಾಲಕ್ ತಿವಾರಿ ಹುಟ್ಟಿದ ಕೂಡಲೇ ನಟಿ ತನ್ನ ಪತಿಗೆ ವಿಚ್ಛೇದನ ನೀಡಿದರು. ನಿರ್ದೇಶಕ ರಾಜಾ ಚೌಧರಿಯಿಂದ ವಿಚ್ಛೇದನ ಪಡೆದ ಹಲವು ವರ್ಷಗಳ ನಂತರ ನಟಿಯ ಜೀವನದಲ್ಲಿ ಪ್ರೀತಿ ಮತ್ತೆ ಚಿಗುರಿತು..
ಅವರು 2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ಈ ಮದುವೆಯ ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ ಮದುವೆಯಾಗಿ 6 ​​ವರ್ಷಗಳ ನಂತರ ಈ ಜೋಡಿಯೂ ಬೇರೆಯಾದರು.

ಎರಡು ಬಾರಿ ಪ್ರೀತಿಸಿ ಮೋಸ ಹೋಗಿದ್ದ ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಶ್ವೇತಾ ತಿವಾರಿ ಕೊನೆಯದಾಗಿ ರೋಹಿತ್ ಶೆಟ್ಟಿಯವರ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News